ಪ್ರಕೃತಿ ಬೆಳಗಾವಿ

*ಸಿಐಡಿ ನೋಟಿಸ್ ಉಲ್ಲಂಘನೆ ಮಾಡಿದರೆ ಕರವೇ ಜಿಲ್ಲಾಧ್ಯಕ್ಷ ಬಂಧನ ಸಾಧ್ಯತೆ*

ಪ್ರಕೃತಿ ಬೆಳಗಾವಿ ಸುದ್ದಿ : ಬೆಳಗಾವಿ : ಶಿವಂ ಅಸೋಸಿಯೇಟ್ಸ್ ಠೇವಣಿದಾರರಿಗೆ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶನಿವಾರ ಬೆಳಗ್ಗೆ ಕರವೇ ಪ್ರವೀಣ್ ಶೆಟ್ಟಿ ಬಣದ ಜಿಲ್ಲಾಧ್ಯಕ್ಷ ಆ‌ರ್. ಅಭಿಲಾಷ್ ಶಿವಾನಂದ ನೀಲಣ್ಣವರನಿಂದ ಉಡುಗೊರೆಯಾಗಿ ಪಡೆದ ಐಷಾರಾಮಿ ಕಾರು ನಾಳೆ ಮಾಳಮಾರುತಿ ಪೊಲೀಸ್ ಠಾಣೆಗೆ ತನಿಖೆಗೆ ಹಸ್ತಾಂತರಿಸುವಂತೆ ಅಧಿಕೃತವಾಗಿ ಸಿಐಡಿಯಿಂದ ನೋಟಿಸ್ ಜಾರಿ ಮಾಡಿದೆ.

ಕಳೆದ ಡಿಸೆಂಬರ್ ನಲ್ಲಿ ಬೆಳಗಾವಿ ಉತ್ಸವದ ವೇಳೆ ಕನ್ನಡದ ಖ್ಯಾತ ನಟರನ್ನು ಕರೆಸಿ ನೀಲಣ್ಣವರ ಪ್ರಾಯೋಜಕತ್ವದಲ್ಲಿ ದೊಡ್ಡ ಕಾರ್ಯಕ್ರಮ ಮಾಡಿದ್ದ ಆರ್. ಅಭಿಲಾಷ್ ಐಷಾರಾಮಿ ಕಾರು ಉಡುಗೊರೆ ಪಡೆದಿರುವ ಆರೋಪ ಎದುರಿಸುತ್ತಿರುವ ಹಿನ್ನೆಲೆಯಲ್ಲಿ ಐಷಾರಾಮಿ ಕಾರು ತನಿಖೆಗೆ ಒಳಪಡಿಸಬೇಕೆಂದು ಸಿಐಡಿ ಅಧಿಕಾರಿಗಳು ಸೂಚನೆ ನೀಡಿದ್ದಾರೆ.

ನೋಟಿಸ್‌ ಉಲ್ಲಂಘನೆ ಮಾಡಿದರೆ ಯಾವುದೇ ಕ್ಷಣದಲ್ಲಿ ಅಭಿಲಾಷ್ ಬಂಧನವಾಗುವ ಸಾಧ್ಯತೆ ಇದೆ ಎಂದು ಸಿಐಡಿ ಮೂಲಗಳು ತಿಳಿಸಿವೆ.**********************************

Back to top button