ಮಾರಿಹಾಳ ಪೊಲೀಸ್ ಠಾಣೆ ಪೊಲೀಸರಿಂದ ಕೊಲೆ ಆರೋಪಿಗಳ ಬಂಧನ…!!

ಪ್ರಕೃತಿ ಬೆಳಗಾವಿ ಸುದ್ದಿ : ಬೆಳಗಾವಿ : ಮಾರಿಹಾಳ ಪೊಲೀಸ ಸ್ಟೇಷನ್ ಹದ್ದಿಯ ಹೊನ್ನಿಹಾಳ ಗ್ರಾಮದ ಹದ್ದಿ ಅಣ್ಣಪ್ಪ ಹೊರಕೇರಿ ಇವರ ಜಮೀನದಲ್ಲಿ ದಿನಾಂಕ -17/11/2024 ರಂದು 7-30 ಗಂಟೆಹಿಂದ ದಿನಾಂಕ -18/11/2024ರಂದು 6-00 ಗಂಟೆಯ ನಡುವಿನ ಅವಧಿಯಲ್ಲಿ ಸಿಮೆಂಟ್ ಇಟ್ಟಂಗಿಯಿಂದ ತಲೆಗೆ ಹೊಡೆದು ಭಾರೀ ಗಾಯಪಡಿಸಿ ಕೊಲೆ ಪ್ರಕರಣದಲ್ಲಿ ಕೊಲೆ ಮಾಡಿದ ಆರೋಪಿತರಾದ
1) ಶಿವಾನಂದ ನಿಂಗಪ್ಪ ಕರವಿನಕೊಪ್ಪ ವಯಸ್ಸು 28 ವರ್ಷ ಸಾ| ಮಾರಿಹಾಳ
2) ಆಕಾಶ ಗಂಗಪ್ಪ ಮ್ಯಾಗೋಟಿ, ವಯಸ್ಸು 21 ವರ್ಷ, ಸಾ॥ ಮಾರಿಹಾಳ
ಇವರಿಗೆ ವಿಚಾರಣೆಗೆ ಒಳಪಡಿಸಿದಾಗ ಕೊಲೆ ಮಾಡಿದ ಬಗ್ಗೆ ತದ್ದೊಪಿಕೊಂಡಿದಲ್ಲದೇ, ಕೃಷ್ಣಕ್ಕೆ ಬಳಸಿದ ವಸ್ತುಗಳನ್ನು ವಶಕ್ಕೆ ಪಡೆದುಕೊಂಡು ಈ ದಿವಸ ದಿನಾಂಕ: 30/11/2024 ರಂದು ದಸ್ತಗೀರ ಮಾಡಿ ಮಾನ್ಯ ನ್ಯಾಯಾಲಯಕ್ಕೆ ಹಾಜರಪಡಿಸಿದ್ದು ಇರುತ್ತದೆ.
