ಲೋಕಸಭೆಗೆ ಯೋಗ್ಯ ಅಭ್ಯರ್ಥಿ ಜಗದೀಶ್ ಶೆಟ್ಟರ್: ಕವಟಗಿಮಠ…!!
ಬೆಳವಡಿ ಮಲ್ಲಮ್ಮನ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಜಗದೀಶ್ ಶೇಟ್ಟರ್…
ಪ್ರಕೃತಿ ಬೆಳಗಾವಿ ಸುದ್ದಿ : ಬೆಳಗಾವಿ : ಭಾರತೀಯ ಜನತಾ ಪಕ್ಷವು ಸಿಎಂ ಆಗಿ, ಆರು ಬಾರಿ ಶಾಸಕರಾಗಿ, ವಿಧಾನ ಸಭೆಯ ವಿರೋಧ ಪಕ್ಷದ ನಾಯಕರಾಗಿ, ಸಚಿವರಾಗಿ ಹಾಗೂ ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷರಾಗಿ ಕೆಲಸ ಮಾಡಿದ ಅನುಭವಿ ಜಗದೀಶ್ ಶೆಟ್ಟರ್ ಅವರನ್ನು ಭಾರತಿಯ ಜನತಾ ಪಕ್ಷ ಅಭ್ಯರ್ಥಿಯನ್ನಾಗಿ ಮಾಡಿದೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ ಅವರು ತಿಳಿಸಿದ್ದಾರೆ.
ಬೈಲಹೊಂಗಲ ಮತಕ್ಷೇತ್ರದ ಬೆಳವಡಿ ಗ್ರಾಮದಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಇದು ಗ್ರಾಮ ಪಂಚಾಯತಿ ಚುನಾವಣೆಯಲ್ಲ, ತಾಲೂಕು ಪಂಚಾಯತ ಚುನಾವಣೆಯಲ್ಲ, ಜಿಲ್ಲಾ ಪಂಚಾಯತ ಚುನಾವಣೆಯಲ್ಲ, ಇದು ದೇಶವನ್ನು ಪ್ರತಿನಿಧಿಸುವ ಚುನಾವಣೆಯಾಗಿದೆ. ಹಾಗಾಗಿಯೇ, ಜಗದೀಶ್ ಶೆಟ್ಟರ್ ಅವರನ್ನು ಅಭ್ಯರ್ಥಿಯಾಗಿ ಮಾಡಲಾಗಿದೆ. ಮತ್ತೊಂದು ಕಡೆ ಕಾಂಗ್ರೆಸ್ ಅಭ್ಯರ್ಥಿ ಯಾರು ಅವರು ? ಅವರ ಅರ್ಹತೆ ಏನು ? ಒಬ್ಬ ಮಂತ್ರಿಯ ಮಗ ಎಂಬ ಅರ್ಹತೆ ಅವರಿಗೆ ಇದೆ ಅಷ್ಟೇ. ಲೋಕಸಭೆಗೆ ಯೋಗ್ಯ ಅಭ್ಯರ್ಥಿ ಎಂದರೆ ಅದು ಜಗದೀಶ್ ಶೆಟ್ಟರ್, ಎಂಬುವದನ್ನು ತುಂಬಾ ಅಭಿಮಾನದಿಂದ ಹೇಳುತ್ತೇನೆ. ನರೇಂದ್ರ ಮೋದಿ ಸರ್ಕಾರ ಕಳೆದ ಆರು ವರ್ಷಗಳಲ್ಲಿ ಅನೇಕ ಸಾಧನೆ ಮಾಡಿದೆ ಎಂದು ತಿಳಿಸಿದರು.
ಬೆಳವಡಿ ಮಲ್ಲಮ್ಮನ ಪ್ರತಿಮೆಗೆ ಮಾಲಾರ್ಪಣೆ
ಪ್ರಚಾರ ಸಭೆ ಮುಂಚೆ ಬೆಳವಡಿ ಗ್ರಾಮದಲ್ಲಿ ಇರುವ ವೀರರಾಣಿ ಬೆಳವಡಿ ಮಲ್ಲಮ್ಮನ ಪ್ರತಿಮೆಗೆ ಜಗದೀಶ್ ಶೆಟ್ಟರ್ ಅವರು ಮಾಲಾರ್ಪಣೆ ಮಾಡಿ, ಗೌರವ ಸಲ್ಲಿಸಿದರು. ಬಳಿಕ ಸಿದ್ದಸಮುದ್ರ ಗ್ರಾಮದಲ್ಲಿ ಪ್ರಚಾರ ಸಭೆ ನಡೆಸಿದರು.
ಈ ವೇಳೆ ಮಾಜಿ ಶಾಸಕ ಜಗದೀಶ್ ಮೆಟಗುಡ್, ಡಾ. ವಿ.ಐ. ಪಾಟೀಲ್, ಮಂಡಲ ಅಧ್ಯಕ್ಷರಾದ ಗುರುಪಾದಪ್ಪ ಕಳ್ಳಿ, ಪ್ರಮುಖರಾದ, ಶಂಕರ್ ಮಾಡಲಗಿ, ಚಂದ್ರಶೇಖರ ಕಾರಿಮನಿ, ರುದ್ರಯ್ಯಸ್ವಾಮಿ ರೂಟ್ಟಯ್ಯನವರಮಠ, ಈರಣ್ಣ ಕರಿಕಟ್ಟಿ, ಸೇರಿದಂತೆ ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು.*********************************






