ಪ್ರಕೃತಿ ಬೆಳಗಾವಿ

*ಹಳೆ ವೈಷಮ್ಯಕ್ಕೆ ವ್ಯಕ್ತಿ ಭೀಕರ ಕೊಲೆ: ನಾಲ್ವರ ಹೆಡೆಮುರಿ ಕಟ್ಟಿದ ಖಾಕಿ*

ಪ್ರಕೃತಿ ಬೆಳಗಾವಿ ಸುದ್ದಿ : ಬೆಳಗಾವಿ
ಗಾಂಧಿನಗರದ ಯುವಕ ಕಾಣೆಯಾಗಿ ಬಳಿಕ ಶವವಾಗಿ ಪತ್ತೆಯಾಗಿದ್ದ ಪ್ರಕರಣಕ್ಕೆ ಇದೀಗ ತಿರುವು ಸಿಕ್ಕಿದ್ದು, ಸರ್ವೆಶ (ನಾನಾ) ಕಂಗ್ರಾಳಕರ ಕೊಲೆ ಪ್ರಕರಣವನ್ನು ನಗರ ಪೊಲೀಸ್ ಆಯುಕ್ತ ಪ್ರಕಾಶ ನಿಕಮ್ ಮಾರ್ಗದರ್ಶನದಲ್ಲಿ ಮಾಳಮಾರುತಿ ಸಿಪಿಐ ಬಿ.ಆರ್.ಗಡ್ಡೇಕರ್ ನೇತೃತ್ವದ ತಂಡ ಭೇದಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಶಶಿ ಜಾಲಗಾರ, ರಾಹುಲ್ ಜಾಲಗಾರ, ದಶರತ ರಜಪೂತ ಹಾಗೂ ಅರುಣ ಹುಲ್ಲೋಳಿ ಎಂಬ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ.

2025ರ ಹಳೇ ದ್ವೇಷವೇ ಕೊಲೆಗೆ ಕಾರಣ ?

ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದಂತೆ 2025ರಲ್ಲಿ ಸರ್ವೆಶ (ನಾನಾ) ಕಂಗ್ರಾಳಕರ, ಶಶಿ ಜಾಲಗಾರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ.ಈ ಘಟನೆಯ ಬಳಿಕ ಇಬ್ಬರ ನಡುವೆ ವೈಷಮ್ಯ ಬೆಳೆದಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಇದೇ ವೈಷಮ್ಯ ಮುಂದುವರಿದು, ಶಶಿ ಜಾಲಗಾರ ಸಂಚು ರೂಪಿಸಿ ಸಹಚರರೊಂದಿಗೆ ಸೇರಿ ಸರ್ವೆಶನನ್ನು ಅಪಹರಿಸಿದ್ದಾನೆ. ಬಳಿಕ ನಾನಾವಾಡಿ ಪ್ರದೇಶದಲ್ಲಿ ಸರ್ವೆಶನನ್ನು ಕೊಲೆ ಮಾಡಿ, ಖಾನಾಪುರ ತಾಲೂಕಿನ ಜಾಂಬೋಟಿ ಬಳಿ ಶವವನ್ನು ಎಸೆದು ಆರೋಪಿಗಳು ಪರಾರಿಯಾಗಿದ್ದರು.

ಯುವಕ ಕಾಣೆಯಾದ ಪ್ರಕರಣದ ತನಿಖೆ ನಡೆಸುತ್ತಿದ್ದ ಮಾಳಮಾರುತಿ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿ ಆರೋಪಿಗಳ ಸುಳಿವು ಪತ್ತೆಹಚ್ಚಿದ್ದಾರೆ. ಬಂಧಿತ ನಾಲ್ವರನ್ನು ವಿಚಾರಣೆಗೊಳಪಡಿಸಲಾಗಿದ್ದು, ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಇತರ ಆರೋಪಿಗಳಿಗಾಗಿ ಶೋಧ ಮುಂದುವರಿದಿದೆ.
———————————
ಯಾರು ಆ ಸುಂದರಿ..?

ಶಶಿ ಜಾಲಗಾರ ಹಾಗೂ ಸರ್ವೆಶ (ನಾನಾ)ಕಂಗ್ರಾಳಕರ ನಡುವೆ ಇದ್ದ ವೈಷಮ್ಯವನ್ನು ಶಶಿ ಕೊಲೆಯಾಗಲು ಕಾರಣವಾಗಿದ್ದ ಆ ಸುಂದರಿಯೇ ಕಾರಣವಾದಳಾ ಎನ್ನುವ ಅನುಮಾನ ಪೊಲೀಸರಲ್ಲಿ ಕಾಡತೋಡಗಿದೆ. ಸರ್ವೆಶನ ಸಂಪರ್ಕ ಸಾಧಿಸಿದ ಆ ಸುಂದರಿ ಇನ್ಸಟಾ ಗ್ರಾಮ್ ನಲ್ಲಿ ಮೆಸೇಜ್ ಮಾಡಿ ಆತನ ಸಲುಗೆ ಬೆಳೆಸಿಕೊಂಡು ಮನೆಯಲ್ಲಿ ಯಾರೂ ಇಲ್ಲ ಬಾ ಎಂದಾಗ ಸುಂದರಿಯ ಮಾತು ನಂಬಿ ಹೋಸ ಸರ್ವೆಶ ಕೊನೆಗೆ ಶವವಾಗಿ ಖಾನಾಪುರದ ಜಾಂಬೋಟಿಯಲ್ಲಿ ಸಿಕ್ಕಿದ್ದ.

ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ಸರ್ವೆಶ ಕಾಣೆಯಾಗಿರುವ ದೂರು ಜಾಡು ಹಿಡಿದು ಹೋದ ಪೊಲೀಸರಿಗೆ ಕೊಲೆ ಆರೋಪಿಗಳನ್ನು ಪತ್ತೆ ಮಾಡುವುದೇ ಸವಾಲಿನ ಕೆಲಸವಾಗಿತ್ತು. ಸದ್ಯ ನಾಲ್ವರು ಆರೋಪಿಗಳನ್ನು ಬಂಧಿಸಿರುವ ಪೊಲೀಸರು ಇನ್ಸಟಾ ಗ್ರಾಮ್ ನಲ್ಲಿ ಮೆಸೇಜ್ ಮಾಡಿದ್ದ ಸುಂದರಿ ಸೇರಿದಂತೆ ಇನ್ನಿತರ ಆರೋಪಿಗಳ ಶೋಧ ನಡೆಸಿದ್ದಾರೆ.**********************************

Leave a Reply

Your email address will not be published. Required fields are marked *

Back to top button