ಪ್ರಕೃತಿ ಬೆಳಗಾವಿ

*ಬೆಳಗಾವಿ SP ಮತ್ತು DCಗೆ ದೂರು ಸಲ್ಲಿಕೆ: ನಕಲಿ ಪತ್ರಕರ್ತರ ವಿರುದ್ಧ ಸೂಕ್ತ ತನಿಖೆಗೆ ಒತ್ತಾಯ*

*ನಕಲಿ ಪತ್ರಕರ್ತರ ಹಾವಳಿಗೆ ಬ್ರೇಕ್ ಹಾಕಲು ಬೆಳಗಾವಿ ಜಿಲ್ಲಾಡಳಿತಕ್ಕೆ ಮಹೇಶ ಐಹೊಳೆ ಮನವಿ*

*ಯೂಟ್ಯೂಬ್ ಹಾಗೂ ಪತ್ರಿಕೆಗಳ ಹೆಸರಿನಲ್ಲಿ ದಂದೆ: ನಕಲಿ ವರದಿಗಾರರ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹ*

ಪ್ರಕೃತಿ ಬೆಳಗಾವಿ ಸುದ್ದಿ : ಬೆಳಗಾವಿ : ದಿನಪತ್ರಿಕೆ, ವಾರಪತ್ರಿಕೆ, ಮಾಸಪತ್ರಿಕೆ ಹಾಗೂ ಯೂಟ್ಯೂಬ್ ಚಾನೆಲ್‌ಗಳ ಹೆಸರಿನಲ್ಲಿ ಸುದ್ದಿ ಮಾಡುತ್ತಾ ಸಾರ್ವಜನಿಕರನ್ನು ವಂಚಿಸುತ್ತಿರುವ ನಕಲಿ ಪತ್ರಕರ್ತರ ವಿರುದ್ಧ ಸೂಕ್ತ ಪರಿಶೀಲನೆ ನಡೆಸಿ, ಕಾನೂನುಬದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಮಹೇಶ ಐಹೊಳೆ ಅವರು ಬೆಳಗಾವಿ ಜಿಲ್ಲಾಧಿಕಾರಿ (DC) ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ (SP) ಮನವಿ ಸಲ್ಲಿಸಿದ್ದಾರೆ.

​ಇತ್ತೀಚಿನ ದಿನಗಳಲ್ಲಿ ಪತ್ರಿಕೋದ್ಯಮದ ಹೆಸರನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದ್ದು, ನಕಲಿ ಪತ್ರಕರ್ತರ ವಿರುದ್ಧ ತಕ್ಷಣವೇ ಸೂಕ್ತ ವಿಚಾರಣೆ ಮತ್ತು ತನಿಖೆ ನಡೆಸಬೇಕು ಎಂದು ಮಹೇಶ ಐಹೊಳೆ ಅವರು ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ.*********************************

Leave a Reply

Your email address will not be published. Required fields are marked *

Back to top button