ಪ್ರಕೃತಿ ಬೆಳಗಾವಿ

*FKCCI ನಿರ್ದೇಶಕರಾಗಿ ಸಂಜೀವ ಕತ್ತಿಶೆಟ್ಟಿ ಸತತ ಮೂರನೇ ಅವಧಿಗೆ ಅವಿರೋಧ ಆಯ್ಕೆ*

ಪ್ರಕೃತಿ ಬೆಳಗಾವಿ ಸುದ್ದಿ : ಬೆಳಗಾವಿ : ಬೆಳಗಾವಿ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರೀಸ್ (BCCI)ನ ಮಾಜಿ ಅಧ್ಯಕ್ಷ ಸಂಜೀವ ಕತ್ತಿಶೆಟ್ಟಿ ಅವರು ಫೆಡರೇಶನ್ ಆಫ್ ಕರ್ನಾಟಕ ಚೇಂಬರ್ಸ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರಿ (FKCCI), ಬೆಂಗಳೂರಿನ ನಿರ್ದೇಶಕರಾಗಿ ಸತತ ಮೂರನೇ ಅವಧಿಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

FKCCI ನಿರ್ದೇಶಕರ ಚುನಾವಣೆಯಲ್ಲಿ ಸಂಜೀವ ಕತ್ತಿಶೆಟ್ಟಿ ಅವರ ಆಯ್ಕೆಗೆ ಯಾವುದೇ ಪ್ರತಿಸ್ಪರ್ಧಿ ಇಲ್ಲದ ಹಿನ್ನೆಲೆಯಲ್ಲಿ ಅವರು ಸರ್ವಾನುಮತದಿಂದ ಹಾಗೂ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಸತತ ಮೂರನೇ ಅವಧಿಗೂ ನಿರ್ದೇಶಕರಾಗಿ ಆಯ್ಕೆಯಾಗಿರುವುದು ಬೆಳಗಾವಿ ಸೇರಿದಂತೆ ಉತ್ತರ ಕರ್ನಾಟಕದ ವಾಣಿಜ್ಯ ಮತ್ತು ಕೈಗಾರಿಕಾ ವಲಯದಲ್ಲಿ ಅವರು ಸಲ್ಲಿಸಿರುವ ಸೇವೆ ಹಾಗೂ ಹೊಂದಿರುವ ವಿಶ್ವಾಸಕ್ಕೆ ದೊರೆತ ಮತ್ತೊಂದು ಮಾನ್ಯತೆಯಾಗಿದೆ.

ನೂತನ ಅವಧಿಯಲ್ಲಿ ಸಂಜೀವ ಕತ್ತಿಶೆಟ್ಟಿ ಅವರು ಬೆಳಗಾವಿ, ಬಾಗಲಕೋಟೆ ಹಾಗೂ ಉತ್ತರ ಕನ್ನಡ ಜಿಲ್ಲೆಗಳನ್ನು ಪ್ರತಿನಿಧಿಸಲಿದ್ದಾರೆ. ಈ ಮೂಲಕ ಈ ಮೂರು ಜಿಲ್ಲೆಗಳ ಉದ್ಯಮಿಗಳು, ವ್ಯಾಪಾರಸ್ಥರು ಹಾಗೂ ವಾಣಿಜ್ಯ ಕ್ಷೇತ್ರದ ಪ್ರಮುಖ ಸಮಸ್ಯೆಗಳು ಮತ್ತು ಬೇಡಿಕೆಗಳನ್ನು ರಾಜ್ಯ ಮಟ್ಟದ FKCCI ವೇದಿಕೆಯಲ್ಲಿ ಪರಿಣಾಮಕಾರಿಯಾಗಿ ಮಂಡಿಸುವ ಜವಾಬ್ದಾರಿ ಅವರ ಮೇಲಿರಲಿದೆ.

FKCCIಯಲ್ಲಿ ಸತತ ಮೂರನೇ ಅವಧಿಗೆ ನಿರ್ದೇಶಕರಾಗಿ ಆಯ್ಕೆಯಾಗಿರುವುದು ಬೆಳಗಾವಿ ವಾಣಿಜ್ಯ ಮತ್ತು ಕೈಗಾರಿಕಾ ವಲಯಕ್ಕೆ ಹೆಮ್ಮೆಯ ಸಂಗತಿಯಾಗಿದೆ. ಅವರ ಅನುಭವ ಮತ್ತು ಮಾರ್ಗದರ್ಶನದ ಮೂಲಕ ಬೆಳಗಾವಿ, ಬಾಗಲಕೋಟೆ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ಉದ್ಯಮ-ವ್ಯಾಪಾರ ಕ್ಷೇತ್ರದ ಧ್ವನಿಗೆ ರಾಜ್ಯ ಮಟ್ಟದಲ್ಲಿ ಮತ್ತಷ್ಟು ಬಲ ದೊರೆಯುವ ನಿರೀಕ್ಷೆ ಇದೆ.**************************************

Leave a Reply

Your email address will not be published. Required fields are marked *

Back to top button