ಪ್ರಕೃತಿ ಬೆಳಗಾವಿ
*ಸಿಬಿಎಸ್ಇ ಟಾಪರ್ಸ್ ಅಭಿನಂದನಾ ಸಮಾರಂಭ*

ಪ್ರಕೃತಿ ಬೆಳಗಾವಿ ಸುದ್ದಿ : ಬೆಳಗಾವಿ : 2025–26ನೇ ಸಾಲಿನ ಸಿಬಿಎಸ್ಇ ಟಾಪರ್ಸ್ ಅಭಿನಂದನಾ ಸಮಾರಂಭವು ವೆಣುಗ್ರಾಮ್ ನಾರ್ತ್ ಕರ್ನಾಟಕ ಸಹೋದಯ ಸಂಸ್ಥೆಯ ವತಿಯಿಂದ ಬೆಳಗಾವಿಯ ಖಾಸಗಿ ಹೊಟೆಲ್ ನಲ್ಲಿ ಮಂಗಳವಾರ ನಡೆಯಿತು.
ಸಿಬಿಎಸ್ಇ ಪರೀಕ್ಷೆಯಲ್ಲಿ ಸಾಧನೆ ಮಾಡಿದ ಬೆಳಗಾವಿಯ ಎಲ್ಲಾ ವಿದ್ಯಾರ್ಥಿಗಳನ್ನು ಈ ಸಂದರ್ಭದಲ್ಲಿ ಸನ್ಮಾನಿಸಿ, ಅಭಿನಂದಿಸಲಾಯಿತು. ವಿದ್ಯಾರ್ಥಿಗಳ ಈ ಅದ್ಭುತ ಸಾಧನೆ ಎಲ್ಲರಿಗೂ ಪ್ರೇರಣೆಯಾಗಲಿ ಎನ್ನುವ ಉದ್ಧೇಶದಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷೆ ದೇವಯಾನಿ ದೇಸಾಯಿ, ಕಾರ್ಯದರ್ಶಿ ಲಕ್ಷ್ಮೀ ಇಂಚಲ, ಖಜಾಂಚಿ ಪಂಢರಿನಾಥ ಖವಾರೆ, ಉಪ ಕಾರ್ಯದರ್ಶಿ ಡಾ. ಬಿ. ಅನಿಲಕುಮಾರ್ ಹಾಗೂ ಉಪಾಧ್ಯಕ್ಷೆ ವರ್ಷಾ ಗಾಯೋಂಕರ್ ಹಾಗೂ ಸಿಬಿಎಸ್ ಸಿ ಶಾಲೆಗಳ ಪ್ರಾಚಾರ್ಯರು ಉಪಸ್ಥಿತರಿದ್ದರು.******************************






