ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ಎಸ್ ಸಿ / ಎಸ್ ಟಿ ಕುಂದು ಕೊರತೆ ಸಭೆ…!!
ಪ್ರಕೃತಿ ಬೆಳಗಾವಿ ಸುದ್ದಿ : ಬೆಳಗಾವಿ : ಠಾಣೆಯ ಮುಖ್ಯ ಅಧಿಕಾರಿಗಳಾದ ಪೊಲೀಸ್ ಇನ್ಸ್ಪೆಕ್ಟರ್ ಕಾಲಿಮಿರ್ಚಿ ರವರ ನೇತೃತ್ವದಲ್ಲಿ ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ಎಸ್ ಸಿ / ಎಸ್ ಟಿ ಕುಂದು ಕೊರತೆ ಸಭೆ ಜರುಗಿಸಲಾಯಿತು.
ಈ ಸಭೆಯಲ್ಲಿ ಪೊಲೀಸ್ ಇನ್ಸ್ಪೆಕ್ಟರ್ ಕಾಲಿಮಿರ್ಚಿ ರವರು ದಲಿತ ಸಮುದಾಯಗಳ ಸಮಸ್ಯೆಗಳ ಕುರಿತು ಮತ್ತು ದಲಿತರ ಮೇಲೆ ಹೆಚ್ಚಾಗಿ ಆಗುತ್ತಿರುವ ದೌರ್ಜನ್ಯಗಳನ್ನೂ ಹೇಗೆ ತಡೆಯಬೇಕು ಎಂದು ಸಭೆಯಲ್ಲಿ ಭಾಗವಹಿಸಿದ್ದ ಮುಖಂಡರಿಗೆ ತಿಳಿಸಿದರು.
ಜನರು ಯಾವುದೇ ಅಪರಾಧ ಕೃತ್ಯಗಳಿಗೆ ಬಾಗಿಯಾಗದಂತೆ ಹಾಗೂ ಅಪರಾಧ ತಡೆಯುವ ನಿಟ್ಟಿನಲ್ಲಿ ಪ್ರತಿ ಒಬ್ಬರು ಭಾಗವಹಿಸಬೇಕು ಅದು ಎಲ್ಲರ ಜವಾಬ್ದಾರಿ ಯಾವುದೇ ಸಮಸ್ಯೆಗಳು ಕಂಡು ಬಂದಲ್ಲಿ ಠಾಣೆಗೆ ನೇರವಾಗಿ ಕರೆ ಮಾಡಿ ತಿಳಿಸಿ ನಮ್ಮ ಸುತ್ತಮುತ್ತಲಿನ ಸಮಾಜವನ್ನು ರಕ್ಷಣೆ ನೀಡುವುದು ನಾವೆಲ್ಲರೂ ಜವಾಬ್ದಾರಿ ವಹಿಸಬೇಕಾಗಿದೆ ಎಂದು ತಿಳಿಸಿ ಕೆಲವು ಮುಖ್ಯ ಸೂಚನೆಗಳನ್ನು ನೀಡಿದರು. ಮತ್ತು ದಲಿತ ಮುಖಂಡರ ಕುಂದು ಕೊರತೆಗಳ ಅಹವಾಲುಗಳನ್ನು ಕೇಳಿದರು.
ಈ ಸಭೆಯಲ್ಲಿ ಠಾಣೆಯ ಇನ್ನುಳಿದ ಅಧಿಕಾರಿಗಳಾದ ಹೊನ್ನಪ್ಪ ತಳವಾರ್ ಹಾಗೂ ಶ್ರೀಶೈಲ ಮತ್ತು ಸಭೆಯಲ್ಲಿ ಭಾಗವಹಿಸಿದ್ದರು.
(ವಾಲ್ಮೀಕಿ ಸಂಘಟನೆಯ ರಾಜ್ಯಾಧ್ಯಕ್ಷ ಮಹೇಶ ಎಸ್
ಶಿಗೀಹಳ್ಳಿ)
(ಬೆಳಗಾವಿ ತಾಲೂಕು ಅದ್ಯಕ್ಷರು ಶಕ್ತಿಕುಮಾರ್)
ವಿಶ್ವ ರತ್ನ ಅಂಬೇಡ್ಕರ್ ಸಂಸ್ಥೆಯ ಅಧ್ಯಕ್ಷ ಅಕ್ಷಯ ಕೋಲ್ಕರ)
ಹಾಗೂ (ಅಂಬೇಡ್ಕರ್ ಸಂಸ್ಥೆಯ ಪದಾಧಿಕಾರಿ ಮಂಜುನಾಥ್ ತಳವಾರ)
(ದಲಿತ ಮುಖಂಡ ಧರನಾಯಕ)
(DYS ಸಂಘಟನೆಯ ಮುಖಂಡ ಪರಶುರಾಮ ವಂಟಮೂರಿ)
ಮತ್ತು ಇನ್ನೂ ಅನೇಕ ಮುಖಂಡರು ಭಾಗವಹಿಸಿದ್ದರು.*******************************






