ಪ್ರಕೃತಿ ಬೆಳಗಾವಿ

ಕೊಂಡಿಕೊಪ್ಪ ದಲ್ಲಿ ನಮ್ಮ ನಡೆ ಮತಗಟ್ಟೆ ಕಡೆ…!!

ಪ್ರಕೃತಿ ಬೆಳಗಾವಿ ಸುದ್ದಿ : 156 ನೇ ಮತಗಟ್ಟೆಯಲ್ಲಿ ಇಂದು ನಮ್ಮ ನಡೆ ಮತಗಟ್ಟೆ ಕಡೆ ಎಂಬ ಕಾರ್ಯಕ್ರಮದ ಅಂಗವಾಗಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಕೊಂಡಿಕೊಪ್ಪ ಮತಗಟ್ಟೆಯಲ್ಲಿ ಪಿಡಿಓ ಸವಿತಾ ಸೋಮಣ್ಣವರ ಪಂ ಅಭಿವೃದ್ಧಿ ಅಧಿಕಾರಿಗಳು ಧ್ವಜಾರೋಹಣ ನೆರವೇರಿಸಿ, ಮತದಾರರ ಮಾಹಿತಿಯ ಪತ್ರ ಮತದಾರರಿಗೆ ವಿತರಿಸಿ ದಿನಾಂಕ 07-05-2024 ರಂದು ತಪ್ಪದೇ ಮತಗಟ್ಟೆಗೆ ಬಂದು ಮತ ಚಲಾಯಿಸುವಂತೆ ವಿನಂತಿಸಿ ಕೊಂಡರು.

ಕಡ್ಡಾಯವಾಗಿ ಎಲ್ಲರೂ ಮತದಾನ ಮಾಡೋಣ ಶೇಕಡಾ ನೂರರಷ್ಟು ಮತದಾನ ಆಗುವಂತೆ ಜಾಗೃತಿ ಮೂಡಿಸೋಣ ಎಂದರು.
ನಂತರ ಮುಖ್ಯ ಶಿಕ್ಷಕರ ಎಂ ಎಸ್ ಹಿರೇಮಠ ಪ್ರತಿಜ್ಞಾವಿಧಿ ಬೋಧಿಸಿದರು.

ಈ ಸಂದರ್ಭದಲ್ಲಿ ಕಾರ್ಯದರ್ಶಿ ಎಸ್ ಕೆ ಡಂಬಳ ಮತಗಟ್ಟೆ ಅಧಿಕಾರಿ ರತ್ನಾ ದೊಡ್ಡಮನಿ ಬಸವರಾಜ ದೊಡ್ಡಮನಿ ಗೂರಪ್ಪ ಲಮಾಣಿ ರಮೇಶ ದೊಡ್ಡಮನಿ ಸುರೇಶ ಲಮಾಣಿ ಕಾಶವ್ವ ದೊಡ್ಡಮನಿ ಗಂಗಾ ಲಮಾಣಿ ಹನುಮಂತ ವಾಲಿಕಾರ ಪತ್ರಕರ್ತ ಮಂಜು ರಾಠೋಡ ಮುಂತಾದವರು ಉಪಸ್ಥಿತರಿದ್ದರು.

ನಂತರ ಊರಿನ ಪ್ರಮುಖ ಬೀದಿಗಳಲ್ಲಿ ಮತದಾರರ ಜಾಗೃತಿ ಜಾಥಾ ಮಾಡಲಾಯಿತಿ.**********************************

Back to top button