Collins Aerospace ಬೆಂಗಳೂರು ಇವರ ವತಿಯಿಂದ ನಿರ್ಮಾಣಗೊಂಡಿರುವ ಬಾಲಕಿಯರ ಹೈಟೆಕ್ ಶೌಚಾಲಯ ಉದ್ಘಾಟನೆ…!!
ಪ್ರಕೃತಿ ಬೆಳಗಾವಿ ಸುದ್ದಿ : ಇಂದು ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ಅಡರಕಟ್ಟಿಯಲ್ಲಿ ಪ್ರತಿಷ್ಠಿತ ಕಂಪನಿ ಯಾಗಿರುವ Collins Aerospace ಬೆಂಗಳೂರು ಇವರ ವತಿಯಿಂದ ನಿರ್ಮಾಣಗೊಂಡಿರುವ ಬಾಲಕಿಯರ ಹೈಟೆಕ್ ಶೌಚಾಲಯ ಉದ್ಘಾಟಿಸಲಾಯಿತು.
Collins Aerospace ಬೆಂಗಳೂರು ಕಂಪನಿಯ
ಕಾರ್ಮಿಕ ಸಂಘದ ಅಧ್ಯಕ್ಷರಾಗಿರುವ ಶ್ರೀ ಮಂಜನಗೌಡ ದೊಡ್ಡಮನಿ ಇವರು ಮಾತನಾಡುತ್ತಾ ಸರ್ಕಾರಿ ಶಾಲೆಗಳ ಶೈಕ್ಷಣಿಕ ಅಭಿವೃದ್ಧಿಗೆ ನಮ್ಮ ಕಂಪನಿಯು, ಶಾಲೆಯ ಮೂಲಭೂತ ಸೌಲಭ್ಯಗಳ ಒದಗಿಸುವಲ್ಲಿ ಮುಂಚೂಣಿಯಲ್ಲಿದೆ ಎಂದು ಅಭಿಪ್ರಾಯಪಟ್ಟರು, ಅಡರಕಟ್ಟಿ ಶಾಲೆಯು ಆರ್ಥಿಕವಾಗಿ ಹಿಂದುಳಿದ ಸಮುದಾಯದ ಮಕ್ಕಳು ಹೆಚ್ಚಾಗಿರುವುದರಿಂದ ಈ ಶಾಲೆಯನ್ನು ಆಯ್ಕೆ ಮಾಡಿಕೊಂಡಿದ್ದು ವಿಶೇಷವಾಗಿರುತ್ತದೆ ಎಂದು ಹೇಳಿದರು.
ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳು ಶ್ರೀ ಎಚ್ ನಾಣಕಿ ನಾಯಕಯವರು ಮಾತನಾಡುತ್ತಾ, ನಮ್ಮ ಶಿರಹಟ್ಟಿ ತಾಲೂಕಿನಲ್ಲಿ ಅಡರಕಟ್ಟಿ ಶಾಲೆಯಲ್ಲಿ ಪ್ರಥಮ ಬಾರಿಗೆ ಹೈಟೆಕ್ ಶೌಚಾಲಯ ಒದಗಿಸಿ ಕೊಟ್ಟಿದ್ದು ಕಂಪನಿಯವರಿಗೆ ಅಭಿನಂದನೆ ತಿಳಿಸಿದರು, ನಮ್ಮ ಸರ್ಕಾರಿ ಶಾಲೆಗಳು ಖಾಸ್ಗಿ ಶಾಲೆ ಗಿಂತ ಬಹಳಷ್ಟು ಗುಣಮಟ್ಟದ ಶಿಕ್ಷಣವನ್ನು NGO ಸಂಸ್ಥೆಯ ಸಹಭಾಗಿತ್ವದಲ್ಲಿ ಮೂಡಿ ಬರುತ್ತಿರುವುದು ಸಂತಸ ತಂದಿದೆ ಎಂದು ಅಭಿಪ್ರಾಯಪಟ್ಟರು, ಶಾಲೆಯ ಪ್ರಧಾನ ಗುರು ಮಾತೆಯರು ಶ್ರೀಮತಿ ಎಸ್ ಎಚ್ ಉಮಚಗಿಯವರು ಮಾತನಾಡುತ್ತಾ ಶಾಲೆಗೆ ಮೂಲಭೂತ ಸೌಲಭ್ಯಗಳಲ್ಲಿ ಅತ್ಯಂತ ಅವಶ್ಯಕವಾಗಿರುವಂತ ಬಾಲಕಿಯರ ಶೌಚಾಲಯವನ್ನು ನಿರ್ಮಿಸಿ ಕೊಟ್ಟಿದ್ದು ನಮ್ಮ ಶಾಲೆಯ ಮಕ್ಕಳಿಗೆ ಅನುಕೂಲವಾಗಿದೆ ಎಂದು NGO ಸಂಸ್ಥೆಯ ಕಾರ್ಯವನ್ನು ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.
ಈ ಕಾರ್ಯಕ್ರಮದಲ್ಲಿ ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷರಾದ ಶ್ರೀಮತಿ ಜಯಶ್ರೀ ವೀರೇಶ ಭಂಗಿ, ಅತಿಥಿಗಳಾಗಿ ಶ್ರೀ ಕುಮಾರಣ್ಣ ಚಕ್ರಸಾಲಿ, ರವಿನಾಯಕ ದೇವರಮನಿ, Collins Aerospace ಬೆಂಗಳೂರು ಕಂಪನಿಯ ಟೆಕ್ನಿಷಿಯನ್ಯವರಾದ ಶ್ರೀ ಮೌನೇಶ್ ಬನ್ನಿಮಟ್ಟಿ, ಕರಬಸಪ್ಪ ಸೊಪ್ಪಿನ ಹಾಗೂ ವೈದ್ಯರಾದ ಮರಿಗೌಡರ, ಫಕೀರೇಶ, ಮಹೇಶ ಅಂಗಡಿ ,ಶಾಲೆಯ ಸಿಬ್ಬಂದಿ ವರ್ಗ, ಎಸ್ ಡಿ ಎಂ ಸಿ ಸದಸ್ಯರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಸರ್ವರನ್ನು ಶ್ರೀಮತಿ ಎಸ್ ಎಚ್ ಉಮಚಗಿ ಪ್ರ.ಗು.ಸ್ವಾಗತಿಸಿದರು , ಪಿ ಸಿ ಕಾಳ ಶೆಟ್ಟಿ ಅವರು ಪ್ರಸ್ತಾವಿಕವಾಗಿ ಮಾತನಾಡಿದರು, ಕಿರಣ್ ಕುಮಾರ್ ವಂದಿಸಿದರು, ಡಿ ಡಿ ಲಮಾಣಿ ಕಾರ್ಯಕ್ರಮವನ್ನು ನಿರೂಪಿಸಿದರು.**************************






