ಪ್ರಕೃತಿ ಬೆಳಗಾವಿ

*ಡೆತ್ ನೋಟ್ ಬರೆದು ನೇಣಿಗೆ ಶರಣಾದ ಯುವತಿ*

ಪ್ರಕೃತಿ ಬೆಳಗಾವಿ ಸುದ್ದಿ : ಬಳ್ಳಾರಿ : ಪತಿ ಹಾಗೂ ಅತ್ತೆಯ ಮಾನಸಿಕ ಕಿರುಕುಳ.

ಡೆತ್ ನೋಟ್ ಬರೆದು ನೇಣಿಗೆ ಶರಣಾದ ಯುವತಿ.

ಬಳ್ಳಾರಿ ಜಿಲ್ಲೆಯ ಕಂಪ್ಲಿ ಪಟ್ಟಣದಲ್ಲಿ ಘಟನೆ.

ಐಶ್ವರ್ಯ ( 24) ನೇಣಿಗೆ ಶರಣಾದ ಯುವತಿ.

ಪಶುಸಂಗೋಪನೆ ಇಲಾಖೆ ವೈದ್ಯೆ ಪ್ರದೀಪ್ ಕುಮಾರ್ ಐಶ್ವರ್ಯ ಳನ್ನ ಪ್ರೀತಿಸಿ ಮದುವೆಯಾಗಿದ್ದರು.

ಮದುವೆಯಾದ ದಿನದಿಂದ ಮಾನಸಿಕ ಕಿರುಕುಳ ಕೊಡುತ್ತಿದ್ದ ಅತ್ತೆ ಹಾಗೂ ಪತಿ ಪ್ರದೀಪ್ ಕುಮಾರ್.

ಅತ್ತೆ ನಿರಂತರ ಮಾನಸಿಕ ಕಿರುಕುಳ ಕೊಡುತ್ತಿದ್ರೂ ಪತ್ನಿ ಬೆಂಬಲಕ್ಕೆ ಬಾರದ ಪತಿ.

ಮಾನಸಿಕ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆಗೆ‌ ನಿರ್ಧಾರ ಮಾಡಿದ ಐಶ್ವರ್ಯ.

ತವರು ಮನೆಗೆ ಬಂದು ನೇಣಿಗೆ ಶರಣಾದ ಐಶ್ವರ್ಯ.

ಆತ್ಮಹತ್ಯೆಗೆ ಡೆತ್ ನೋಟ್ ನಲ್ಲಿ ಕಾರಣ ಬರೆದ ಐಶ್ವರ್ಯ.

ಕಂಪ್ಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು.

ಕಂಪ್ಲಿ ಪೊಲೀಸರಿಂದ ಪತಿ ಪ್ರದೀಪ್ ಕುಮಾರ್ ಹಾಗೂ ಈತನ ತಾಯಿ ಬಂಧನ.********************************

Back to top button