ಪ್ರಕೃತಿ ಬೆಳಗಾವಿ

ಮುಗಳಖೋಡ: ಮೊಬೈಲ್ ಕದ್ದ ಕಳ್ಳರು ಪೊಲೀಸ್ ಠಾಣೆಯಲ್ಲಿ ಅಂಧರ್…!!

ಪ್ರಕೃತಿ ಬೆಳಗಾವಿ ಸುದ್ದಿ : ರಾಯಬಾಗ : ಹಾರೂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಮುಗಳಖೋಡ ಪಟ್ಟಣದಲ್ಲಿ ಗುರುವಾರ ದಿ: 20ರ ರಾತ್ರಿ ವೇಳೆಯಲ್ಲಿ ಪಟ್ಟಣದ ಮಲ್ಲಿಕಾರ್ಜುನ ಕಮ್ಯುನಿಕೇಶನ್ ಮೊಬೈಲ್ ಅಂಗಡಿಯನ್ನು ಒಡೆದು ಸ್ಯಾಮ್ಸಂಗ್ ಎಸ್ 24 ಅಲ್ಟ್ರಾ ಮೊಬೈಲ್ 01, ವಿವೋ ಕಂಪನಿಯ ಮೊಬೈಲ್ ಗಳು 06 ಒಟ್ಟು 07 ಮೊಬೈಲಗಳನ್ನು ಕದ್ದಿದ್ದಾರೆ. ಅಂದಾಜು 2.84 ಲಕ್ಷ ರೂಗಳ ಮೊಬೈಲಗಳನ್ನು ಕಳುವು ಮಾಡಿದ ಮೂರು ಜನ ಕಳ್ಳರನ್ನು ಪೊಲೀಸರು ಬಂಧಿಸಿದ್ದಾರೆ.

ಮೂಡಲಗಿ ಪಟ್ಟಣದ ಸುಭಾಷ ಅರ್ಜುನ ಹೊಸಕೋಟಿ, ಹಾರೂಗೇರಿ ಪಟ್ಟಣದ ಹನುಮಂತ ಲಕ್ಕಪ್ಪ ಕುರಣಿ ಹಾಗೂ ಶಾಂತಿ ಸಾಗರ್ ಅಲಿಯಾಸ್ ಶಾಂತು ಅಲ್ಲಪ್ಪ ಕುರಣಿ ಮೊಬೈಲುಗಳ ಕದ್ದ ಆರೋಪಿಗಳು.

ಆರೋಪಿತರು ಈ ಹಿಂದೆ ಹಾರೂಗೇರಿ ಪಟ್ಟಣದ ಕೆನರಾ ಬ್ಯಾಂಕ್ ಸಹಕಳತನ ಮಾಡಲು ಯತ್ನಿಸಿದ್ದು ಎಂದು ತನಿಖೆಗಳಿಂದ ತಿಳಿದು ಬಂದಿದೆ ಎಂದು ಸಿಪಿಐ ಡಿ ರವಿಚಂದ್ರನ್ ತಿಳಿಸಿದರು.

ಬೆಳಗಾವಿ ಎಸ್‌ಪಿ ಡಾ.ಭೀಮಾಶಂಕರ ಗುಳೇದ ಮಾರ್ಗದರ್ಶನದಲ್ಲಿ ಅಡಿಷನಲ್ ಎಸ್ಪಿ ಕು.ಶೃತಿ ಎನ್.ಎಸ್, ಅಡಿಷನಲ್ ಎಸ್‌ಪಿ ಆರ್.ಬಿ.ಬಸರಗಿ, ಅಥಣಿ ಡಿವೈಎಸ್ಪಿ ಶ್ರೀಪಾದ ಜಲ್ದೆ ಅವರುಗಳ ಮಾರ್ಗದರ್ಶನದಂತೆ ಸಿಪಿಐ ಡಿ.ಬಿ.ರವಿಚಂದ್ರನ್, ಪಿ ಎಸ್ಐ ಗಿರಿಮಲ್ಲಪ್ಪ ಉಪ್ಪಾರ ಹಾಗೂ ಸಿಬ್ಬಂದಿಗಳು ತಂಡ ರಚನೆ ಮಾಡಿ ಪ್ರಕರಣವು ದಾಖಲಾದ ಎರಡೇ ದಿನದಲ್ಲಿ ಪ್ರಕರಣವನ್ನು ಭೇದಿಸಿ ಎರಡು ಜನ ಆರೋಪಿತರನ್ನು ಬಂಧಿಸಿ, ಬಂಧಿತ ಆರೋಪಿಗಳಿಂದ ಅಂದಾಜು 2.84 ಲಕ್ಷ ರೂಪಾಯಿಗಳ ತಿಮ್ಮತ್ತಿನ 07 ಆಂಡ್ರಾಯ್ಡ್ ಮೊಬೈಲ್ ಗಳನ್ನು ವಶಪಡಿಕೊಂಡಿರುತ್ತಾರೆ.********************

Back to top button