ಪ್ರಕರಣ ಸಿಬಿಐ ತನಿಖೆಗೆ ವಹಿಸಲು ಒತ್ತಾಯ, ಮಾನವ ಸರಪಳಿ ನಿರ್ಮಿಸಿ ಸಚಿವೆ ಲಕ್ಷ್ಮೀ ವಿರುದ್ಧ ಗುಡುಗಿದ ಬಿಜೆಪಿ ಕಾರ್ಯಕರ್ತರು…!!

ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಬೃಹತ್ ಪ್ರತಿಭಟನೆ…
ಪ್ರಕೃತಿ ಬೆಳಗಾವಿ ಸುದ್ದಿ : ಬೆಳಗಾವಿ : ಸರ್ಕಾರಿ ನೌಕರ ರುದ್ರೇಶ್ ಆತ್ಮಹತ್ಯೆ ಖಂಡನೀಯ, ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಲಿ, ಈ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕೆಂದು ಆಗ್ರಹಿಸಿ ಬಿಜೆಪಿ ಕಾರ್ಯಕರ್ತರು ಬೃಹತ್ ಪ್ರತಿಭಟನೆ ನಡೆಸಿದರು.
ಇಲ್ಲಿನ ರಾಣಿ ಚನ್ನಮ್ಮ ವೃತ್ತದಲ್ಲಿ ಗುರುವಾರ ಬಿಜೆಪಿ ಕಾರ್ಯಕರ್ತರು ಮಾನವ ಸರಪಳಿ ನಿರ್ಮಿಸಿ ಹೆಬ್ಬಾಳಕರ್ ವಿರುದ್ಧ ಗುಡುಗಿದರು. ಬಳಿಕ, ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. ಲಕ್ಷ್ಮೀ ಹೆಬ್ಬಾಳ್ಕರ್ ಆಪ್ತ ಸೋಮು ಮೇಲೆ ಆರೋಪ ಬಂದಿದೆ ಸರ್ಕಾರ ಶೀಘ್ರವೇ ಲಕ್ಷ್ಮೀ ಹೆಬ್ಬಾಳ್ಕರ್ ಸಂಪುಣದಿಂದ ಕೈ ಬೀಡಬೇಕು. ಈ ಪ್ರಕರಣ ಸರ್ಕಾರಕ್ಕೆ ಗಂಭೀರವಾಗಿ ಪರಿಗಣಿಸಿ ಸಿಬಿಐ ವಹಿಸಿ ರುದ್ರೇಶ್ ಸಾವಿಗೆ ಸರ್ಕಾರ ನ್ಯಾಯ ಕೋಡಿಸಬೇಕು ಒತ್ತಾಯಿಸಿದರು.”
“ಸಚಿವೆ ಲಕ್ಷ್ಮೀ ರಾಜೀನಾಮೆ ನೀಡುವರೆಗೂ ನಾವು ರಾಜ್ಯಾದ್ಯಂತ ಹೋರಾಟ ಮಾಡುತ್ತೇವೆ. ಎಸ್ ಡಿಎ ನೌಕರ ರುದ್ರೇಶ್ ಎಡವನ್ನವರ್ ತನಿಖೆಯನ್ನು ದಿಕ್ಕು ತಪ್ಪಿಸುವ ಹುನ್ನಾರ ನಡೆದಿದೆ. ಕುಟುಂಬಸ್ಥರು ಹೆಬ್ಬಾಳಕರ್ ಹೆಸರಿನಲ್ಲಿ ಕಣ್ಣೀರಿನ ಕೈ ತೊಳೆಯುತ್ತಿದೆ ಆ ಕುಟುಂಬಕ್ಕೆ ಸೂಕ್ತ ನ್ಯಾಯ ಸಿಗಬೇಕಿದೆ. ಆತ್ಮಹತ್ಯೆ ಆಗಿ ಮೂರು