ಪ್ರಕೃತಿ ಬೆಳಗಾವಿ

ಬಸವರಾಜ ಎಮ್ ಯರಗುಪ್ಪಿ ಅವರಿಗೆ ರಾಜ್ಯ ಮಟ್ಟದ “ಸೇವಾ ರತ್ನ ಪ್ರಶಸ್ತಿ”…!!

ಪ್ರಕೃತಿ ಬೆಳಗಾವಿ ಸುದ್ದಿ : ಕಪ್ಪತ್ತಗಿರಿ ಸಾಹಿತ್ಯ, ಸಾಂಸ್ಕೃತಿಕ ಕಲಾ ವೇದಿಕೆ ರಾಜ್ಯ ಘಟಕ ಗದಗ-ಕಳಸಾಪೂರ ಅವರ ವತಿಯಿಂದ ಕೊಡ ಮಾಡುವ 2023-24ನೇ ಸಾಲಿನ ಶಿಕ್ಷಣ ಕ್ಷೇತ್ರದ ವಿಶೇಷ ವ್ಯಕ್ತಿಗಳ ವಿಭಾಗದಲ್ಲಿ ರಾಜ್ಯ ಮಟ್ಟದ “ಸೇವಾ ರತ್ನ ಪ್ರಶಸ್ತಿಗೆ” ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಶ್ರೀ ಬಸವರಾಜ ಎಮ್ ಯರಗುಪ್ಪಿ ಅವರು ಭಾಜನರಾಗಿದ್ದಾರೆ.

ಈಗ ಶಿರಹಟ್ಟಿ ಬಿ ಆರ್ ಸಿ ಕೇಂದ್ರದ ಸಂಪನ್ಮೂಲ ವ್ಯಕ್ತಿಯಾಗಿ, ಮಕ್ಕಳ ಮತ್ತು ಸಮುದಾಯದ ಒಡನಾಡಿಗಳಾಗಿ, ತಾಲ್ಲೂಕು ಅಷ್ಟೇ ಅಲ್ಲದೇ ಜಿಲ್ಲೆ ಹಾಗೂ ರಾಜ್ಯದಾದ್ಯಂತ ಅವರು ವರ್ಷವಿಡೀ, ಪ್ರತಿದಿನದ ವಿಶೇಷ ಸಂಗತಿಗಳನ್ನು ವಾಟ್ಸಾಪ್, ಫೆಸ್ಬುಕ್ ಹಾಗೂ ಇತರ ಸಾಮಾಜಿಕ ಜಾಲತಾಣಗಳಲ್ಲಿ ಆ ದಿನದ ಮಹತ್ವವನ್ನು ತಿಳಿಸಿಕೊಡುವ ಮೂಲಕ ಜನಮಾನಸಗೊಂಡಿದ್ದಾರೆ.ಈ ಮೂಲಕ ಅವರು ಸಮಾಜದ ಓದುವ ಮತ್ತು ಉದ್ಯೋಗ ಹುಡುಕ್ಕುತ್ತಿರುವ ಯುವಕರಿಗೆ ತಮ್ಮ ಹೊಸ ತಾಂತ್ರಿಕತೆ ಸಹಾಯದಿಂದ ಜ್ಞಾನವನ್ನು ಎರೆಯುತ್ತಿರುವುದು.

ಶ್ಲಾಘನೀಯ ಕಾರ್ಯವಾಗಿದೆ.ಈ ಎಲ್ಲಾ ಸೇವಾ ಕಾರ್ಯಗಳನ್ನು ಪರಿಗಣಿಸಿ,ಶಿಕ್ಷಣ ಕ್ಷೇತ್ರದ ವಿಶೇಷ ವ್ಯಕ್ತಿಗಳ ವಿಭಾಗದಲ್ಲಿ ರಾಜ್ಯ ಮಟ್ಟದ “ಸೇವಾ ರತ್ನ” ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಕಪ್ಪತ್ತಗಿರಿ ಫೌಂಡೇಶನ್ ಸಂಚಾಲಕರು ತಿಳಿಸಿದ್ದಾರೆ.

ನಾಳೆ ರವಿವಾರ ದಿನಾಂಕ 09.06.2024 ರಂದು ಸುಕ್ಷೇತ್ರ ಕಪ್ಪತಗುಡ್ಡ, ಕಪ್ಪಮಲ್ಲೇಶ್ವರ ದೈವಿವನ ಕಡಕೋಳ ಅರಣ್ಯ ವಲಯದಲ್ಲಿ ನಡೆಯುವ “ಪರಿಸರೋತ್ಸವ” ಕಾರ್ಯಕ್ರಮದಲ್ಲಿ ಸೇವಾ ರತ್ನ ಪ್ರಶಸ್ತಿ ಪ್ರಧಾನ ಮಾಡಿ, ಸನ್ಮಾನಿಸಲಾಗುತ್ತದೆ.

ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಎಚ್ ಎನ್ ನಾಯಕ ಕ ರಾ ಪ್ರಾ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಸವರಾಜ ಹರಲಾಪುರ ಕಾರ್ಯದರ್ಶಿ ಚಂದ್ರಕಾಂತ ನೇಕಾರ ಡಿ ಡಿ ಲಮಾಣಿ ಬಸವರಾಜ ಯತ್ನಳ್ಳಿ ಎಲ್ ಎನ್ ನಂದೆಣ್ಣವರ ಗೀತಾ ಹಳ್ಳ್ಯಾಳ ಜಿಲ್ಲಾ ಶಿಕ್ಷಕರ ಸಂಘದ ಎಂ ಎಸ್ ಹಿರೇಮಠ ಡಿ ಎಲ್ ಪಾಟೀಲ್ ಐ ಎ ನೀರಲಗಿ ಪಾಟೀಲ್ ಗುರುಮಾತೆ ಮುಂತಾದವರು ಅಭಿನಂದನೆ ಸಲ್ಲಿಸಿದ್ದಾರೆ.*****************************

Back to top button