ಗೋಕಾಕ ಮಾಲದಿನ್ನಿ ಹಾಗೂ ಗುರ್ಲಾಪುರ ರೈತ ಹೋರಾಟಕ್ಕೆ ಬೆಂಬಲ – ಮಹೇಶ್ ಶೀಗಿಹಳ್ಳಿ ಮತ್ತು ಸಂಘಟನೆ…!!

ಪ್ರಕೃತಿ ಬೆಳಗಾವಿ ಸುದ್ದಿ : ರೈತರು ನಮ್ಮ ದೇಶದ ಬೆನ್ನೆಲಬಾಗಿ ಇದ್ದರೂ ಅದನ್ನು ಯಾವುದೆ ಸರಕಾರ ಬಂದ್ರೂ ರೈತರಿಗೆ ಅನ್ಯಾಯ ಆಗುವುದು ತಪ್ಪಿಲ್ಲ.
ಈ ನಿಟ್ಟಿನಲ್ಲಿ ರೈತರು ನ್ಯಾಯಕ್ಕಾಗಿ ವಿವಿಧ ರೀತಿಯಲ್ಲಿ ಹೋರಾಟ ಮಾಡುತ್ತಲೇ ಬಂದಿದ್ದಾರೆ ಇದನ್ನು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಕಬ್ಬು ಬೆಳೆಗಾರರಿಗೆ ನಿಗದಿದ ನ್ಯಾಯಯುತವಾದ ಬೆಲೆ ನಿಗದಿ ಮಾಡಿ ಪ್ರತಿ ಟನ್ ಕಬ್ಬಿಗೆ 3500/- ರೂಪಾಯಿ ನಿಗದಿ ಮಾಡಿ ರೈತರ ಕಣ್ಣೀರು ಒರೆಸುವ ಶಾಶ್ವತ ಪರಿಹಾರ ನೀಡಬೇಕು ಮತ್ತು ಸಕ್ಕರೆ ಕಾರ್ಖಾನೆಯ ಮಾಲೀಕರು ರೈತರ ಬಗ್ಗೆ ಕಾಳಜಿ ವಹಿಸಬೇಕು. ಮತ್ತು ಕೇಂದ್ರ ಸರ್ಕಾರ ರಾಜ್ಯ ಸರ್ಕಾರ ರೈತರಿಗೆ ರೈತ ವರ್ಗದ ಕುಟುಂಬಕ್ಕೆ ಮಕ್ಕಳ ವಿದ್ಯಾಭ್ಯಾಸ ಹಾಗೂ ಉದ್ಯೋಗಕ್ಕೆ ವಿಶೇಷವಾದ ಮೀಸಲು ಇಡಬೇಕು ಹಾಗಿದ್ದರೆ ಮಾತ್ರ ರೈತ ಕುಟುಂಬ ನೆಮ್ಮದಿಯ ಬದುಕು ಕಟ್ಟಿಕೊಳ್ಳಲು ಸಾದ್ಯ.
ರೈತರು ಬೆಳೆದ ಬೆಳೆ ತರಕಾರಿ ಕಬ್ಬು ಹಾಗೂ ಹಲವು ಎಲ್ಲಾ ಕೃಷಿ ಬೆಳೆಗಳಿಗೆ ಉತ್ತಮ ಬೆಲೆ ನೀಡುವಂತಾಗಲಿ ಎಂದು ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರಕ್ಕೆ ಕರ್ನಾಟಕ ಪರಿಶಿಷ್ಟ ಪಂಗಡ ವಾಲ್ಮೀಕಿ ರಾಜ್ಯ ಯುವ ಘಟಕ ರಾಜ್ಯಾದ್ಯಕ್ಷರು ಮಹೇಶ್ ಎಸ್ ಶೀಗಿಹಳ್ಳಿ ರವರು ಗೋಕಾಕ ನಲ್ಲಿ ನಡೆಯುತ್ತಿರುವ ಮಾಲದಿನ್ನಿ ಹಾಗೂ ಗುರ್ಲಾಪುರ ಹೋರಾಟದಲ್ಲಿ ತಿಳಿಸಿದ್ದಾರೆ.*********************************