ಸದರಿ ಪ್ರಕರಣದಲ್ಲಿನ ಆರೋಪಿತರ ಪತ್ತೆಗಾಗಿ ಗುರುರಾಜ ಕಲ್ಯಾಣಶೆಟ್ಟಿ ಪೊಲೀಸ ಇನ್ಸಪೆಕ್ಟರ ಇವರು ಎರಡು ಎರಡು ತಂಡಗಳನ್ನು ರಚಿಸಿ, ಕೊಲೆ ಮಾಡಿದ ಆರೋಪಿತರನ್ನು ಪತ್ತೆ ಕುರಿತು ತನಿಖೆಯನ್ನು ಚುರುಕುಗೊಳಿಸಿದಾಗ, ಇದರಲ್ಲಿ ಮೃತ ವ್ಯಕ್ತಿಯು ದಿನಾಂಕ 17/11/2024 ರಂದು ರಾತ್ರಿ 8-30 ಗಂಟೆಗೆ ಯರಗಟ್ಟಿಯಿಂದ ಒಂದು ಕೆ.ಎಸ್.ಆರ್.ಟಿ.ಸಿ ಬಸ್ ಹತ್ತಿ, ಬೆಳಗಾವಿಗೆ ಬರುತ್ತಿರುವಾಗ ಮೊದಗಾ ಗ್ರಾಮದಲ್ಲಿ ರಾತ್ರಿ 9-30 ಗಂಟೆಗೆ ನಡುಮಧ್ಯದಲ್ಲಿ ಬಸ್ಸಿನಿಂದ ಇಳಿದು. ರಾತ್ರಿ ವೇಳೆಯಲ್ಲಿ ಆತನು ಬೆಳಗಾವಿ ಹೋಗಲು ಮಾರಿಹಾಳ ಗ್ರಾಮದ ಹತ್ತಿರ ಬೆಳಗಾವಿ-ಬಾಗಲಕೋಟ ರಸ್ತೆಯಲ್ಲಿ ವಾಹನದ ದಾರಿ ಕಾಯುತ್ತಿರುವಾಗ ಇಬ್ಬರೂ ಆರೋಪಿತರು 1) ಶಿವಾನಂದ ನಿಂಗಪ್ಪ ಕರವಿನಕೊಪ್ಪ ವಯಸ್ಸು 28 ವರ್ಷ ಸಾ|| ಮಾರಿಹಾಳ 2) ಆಕಾಶ ಗಂಗಪ್ಪ ಮ್ಯಾಗೋಟಿ, ವಯಸ್ಸು 21 ವರ್ಷ, ಸಾ॥ ಮಾರಿಹಾಳ ಇವರಿಬ್ಬರೂ ಯಾಕೆ ನಿಂತಿದ್ದಿ ಎಂದು ಕೇಳಿದಾಗ ಮೃತ ನನಗೆ ಬೆಳಗಾವಿ ಶ್ರೀನಗರೆಗೆ ಡ್ರಾಪ ಮಾಡಿ ನಿಮಗೆ ಸರಾಯಿ ಕುಡಿಸುತ್ತೇನೆ ಹಣ ಕೊಡುತ್ತೇನೆ ಸಾವಿರ ರೂಪಾಯಿ ಕೊಡುತ್ತೇನೆ ಅಂತಾ ಹೇಳಿದಾಗ ಮೃತ ನಿಂಗನಗೌಡ ಸನಗೌಡರ ಈತನಿಗೆ ಬೆಳಗಾವಿ ಶ್ರೀನಗರೆಗೆ ಬಿಡುವುದಾಗಿ ಹೇಳಿ ತಮ್ಮ ಮೋಟಾರ ಸೈಕಲ ಮೇಲೆ ಕರೆದುಕೊಂಡು ಹೋಗಿ ಸರಾಯಿ ಕುಡಿದಾಗ ಮೃತ ನನ್ನ ಹತ್ತಿರ ದುಡ್ಡಿಲ್ಲ ಅಂತಾ ಹೇಳಿದ ಕ್ಷುಲ್ಲಕ ಕಾರಣಕ್ಕಾಗಿ ತಂಟೆಯಾಗಿ ಕುಡಿದ ನಶೆಯಲ್ಲಿ ಸಿಟ್ಟಾಗಿ ಆರೋಪಿತರು ಅವನಿಗೆ ಕೊಲೆ ಮಾಡುವ ಉದ್ದೇಶದಿಂದ ತಮ್ಮ ಮೋಟಾರ್ ಸೈಕಲ್ ಮೇಲಿಂದ ಹೊನ್ನಿಹಾಳ ಗ್ರಾಮದ ಹದ್ದಿ ಅಣ್ಣಪ್ಪ ಹೊರಕೇರಿ ಇವರ ಜಮೀನದಲ್ಲಿ ಕರೆದುಕೊಂಡು ಹೋಗಿ ಅವನಿಗೆ ಕೈಯಿಂದ ಹೊಡೆದು, ಕೆಳಕ್ಕೆ ಕೆಡವಿ, ಸಿಮೆಂಟ್ ಇಟ್ಟಂಗಿಯಿಂದ ತಲೆಯ ಮೇಲೆ ಎತ್ತಿ ಹಾಕಿ ಭಾರೀ ಗಾಯಪಡಿಸಿ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದರಿಂದ ಆರೋಪಿತರ ತಾಬಾದಿಂದ ಕೃಷ್ಣಕ್ಕೆ ಬಳಸಿದ ಮೋಟಾರ ಸೈಕಲನ್ನು ಜಪ್ತ ಮಾಡಿ ವಶಕ್ಕೆ ಪಡೆದುಕೊಂಡಿದ್ದು ಇರುತ್ತದೆ.
