ಪ್ರಕೃತಿ ಬೆಳಗಾವಿ
ಸಿಎಂ, ಕೆಪಿಸಿಸಿ ಅಧ್ಯಕ್ಷ ಆಗುವ ಆಸೆ ಇದೆ, ಆದರೆ ಹೈಕಮಾಂಡ್ ನಿರ್ಧಾರವೇ ಅಂತಿಮ: ಸಚಿವ ಸತೀಶ್ ಜಾರಕಿಹೊಳಿ…!!

ಪ್ರಕೃತಿ ಬೆಳಗಾವಿ ಸುದ್ದಿ : ಹಾವೇರಿ : ಸಿಎಂ, ಕೆಪಿಸಿಸಿ ಅಧ್ಯಕ್ಷ ಆಗುವ ಆಸೆ ಇದೆ. ಆದರೆ ಅಂತಿಮವಾಗಿ ಈ ಕುರಿತು ಹೈಕಮಾಂಡ್ ತಿರ್ಮಾನಿಸುತ್ತದೆ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಅವರು ಹೇಳಿದರು.
ಶಿಗ್ಗಾವಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನನಗೂ ಸಿಎಂ ಆಗಲು ಹಾಗೂ ಕೆಪಿಸಿಸಿ ಅಧ್ಯಕ್ಷನಾಗಲು ಆಸೆ ಇದೆ. ಆದರೆ ಅಂತಿಮವಾಗಿ ಪಕ್ಷ ತೀರ್ಮಾನ ಮಾಡುತ್ತದೆ. ಹಿಂದೆ ಸಿಎಂ ಆಗುತ್ತಾರೆ ಅಂತ ನನ್ನ ಹೆಸರು ಓಡಾಡುತ್ತಿತ್ತು. ಈಗ ಅಧ್ಯಕ್ಷ ಆಗುತ್ತಾರೆ ಅಂತ ನನ್ನ ಹೆಸರು ಓಡಾಡುತ್ತಿದೆ.
ಎಷ್ಟೇ ಹೆಸರು ಓಡಾಡಿದರು ಸಹ ನಮ್ಮ ಉತ್ಸಾಹ ಅಷ್ಟೇ. ಇದಕ್ಕೆಲ್ಲ ಆದರೆ ಪಕ್ಷದ ತೀರ್ಮಾನ ಅಂತಿಮವಾಗಿರುತ್ತದೆ. ನಾವೆಲ್ಲರೂ ಕಾದು ನೋಡಬೇಕು ಅಷ್ಟೇ. ಈ ವಿಚಾರವಾಗಿ ನಾನು ಹೈಕಮಾಂಡ್ ಗೆ ಅಗಲಿ ಇನ್ಯಾರಿಗೋ ಅಗಲಿ ಯಾವುದೇ ಒತ್ತಡ ಹಾಕಿಲ್ಲ. ಚುನಾವಣೆಯಲ್ಲಿ ಗೆಲ್ಲಿಸಿದ್ದೇವೆ ಅದರ ತೃಪ್ತಿ ನಮಗಿದೆ. ಮಂತ್ರಿಯಾಗಿ ಕೆಲಸ ಮಾಡ್ತಾ ಇದ್ದೇವೆ ತೃಪ್ತಿ ಇದೆ ಎಂದು ಸ್ಪಷ್ಟನೆ ನೀಡಿದರು.************************