ದಿನಗಳೂ ಕಳೆದರೂ ಪೊಲೀಸ್ ರು ಆರೋಪಿಗಳನ್ನು ಬಂಧಿಸಿಲ್ಲ, ತಕ್ಷಣವೇ ಬಂಧಿಸಿ ನಿಜಾಂಶ ಕಕ್ಕಿಸಬೇಕು ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ವಿಪಕ್ಷದ ಉಪನಾಯಕ ಅರವಿಂದ ಬೆಲ್ಲದ ಮಾತನಾಡಿ, ನೌಕರ ರುದ್ರೇಶ್ ಎಡವನ್ನವರ್ ಆತ್ಮಹತ್ಯೆ ಹಿಂದೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಆಪ್ತ ಸೋಮು ಹೆಸರು ತಳುಕು ಹಾಕಿಕೊಂಡಿದೆ. ಮೃತ ವ್ಯಕ್ತಿ ಕೂಡ ಆತನ ಹೆಸರು ಉಲ್ಲೇಖ ಮಾಡಿದ್ದಾರೆ. ಸರ್ಕಾರ ಈ ವಿಷಯದಲ್ಲಿ ಸಾವಿನ ಜೊತೆ ಚೆಲ್ಲಾಟ ಆಡುತ್ತಿದೆ, ಕೂಡಲೇ ಲಕ್ಷ್ಮೀ ರಾಜೀನಾಮೆ ಕೊಡಬೇಕು. ಇಲ್ಲವಾದರೂ ಇಲ್ಲಾದರೆ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಸರ್ಕಾರಕ್ಕೆ ಎಚ್ಚರಿಕೆ ರವಾನಿಸಿದರು.
ರುದ್ರೇಶ್ ಎಡವನ್ನವರ ಆತ್ಮಹತ್ಯೆಯ ತನಿಖೆಯ ದಿಕ್ಕು ತಪ್ಪಿಸುವ ಹುನ್ನಾರ ನಡೆಸಿದೆ ಎನ್ನುವ ಶಂಕೆ ವ್ಯಕ್ತವಾಗುತ್ತಿದೆ. ಪಾರದರ್ಶಕವಾದ ತನಿಖೆ ನಡೆಸಬೇಕು. ಕುಟುಂಬಕ್ಕೆ ನ್ಯಾಯ ಸಿಗಬೇಕು ಎಂದರು.
ಸಾಕ್ಷ್ಯಗಳ ನಾಶ ಮಾಡಿ ಪ್ರಕರಣದ ದಿಕ್ಕು ತಪ್ಪಿಸುವ ಯತ್ನದಲ್ಲಿರುವ ಪ್ರಭಾವಿ ಸಚಿವೆ ಲಕ್ಷ್ಮೀ ಹೆಬ್ಬಾಳಕರನ್ನು ಸಂಪುಟದಿಂದ ವಜಾಗೊಳಿಸಲು ನಮ್ಮ ಆಗ್ರಹವಾಗಿದೆ ಎಂದು ಹೇಳಿದರು”
“ಮಾಜಿ ಶಾಸಕ ಸಂಜಯ ಪಾಟೀಲ್ ಮಾತನಾಡಿ, ರುದ್ರೇಶ್ ಆತ್ಮಹತ್ಯೆಯಾಗಿ ಮೂರು ದಿನ ಕಳೆದಿದೆ. ರುದ್ರೇಶ್ ಲಿಂಗಾಯತ ಸಮಾಜದವರು, ಹೆಬ್ಬಾಳ್ಕರ್ ಅವರು ಪಂಚಮಸಾಲಿ ಸಮಾಜದ ಹೋರಾಟದಲ್ಲಿ ಮಂಚೂಣಿಯಲ್ಲಿದ್ದರು. ಪ್ರಭಾವಿ ಸಚಿವರು. ಎರಡೂ ದಿನ ಯಾಕೆ ಮೌನವಾಗಿದ್ದರು ಹೆಬ್ಬಾಳ್ಕರ್ ಎಂದು ಪ್ರಶ್ನಿಸಿದರು.
