ಪ್ರಕೃತಿ ಬೆಳಗಾವಿ

ಬೆಳಗಾವಿ ಜಿಲ್ಲೆಯಲ್ಲಿ ಮಳೆ ಹೆಚ್ಚುತ್ತಿದ್ದು ಫೈನಾನ್ಸ್ ಸಂಘಗಳ ಸಾಲ ತೀರಿಸಲು ಮೂರು ತಿಂಗಳು ಕಾಲಾವಕಾಶ ನೀಡುವಂತೆ ಒತ್ತಾಯಿಸಿ, ಯುವ ಕರ್ನಾಟಕ ಭೀಮ್ ಸೇನೆಯಿಂದ ಮನವಿ…!!

ಪ್ರಕೃತಿ ಬೆಳಗಾವಿ ಸುದ್ದಿ : ಬೆಳಗಾವಿ ಜಿಲ್ಲೆಯಾದ್ಯಂತ ಖಾನಾಪುರ ಸವದತ್ತಿ ಕಿತ್ತೂರು ಬೈಲಹೊಂಗಲ ಕೆಲವು ದಿನಗಳಿಂದ ಅತಿ ಹೆಚ್ಚು ಮಳೆ ಆಗುವದರಿಂದ ಕೂಲಿ ಕೆಲಸವಿಲ್ಲದೆ, ಜನರು ಪರದಾಡುತ್ತಿದ್ದೇವೆ. ನಾವು ಸ್ವ-ಸಹಾಯ ಸಂಘಗಳಿಂದ ಸಾಲ ಪಡೆದಿದ್ದು, ಈಗ ಆ ಸಾಲ ತೀರಿಸಲು ಹಣದ ಸಮಸ್ಯೆಯಿಂದ ತುಂಬಾ ತೊಂದರೆಯಾಗುತ್ತಿದೆ.

ಆದರೆ ಸ್ವ-ಸಹಾಯ ಸಂಘದ (ಫೈನಾನ್ಸ್) ಜನರು ಬಂದು ನಮ್ಮ ಮನೆಯ ಜನರಿಗೆ ಅಂದರೆ ಹೆಣ್ಣು ಮಕ್ಕಳಿಗೆ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿ ತೊಂದರೆ ಕೊಡುತ್ತಿದ್ದಾರೆ. ಬೆಳಗಾವಿ ಜಿಲ್ಲೆಯ ಸಾಕಷ್ಟು ರೈತರು ಊರುಗಳಲ್ಲಿ ಇದೆ ರೀತಿ ಪ್ರಕರಣಗಳು ಹೆಚ್ಚುತ್ತಿದ್ದು. ಕೆಲವು ಫೈನಾನ್ಸ್ ದಿಂದ ತುಂಬಾ ಜನರು ಸಾಲು ವಿಚಾರವಾಗಿ ನೇಣು ಬಿಗಿದುಕೋಂಡು ತಮ್ಮ ಜೀವವನ್ನು ಕಳೆದುಕೊಳ್ಳುತ್ತಿದ್ದಾರೆ, ಫೈನಾನ್ಸ್ ದೌರ್ಜನ್ಯ ನಡೆಸಿ ವಸುಲಿ ಮಾಡುತ್ತಿದ್ದಾರೆ.

ಅದಕೆ ಹಗಲಿ ರಾತ್ರಿ ಎನ್ನದೆ ದಿನನಿತ್ಯ ತೋದರೆ ನೀಡುವರ ಮೇಲೆ ಕೊಟ್ಟು ನಿಟ್ಟಿನ ಕ್ರಮ ಕೈಗೊಳ್ಳಬೇಕು, ನಮ್ಮ ಸವದತ್ತಿ ತಾಲೂಕಿನ ಏಣಿಗಿ ಗ್ರಾಮದ ಜನರಿಗೆ ಕೆಲಸವಿಲ್ಲದೆ ನಿರ್ಜೀವಿತವಾಗಿ ಮನೆಯಲ್ಲಿ ಕುಳಿತ ಕಾರಣದಿಂದ ಸಂಘ (ಫೈನಾನ್ಸ್) ಸಾಲದ ಹಣವನ್ನು ತುಂಬಲು ಸಾಧ್ಯವಾಗುತ್ತಿಲ್ಲ ಆದಕಾರಣ ಏಣಗಿ ಗ್ರಾಮದ ಜನರು ನಮಗೆ ಸಂಘದ ಸಾಲ ತುಂಬಲು ಸ್ವಲ್ಪ ಸಮಯದ ಕಾಲಾವಕಾಶ ಅಂದರೆ 2, 3 ತಿಂಗಳವರೆಗೆ ಕಾಲಾವಕಾಶವನ್ನು ಮಾಡಿಕೊಡಬೇಕೆಂದು ಮಾನ್ಯ ಜಿಲ್ಲಾಧಿಕಾರಿಗಳಿಗೆ, ಯುವ ಕರ್ನಾಕಟ ಭೀಮ ಸೇನೆಯ ಸಂಸ್ಥಾಪಕ ರಾಜ್ಯಾಧ್ಯಕ್ಷ ಪ್ರವೀಣ್ ಆರ್ ಮಾದರ್ ಮಾತನಾಡಿ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಯುವ ಕರ್ನಾಟಕ ಭೀಮ್ ಸೇನೆ ಯುವ ಶಕ್ತಿ ಸಂಘಟನೆಯ ರಾಜ್ಯ ಉಪಾಧ್ಯಕ್ಷ ಅಕ್ಷಯ್ ಕೆ ಆರ್, ರಾಜ್ಯ ಪ್ರಧಾನ ಕಾರ್ಯದರ್ಶಿ ಮಲಪ್ಪ ಅಕ್ಕಮಡ್ಡಿ, ಧಾರವಾಡ ಜಿಲ್ಲಾ ಅಧ್ಯಕ್ಷರಾದ, ಹರೀಶ್ ಪುಜಾರ ಧಾರವಾಡ ಜಿಲ್ಲಾ ಉಪಾಧ್ಯಕ್ಷರಾದ, ಚೇತನ್ ಜಾದವ, ಧಾರವಾಡ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾದ, ವಿನಾಯಕ ಹೋನ್ನಾಪೂರ. ಹಾಗೂ ಸವದತ್ತಿ-ಖಾನಾಪುರ ಏಣಗಿ ಗ್ರಾಮದ ಉಪಸ್ಥಿತರಿದ್ದರು.*******************

Back to top button