ಪ್ರಕೃತಿ ಬೆಳಗಾವಿ

ಬೆಳಗಾವಿ ಡಿಸಿ ಆವರಣದಲ್ಲಿ ಬುಲೆಟ್ ಬಿಯರ್ ಬಾಟಲಿ…!!

ಪ್ರಕೃತಿ ಬೆಳಗಾವಿ ಸುದ್ದಿ : ಬೆಳಗಾವಿ ಮಾನ್ಯ ಜಿಲ್ಲಾಧಿಕಾರಿಗಳು ಕಛೇರಿ ಆವರಣದ ಪಕ್ಕದಲ್ಲಿರುವ ಉದ್ಯಾನವನ ಮದ್ಯ ಪ್ರಿಯರು ದಿನ ನಿತ್ಯ ಮದ್ಯಪಾನ ಮಾಡಿ, ಹೆಂಡದ ಬಾಟಲಿ ಎಲ್ಲಿಂದರಲ್ಲಿ, ಬಿಸಾಕಿ ಅದರ ಗಾಜುಗಳು ಜನ ಸಾಮಾನ್ಯರಿಗೆ ತಗ್ಗಲುವಂತಾಗಿದೆ. ಇದ್ದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ.

ಇಂತಹ ಕೃತ್ಯವೆಸಗಿರುವ ಮೇಲೆ ಮಾನ್ಯ ಜಿಲ್ಲಾಧಿಕಾರಿಗಳು, ಹಾಗೂ ಮಹಾನಗರ ಪಾಲಿಕೆ, ಮತ್ತು ಪೋಲಿಸ್ ಕಮಿಷನರ್ ರವರು ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಹಾಗೂ ಇಂತಹ ಉದ್ಯಾನವನು ಮರು ಶುಚಿತ್ವಗೋಳಿಸಿ. ಸಾರ್ವಜನಿಕರ ಸಹಾಯ ಮಾಡಬೇಕೆಂದು ಯುವ ಕರ್ನಾಟಕ ಭೀಮ್ ಸೇನೆ ಯುವ ಶಕ್ತಿ ಸಂಘಟನೆ ಸಂಸ್ಥಾಪಕ ರಾಜ್ಯಾಧ್ಯಕ್ಷರು. ಶ್ರೀ ಪ್ರವೀಣ್ ಆರ್ ಮಾದರ್ ಆಗ್ರಹಿಸಿದರು.

ಈ ಸಂದರ್ಭದಲ್ಲಿ ಯುವ ಕರ್ನಾಟಕ ಭೀಮ್ ಸೇನೆ ಯುವ ಶಕ್ತಿ ಸಂಘದ ರಾಜ್ಯ ಉಪಾಧ್ಯಕ್ಷರು ಅಕ್ಷಯ ಕೆ ಆರ್, ಬೆಳಗಾವಿ ಜಿಲ್ಲಾ ಅಧ್ಯಕ್ಷ ಉದಯ ಬಸೋಜಿ, ರಾಜ್ಯ ಕಾನೂನು ಘಟಕದ ಅಧ್ಯಕ್ಷ ಎ ಚ್ ಗಂಗಾಯಿ ಉಪಸ್ಥಿತರಿದ್ದರು.*********************************

Back to top button