*ಎರಡೂ ಕಡೆ ‘ಕೈ’ ಹಿಡಿದ ಗ್ಯಾರಂಟಿ: ಸಚಿವ ಸತೀಶ್ ಜಾರಕಿಹೊಳಿ*

ಪ್ರಕೃತಿ ಬೆಳಗಾವಿ ಸುದ್ದಿ : ಬೆಂಗಳೂರು : ಕರ್ನಾಟಕದಲ್ಲಿ ಗ್ಯಾರಂಟಿ ಯೋಜನೆಗಳು ನಮ್ಮ ಕೈ ಹಿಡಿದಿವೆ. ಜನರ ಕಷ್ಟಕ್ಕೆ ನಮ್ಮ ಸರ್ಕಾರ ಸ್ಪಂದಿಸಿದೆ. ಹೀಗಾಗಿ ಬಾಗಲಕೋಟೆ ಹಾಗೂ ದಾವಣಗೇರಿಯಲ್ಲಿ ಉತ್ತಮ ಫಲಿತಾಂಶ ಬಂದಿದೆ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಾಗಲಕೊಟೆ ಹಾಗೂ ದಾವಣಗೇರೆ ಕ್ಷೇತ್ರದಲ್ಲಿ ನಾವೇ ಗೆಲ್ಲುತ್ತೇವೆ ಎಂದು ನಾವು ಮೊದಲೇ ಚುನಾವಣೆ ಮೊದಲೇ ಹೇಳಿದ್ದೇವು ನಾವು ಹೇಳಿದಂತೆ ಈ ಉಪಚುನಾವಣೆ ಫಲಿತಾಂಶ ಬಂದಿದೆ ಎಂದು ಹೇಳಿದರು.
ಅಹಿಂದ’ ಪ್ಲಾನ್ ಸಕ್ಸಸ್ : ಬಾಗಲಕೋಟೆ ಉಪಚುನಾವಣೆಯಲ್ಲಿ ‘ಅಹಿಂದ’ ಪ್ಲಾನ್ ಸಕ್ಸಸ್ ಆಗಿದೆ. ಅಲ್ಲಲಿ ಹರಿದು ಹಂಚಿ ಹೋಗಿದ್ದ ಮತಗಳನ್ನು ಒಂದೆಡೆ ಕಟ್ಟಿ ಹಾಕುವಲ್ಲಿ ‘ಅಹಿಂದ’ ಪ್ಲಾನ್ ಮಾಡಲಾಗಿತ್ತು.
ಅದರಂತೆ ಅಲ್ಲಿನ ಮತಗಳು ಬಿಜೆಪಿಗೆ ಹೋಗದಂತೆ ನಾವು ಮುತುವರ್ಜಿ ವಹಿಸಿ ಮೇಟಿ ಗೆಲುವಿಗೆ ಮಾಡಿದ ಪ್ಲಾನ್ ಸಕ್ಸಸ್ ಆಗಿದೆ. ಸುಮಾರು ಎರಡು ವಾರಗಳ ಕಾಲ ಕ್ಷೇತ್ರದಲ್ಲಿ ಮೊಕ್ಕಾಂ ಹೂಡಿ, ಅಹಿಂದ ವರ್ಗದ ಮತಗಳನ್ನು ಕಾಂಗ್ರೆಸ್ ಪರವಾಗಿ ಒಗ್ಗೂಡಿಸುವಲ್ಲಿ ಯಶಸ್ವಿಯಾಗಿದ್ದರಿಂದ ಉಮೇಶ ಮೇಟಿ ಗೆಲುವಿಗೆ ಸಹಕಾರಿಯಾಯಿತು ಎಂದು ಹೇಳಿದರು.*********************************






