ಪ್ರಯಾಣ ದರ ಹೆಚ್ಚಳಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಯುವ ಕರ್ನಾಟಕ ಭೀಮ್ ಸೇನೆ ರಾಜ್ಯಾಧ್ಯಕ್ಷ ಪ್ರವೀಣ್ ಮಾದರ್…!!

ಪ್ರಕೃತಿ ಬೆಳಗಾವಿ ಸುದ್ದಿ : ಶಕ್ತಿ ಯೋಜನೆಯ ಮೂಲಕ ರಾಜ್ಯದ ಮಹಿಳೆಯರಿಗೆ ಉಚಿತ ಪ್ರಯಾಣದ ಅನುಕೂಲ ಮಾಡಿದ್ದ ಕಾಂಗ್ರೆಸ್ ಸರ್ಕಾರ ಶಕ್ತಿ ಯೋಜನೆಯಿಂದ ಯಾವುದೇ ನಷ್ಟವಿಲ್ಲ, ಯೋಜನೆ ಜಾರಿಗೆ ಬಂದ ನಂತರ ಸಾರಿಗೆ ನಿಗಮಗಳ ವಹಿವಾಟು ಹೆಚ್ಚಾಗಿದೆ ಎಂಬುದನ್ನು ಹೇಳುತ್ತಲೇ ನಿಗಮದ ನೌಕರರಿಗೆ ನೀಡಬೇಕಾದ ಸಾವಿರಾರು ಲಕ್ಷ ರೂಪಾಯಿಗಳ ಸಂಬಳವನ್ನು ಬಾಕಿ ಉಳಿಸಿಕೊಂಡಿತ್ತು. ಈಗ ಈ ಬಾಕಿ ತೀರಿಸಲು ಮರಳಿ ಜನರ ಜೇಬಿಗೆ ಕೈ ಹಾಕಲು ಸರ್ಕಾರ ಮುಂದಾಗಿದೆ. ಎಂದು ಯುವ ಕರ್ನಾಟಕ ಭೀಮ್ ಸೇನೆ ಯುವ ಶಕ್ತಿ ಸಂಘಟನೆಯ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಶ್ರೀಯುತ ಪ್ರವೀಣ್ ಆರ್ ಮಾದರ್ ಪತ್ರಿಕಾ ಹೇಳಿಕೆ ಮುಖಾಂತರ ರಾಜ್ಯ ಸರ್ಕಾರದ ಯಡವಟ್ಟಿನ ಒಪ್ಪಿಗೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈಗ ನಾವು ಯೋಚಿಸ ಬೇಕಿರುವುದು ಸರ್ಕಾರ ಜನರಿಗೆ ಉಚಿತವಾಗಿ ಕೊಟ್ಟಿದ್ದು ಏನು?
ಜನರು ಜಾತಿ, ಮತ್ತು ಹಣದ ಚುನಾವಣೆಗೆ ಒಗ್ಗಿ ಕೊಂಡಿರುವ ಮತ್ತು ಸರ್ಕಾರದ ನಿರ್ಧಾರಗಳಿಂದ ಆಗುವ ಕಷ್ಟ ನಷ್ಟಗಳಿಗೂ ತಮಗೂ ಯಾವುದೇ ಸಂಬಂಧವಿಲ್ಲ ಎನ್ನುವ ರೀತಿಯಲ್ಲಿ ಪ್ರತಿರೋಧ ವಿಲ್ಲದೇ ತಮ್ಮ ಪಾಡಿಗೆ ತಾವು ಸುಮ್ಮನಿರುವ ಈ ಕಾಲ ನಾವೇ ಆಯ್ಕೆ ಮಾಡಿಕೊಂಡಿರುವ ಖದೀಮ ರಾಜಕಾರಣಿಗಳಿಗೆ ಸುಗ್ಗಿ ಕಾಲದಂತಾಗಿದೆ. ಭ್ರಷ್ಟರು ಮತ್ತು ಸ್ವಾರ್ಥಿಗಳು ನಮ್ಮನಾಳುತ್ತಿರುವಾಗ ಒಳ್ಳೆಯದನ್ನು ನಿರೀಕ್ಷಿಸುವುದೇ ಒಂದು ರೀತಿಯ ಮೂರ್ಖ ತನ್ನವಾಗಿದೆ.
ಸರ್ಕಾರದ ಇಂತಹ ಜನ ವಿರೋಧಿ ಅದರಲ್ಲೂ ಸಾಮಾನ್ಯ ಜನರಿಗೆ ಹೆಚ್ಚು ಹೊರೆಯಾಗುವ ನಿರ್ಧಾರವನ್ನು ಯುವ ಕರ್ನಾಟಕ ಭೀಮ್ ಸೇನೆ ಖಂಡಿಸುತ್ತದೆ. ಮತ್ತು ಸರ್ಕಾರವು ಆಡಳಿತದ ಎಲ್ಲಾ ಹಂತಗಳಲ್ಲಿ ಪಾರದರ್ಶಕತೆಯನ್ನು ಕಾಪಾಡಿಕೊಂಡು ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಿ ಜನಪರ ಆಡಳಿತ ನೀಡಬೇಕು ಹಾಗು ಈ ಕೂಡಲೇ ಪ್ರಯಾಣ ದರ ಹೆಚ್ಚಿಸುವ ನಿರ್ಧಾರವನ್ನು ಹಿಂತೆಗೆದುಕೊಳ್ಳಬೇಕೆಂದು ರಾಜ್ಯ ಸರ್ಕಾರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿ ಮಾನ್ಯ ಸಾರಿಗೆ ಸಚಿವರು ರಾಮಲಿಂಗಾರೆಡ್ಡಿ ಹಾಗೂ ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ನವರಿಗೆ ಇಂತಹ ಆದೇಶ ಹಿಂದೆ ತೆಗೆದಕೋಳಬೇಕು ಇಲ್ಲವಾದಲ್ಲಿ ಕರ್ನಾಟಕ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡುತ್ತೇವೆಂದು ಆಗ್ರಹಿಸಿದರು.*************************