ಸದರಿ ಕೊಲೆ ಪ್ರಕರಣವನ್ನು ಭೇದಿಸಿ ಮೃತನ ಗುರುತನ್ನು ಪತ್ತೆ ಮಾಡಿ ಹಾಗೂ ಆರೋಪಿತರನ್ನು ದಸ್ತಗಿರಿ ಮಾಡುವ ಕಾರ್ಯಾಚರಣೆಯಲ್ಲಿ ಶ್ರೀ ಯಡಾಮಾರ್ಟಿನ ಮಾರ್ಬನ್ಯಾಂಗ.
ಮಾನ್ಯ ಪೊಲೀಸ ಆಯುಕ್ತರು, ಶ್ರೀ ರೋಹನ ಜಗದೀಶ, ಡಿಸಿಪಿ (ಕಾ&ಸು), ಶ್ರೀ ನಿರಂಜನ ರಾಜೆ ಅರಸ, ಡಿಸಿಪಿ (ಅಪರಾಧ ಮತ್ತು ಸಂಚಾರ), ಶ್ರೀ ಗಂಗಾಧರ ಬಿ ಎಮ್ ಎಸಿಪಿ ಬೆಳಗಾವಿ ಗ್ರಾಮೀಣ ಉಪವಿಭಾಗ ಬೆಳಗಾವಿ ರವರ ಮಾರ್ಗದರ್ಶನದಲ್ಲಿ ಶ್ರೀ ಗುರುರಾಜ ಕಲ್ಯಾಣಶೆಟ್ಟಿ ಪೊಲೀಸ ಇನ್ಸಪೆಕ್ಷರ ಇವರ ನೇತೃತ್ವದಲ್ಲಿ ಶ್ರೀ ಮಂಜುನಾಥ, ಪಿಎಸ್‌ಐ(ಕಾ&ಸು), ಶ್ರೀ ಚಂದ್ರಶೇಖರ, ಸಿ ಪಿಎಸ್‌ಐ-2 ಹಾಗೂ ಸಿಬ್ಬಂದಿ ಜನರಾದ ಸಿಎಚ್ ಶ್ರೀ ಬಿ ಎನ್ ಬಳಗನ್ನವರ, ಬಿ ದ ಕಡ್ಡಿ, ಎಮ್ ಬಿ ಬಡಿಗೇರ, ಸಿಪಿಸಿ ಹನಮಂತ ಯರಗುದ್ರಿ, ರಾಮಕೃಷ್ಣ ತಳವಾರ, ಚನ್ನಪ್ಪಾ ಹುಣಚ್ಯಾಳ, ರೇವಣಸಿದ್ದ ಬಳುಂಡಗಿ, ತಾಂತ್ರೀಕ ವಿಭಾಗದ ಸಿಬ್ಬಂದಿ ರಮೇಶ ಅಕ್ಕಿ, ಮಹಾದೇವ ಇವರು ಕಾರ್ಯಾಚರಣೆಯಲ್ಲಿ ಬಾಗಿಯಾಗಿರುತ್ತಾರೆ. ಕಾರ್ಯಾಚರಣೆಯಲ್ಲಿ ಬಾಗಿಯಾದ ಅಧಿಕಾರಿ/ಸಿಬ್ಬಂದಿಗಳಿಗೆ ಮಾನ್ಯ ಪೊಲೀಸ ಆಯುಕ್ತರು ಬೆಳಗಾವಿ ನಗರ ರವರು ಶ್ಲಾಘಿಸಿರುತ್ತಾರೆ.***********************






