ಪ್ರಕೃತಿ ಬೆಳಗಾವಿ

*ಪೊಲೀಸ್ ಎಂದು ಹೇಳಿ ರೂ. 15,700 ವಂಚನೆ: ನಾಲ್ಕು ಬೈಕ್‍ಗಳು ಹಾಗೂ ನಗದು ವಶ*

ಪ್ರಕೃತಿ ಬೆಳಗಾವಿ ಸುದ್ದಿ : ಧಾರವಾಡ  ಅ.03 : ಪೊಲೀಸ್ ಎಂದು ಹೇಳಿ ವ್ಯಕ್ತಿಯೊಬ್ಬರಿಂದ ರೂ.15,700 ಹಣ ಪಡೆದು ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಳ್ನಾವರ ಪೊಲೀಸರು ಆರೋಪಿಯನ್ನು ಬಂಧಿಸಿ, ನಾಲ್ಕು ಮೋಟಾರ್‍ಸೈಕಲ್‍ಗಳು ಹಾಗೂ ನಗದು ಹಣವನ್ನು ವಶಪಡಿಸಿಕೊಂಡಿದ್ದಾರೆ.

ಸೆ.28 ರಂದು ಶೌಕತಲಿ ತಂದೆ ಅಲ್ಲಾಭಕ್ಷ ಮಕಾಂದಾರ, ಕತ್ರಿದಡ್ಡಿ, ಕಿತ್ತೂರು ತಾಲ್ಲೂಕು, ಬೆಳಗಾವಿ ಜಿಲ್ಲೆ ಅವರು ಅಳ್ನಾವರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪೊಲೀಸ್ಎಂದು ಹೇಳಿ ಮೋಸ ಮಾಡಿ ರೂ. 15,700 ಹಣ ವಸೂಲಿ ಮಾಡಿಕೊಂಡು ಹೋಗಿರುವುದಾಗಿ ದೂರಿನಲ್ಲಿ ತಿಳಿಸಿದ್ದರು. ಈ ಕುರಿತು ಅಳ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ಸಂಖ್ಯೆ 76/2026ರಂತೆ ಬಿ.ಎನ್.ಎಸ್-2023ರ ಕಲಂ 318(4), 319(2) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.

ಎಸ್. ಬಿ. ಜಾಂಬೋಟಿ ಮಪಿಎಸ್‍ಐ, ಬಸವರಾಜ ಯದ್ದಲಗುಡ್ಡ ಪಿಎಸ್‍ಐ (ಎಲ್&ಓ), ಎಫ್. ಎಂ. ಮಂಟೂರ ಪಿಎಸ್‍ಐ(ಪ್ರಭಾರ) ಪಿ.ಎಸ್.ಐ ಇವರ ಪ್ರತ್ಯೇಕ ತಂಡ ರಚನೆ ಮಾಡಿ ಮಾಹಿತಿ ಸಂಗ್ರಹಿಸಿ ಆರೋಪಿತನನ್ನು ಬಂಧಿಸಿ ಆರೋಪಿತನಿಂದ ಕೆಎ-22 ಇಆರ್-7446 ನೋಂದಣಿ ಸಂಖ್ಯೆಯ ಆಕ್ಟಿವಾ ಸ್ಕೂಟಿ (ಅಂದಾಜು ಮೌಲ್ಯ ರೂ.25,000), ಕೆಎ-22 ಎಸ್-4777 ಆಕ್ಟಿವಾ ಸ್ಕೂಟಿ (ರೂ.25,000), ಕೆಎ-25 ಎಚ್‍ಎ-9002 ಹೀರೋ ಪ್ಯಾಶನ್ pro ಬೈಕ್ (ರೂ.40,000) ಹಾಗೂ ಕೆಎ-25 ಇಜೆಡ್-9133 ಹೀರೋ ಎಚ್‍ಎಫ್ ಡಿಲಕ್ಸ್ ಬೈಕ್ (ರೂ.25,000) ಸೇರಿದಂತೆ ಒಟ್ಟು ನಾಲ್ಕು ವಾಹನಗಳು ಮತ್ತು ನಗದು ಹಣವನ್ನು ವಶಪಡಿಸಿಕೊಂಡಿದ್ದು, ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ಜಿಲ್ಲಾ ಪೊಲೀಸ್ ವರಿಷ್ಠಧಿಕಾರಿ ಗುಂಜನ್ ಆರ್ಯ ಅವರ ಮಾರ್ಗದರ್ಶನದಲ್ಲಿ ಡಿ.ಎಸ್.ಪಿ ವಿನೋದ ಮುಕ್ತೇದಾರ ಅವರ ನೇತೃತ್ವದಲ್ಲಿ ಎಂ. ಎಂ. ತಹಶೀಲ್ದಾರ, ಎಸ್. ಬಿ. ಜಾಂಬೋಟಿ, ಬಸವರಾಜ ಯದ್ದಲಗುಡ್ಡ, ಎಫ್. ಎಂ. ಮಂಟೂರ, ಎ.ಬಿ ಸೊರಟೂರ, ಆರ್. ಎಸ್. ಮರಡಿ, ಮೀರಾಸಾಬ ಪಾಶ್ಚಾಪೂರ, ಸೋಮಪ್ಪ ರಾಠೋಡ, ಹುಲಿಯಪ್ಪ ಕುರುಬರ, ಮಂಜುನಾಥ ಕರಿಸಿರಿ, ಮಹೇಶ ಹರಿಜನ, ಹಾಗೂ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಕಾರ್ಯವೈಖರಿಯನ್ನು ಹಿರಿಯ ಅಧಿಕಾರಿಗಳು ಪ್ರಶಂಸಿಸಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಧಿಕಾರಿ ಗುಂಜನ್ ಆರ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
******

Leave a Reply

Your email address will not be published. Required fields are marked *

Back to top button