ಎರಡೂ ದಿನದಲ್ಲಿ ರುದ್ರೇಶ್ ಆತ್ಮಹತ್ಯೆ ಮಾಡಿಕೊಂಡು ಸಾಕ್ಷಿ ನಾಶಪಡಿಸುವ ಕೆಲಸವನ್ನು ಮಾಡಿದ ಬಳಿಕ ಲಕ್ಷ್ಮೀ ಹೆಬ್ಬಾಳ್ಕರ್ ಅವರು ರುದ್ರೇಶ್ ಗೆ ನ್ಯಾಯ ಸಿಗಬೇಕು ಎನ್ನುವ ಹೇಳಿಕೆ ನೀಡಿದ್ದಾರೆ. ಇದು ದೊಡ್ಡ ಹಾಸ್ಯಾಸ್ಪದ ಎಂದರು.
ರುದ್ರೇಶ್ ಮೊಬೈಲ್ ಕಾಣೆಯಾಗಿದೆ. ಹೆಬ್ಬಾಳ್ಕರ್ ಗೆ ಅಧಿಕಾರ ಆಸೆ ಇಲ್ಲದೆ ಇದ್ದರೇ ರಾಜೀನಾಮೆ ಕೊಟ್ಟು ತನಿಖೆ ಎದುರಿಸಿ ಹೆಬ್ಬಾಳ್ಕರ್ ಎರಡೂ ದಿನ ಮೌನವಿದ್ದಿದ್ದು ಯಾಕೆ ? ಸರಕಾರದ ಕಡೆಯಿಂದ ರುದ್ರೇಶ್ ಆತ್ಮಹತ್ಯೆಗೆ ನ್ಯಾಯ ಸಿಗುವ ಭರವಸೆ ಇಲ್ಲ ಎಂದರು.
ಜೆಡಿಎಸ್ ಜಿಲ್ಲಾಧ್ಯಕ್ಷ ಶಂಕರ ಮಾಡಲಗಿ ಮಾತನಾಡಿ, ರುದ್ರಣ್ಣ ತಹಶಿಲ್ದಾರ ಕಚೇರಿಗೆ ಹೋಗಿ ಅವರ ಕಚೇರಿಯ ವಾಟ್ಸಪ್ ಗ್ರೂಪ್ ನಲ್ಲಿ ಮೆಸೇಜ್ ಹಾಕಿ ಆತ್ಮಹತ್ಯೆ ಮಾಡಿಕೊಂಡರು. ಆರೋಪಿಗಳನ್ನು ಇಲ್ಲಿಯವರೆಗೂ ಪೊಲೀಸರು ಬಂಧಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಬಿಜೆಪಿ ಗ್ರಾಮೀಣ ಜಿಲ್ಲಾಧ್ಯಕ್ಷ ಸುಭಾಷ್ ಪಾಟೀಲ್, ನಗರ ಘಟಕದ ಅಧ್ಯಕ್ಷೆ ಗೀತಾ ಸುತಾರ, ಮಾಜಿ ಶಾಸಕ ಅರವಿಂದ ಪಾಟೀಲ್, ಬಿಜೆಪಿ ಮುಖಂಡರಾದ ಮುರುಘೇಂದ್ರಗೌಡ ಪಾಟೀಲ್, ರುದ್ರಣ್ಣ ಚಂದರಗಿ, ಡಾ. ಸೋನಾಲಿ ಸರ್ನೋಬತ್, ಸವಿತಾ ಗುಡ್ಡಕಾಯು, ಜೆಡಿಎಸ್ ಮುಖಂಡ ಮಾರುತಿ ಅಷ್ಟಗಿ, ಶಂಕರ ಮಾಡಲಗಿ, ನ್ಯಾಯವಾದಿ ವಿನೋದ ಪಾಟೀಲ, ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.”***********************






