ಪ್ರಕೃತಿ ಬೆಳಗಾವಿ

ಚಿವುಟಿಗುಂಡಿ ಗ್ರಾಮದ ರಸ್ತೆ ,ಎಸಿ ಸಮುದಾಯದ ಸ್ಮಶಾನ ಭೂಮಿ ಅತಿಕ್ರಮಣ ವಿರುದ್ಧ ಯುವ ಕರ್ನಾಟಕ ಭೀಮ್ ಸೇನೆಯಿಂದ ಬೃಹತ್ ಪ್ರತಿಭಟನೆ…!!

ಪ್ರಕೃತಿ ಬೆಳಗಾವಿ ಸುದ್ದಿ : ಬೈಲಹೊಂಗಲ ತಾಲೂಕಿನ ಚಿವಟಗುಂಡಿ ಗ್ರಾಮದ ಸರ್ವೆ ನಂ. 72 ಮತ್ತು 73 ಎಸ್.ಸಿ ಸಮುದಾಯಕ್ಕೆ ಸ್ಮಶಾನ ಭೂಮಿ 2007 ರಲ್ಲಿ ಮಂಜೂರಾಗಿದ್ದು, ಅಲ್ಲಿಯ ಅಕ್ಕ ಪಕ್ಕದ ಜನರು ಸ್ಮಶಾನ ಭೂಮಿಯನ್ನು ಅತಿಕ್ರಮಣ ಮಾಡಿ ಉಳಿಮೆ ಮಾಡುತ್ತಿದ್ದಾರೆ. ಹಾಗೂ ಸ್ಮಶಾನ ಭೂಮಿಗೆ ಹಾದು ಹೋಗುವ ರಸ್ತೆಯನ್ನು ಕೂಡ ದೌರ್ಜನ್ಯ ದಬ್ಬಾಳಿಕೆ, ನಡೆಸಿ ಈ ರಸ್ತೆ ನನ್ನ ಭೂಮಿಗೆ ಸಂಬಂಧಿಸಿದೆ ಎಂದು ಹಲವಾರು ಭಾರಿ ತಕರಾರು ಮಾಡುತ್ತಾ, ರಸ್ತೆ ಮಾಡುವುದನ್ನು ವಿರೋಧಿಸಿದ್ದಾರೆ.

ಇದರಿಂದ ಎಸ್.ಸಿ ಸಮುದಾಯದ ಜನರಿಗೆ 15 ವರ್ಷಗಳಿಂದ ರಸ್ತೆ ಇರುವುದಿಲ್ಲ. ಹಾಗೂ ರೈತಾಪಿ ವರ್ಗದ ಜನರು ತಮ್ಮ ಭೂಮಿ ಉಳುಮೆ ಮಾಡಲು ಕೂಡಾ ಸರಿಯಾದ ಸುಗಮ ಸಂಚಾರವಿಲ್ಲದೆ ಮಳೆಗಾಲದಲ್ಲಿ ಪರೆದಾಡುವ ವ್ಯವಸ್ಥೆ ಉಂಟಾಗಿದೆ. ಇದರಿಂದ ಪರಿಶಿಷ್ಟ ಜಾತಿ ಜನರಿಗೆ ಹಾಗೂ ರೈತಾಪಿ ವರ್ಗದ ಜನರಿಗೆ ಬಹಳಷ್ಟು ಅಕ್ಕ ಪಕ್ಕದ ಜನರು ಅನ್ಯಾಯ ಮಾಡುತ್ತಾ ಬಂದಿರುತ್ತಾರೆ.

ಆದ್ದರಿಂದ ಸ್ಮಶಾನ ಭೂಮಿ ಹಾಗೂ ರಸ್ತೆ ಸಂಚಾರವನ್ನು ಅಡ್ಡಿ ಪಡಿಸುವವರ ಮೇಲೆ ಪೋಲಿಸ ಇಲಾಖೆ ಪರಿಶಿಷ್ಟ ಜಾತಿ & ಪರಿಶಿಷ್ಟ ಪಂಗಡ ದೌರ್ಜನ್ಯ ಕಾಯ್ದೆ ಅನುಸಾರ ಅಂತವರ ಮೇಲೆ ಕೇಸು ದಾಖಲಿಸಿ ಸುಗಮ ಸಂಚಾರಕ್ಕೆ ಸ್ಮಶಾನ ಭೂಮಿಗೆ ಅನುಕೂಲ ಮಾಡಿಕೊಡಬೇಕು ಹಾಗೂ ಸ್ಮಶಾನ ಭೂಮಿ ಸರ್ವೆ (ಹದ್ದುಬಸ್ತ) ಮಾಡಿ ಎಸ್.ಸಿ ಸಮುದಾಯಕ್ಕೆ ನ್ಯಾಯ ಒದಗಿಸಕೊಡಬೇಕೆಂದು ಮಾದ್ಯಮ ಮುಂದೆ ಯುವ ಕರ್ನಾಟಕ ಭೀಮ್ ಸೇನೆ, ಯುವ ಶಕ್ತಿ ಸಂಘಟನೆಯ ಸಂಸ್ಥಾಪಕ ರಾಜ್ಯಾಧ್ಯಕ್ಷ ಪ್ರವೀಣ್ ಆರ್ ಮಾದರ್ ಮಾತನಾಡಿದರು…

ಈ ಸಂದರ್ಭದಲ್ಲಿ ಯುವ ಕರ್ನಾಟಕ ಭೀಮ್ ಸೇನೆ ರಾಜ್ಯ ಉಪಾಧ್ಯಕ್ಷ ಅಕ್ಷಯ್ ಕೆ ಆರ್. ರಾಜ್ಯ ಪ್ರಧಾನ ಕಾರ್ಯದರ್ಶಿ ಮಲಪ್ಪ ಅಕ್ಕಮಡಿ, ಬೆಳಗಾವಿ ಜಿಲ್ಲಾ ಅಧ್ಯಕ್ಷ ಉದಯ ಬಸೋಜಿ, ಬೆಳಗಾವಿ ಜಿಲ್ಲಾ ಉಪಾಧ್ಯಕ್ಷ ಸಚಿನ್ ಕೋಲಕಾರ ಬೈಲಹೊಂಗಲ ತಾಲೂಕು ಅಧ್ಯಕ್ಷ ಗಂಗಾಧರ ಮಾದರ, ಹರೀಶ್, ರಾಹುಲ್ ಮಂಜು ಜುಂಜನ್ನವರ ವಿನೋದ್ ಇನ್ನಿತರ ಸಂಘಟನೆಗಳ ಪದಾಧಿಕಾರಿಗಳು ಮುಖಂಡರು ಪ್ರತಿಭಟನೆ ಭಾಗವಹಿಸಿದ್ದರು.*************************

Back to top button