*ಬೆಳಗಾವಿ ತಾಲೂಕಿನ ಕಂಗ್ರಾಳಿ ಗ್ರಾಮದಲ್ಲಿರುವ ಇನ್ಫಿನಿಟಿ ಎಜ್ಯುಕೇಶನ್ ಕೇಂದ್ರಕ್ಕೆ ಹೆಮ್ಮೆಯ ಗೌರವ*

ಪ್ರಕೃತಿ ಬೆಳಗಾವಿ ಸುದ್ದಿ : ಬೆಳಗಾವಿ : ಬೆಳಗಾವಿ ತಾಲೂಕಿನ ಕಂಗ್ರಾಳಿ ಗ್ರಾಮದಲ್ಲಿರುವ Infinity Education Center, Infinity Education and Rural Foundations ಅಡಿಯಲ್ಲಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಶಿಕ್ಷಣದ ಅವಕಾಶಗಳನ್ನು ಒದಗಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ.
ಕೇಂದ್ರದ ನಿರ್ದೇಶಕಿ ಶ್ರೀಮತಿ ಸಂಗೀತಾ ಪಾಟೀಲ್ ಅವರಿಗೆ ಶಿಕ್ಷಣ ಕ್ಷೇತ್ರದಲ್ಲಿ ಸಲ್ಲಿಸುತ್ತಿರುವ ಸೇವೆಯನ್ನು ಗುರುತಿಸಿ ‘Bela Teachers’ Award – 2026’ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಗ್ರಾಮೀಣ ವಿದ್ಯಾರ್ಥಿಗಳಿಗಾಗಿ Distance Education, Online Education Services ಹಾಗೂ Computer Education ಸೇರಿದಂತೆ ವಿವಿಧ ಶೈಕ್ಷಣಿಕ ಸೇವೆಗಳನ್ನು ಒದಗಿಸುತ್ತಿರುವ Infinity Education Center ಮೂಲಕ 10ನೇ ತರಗತಿ, PUC ಹಾಗೂ ವಿವಿಧ UG ಮತ್ತು PG ಕೋರ್ಸ್ಗಳ Distance Educationಗೆ ಮಾರ್ಗದರ್ಶನ ಮತ್ತು ಪ್ರವೇಶ ಸೌಲಭ್ಯ ಕಲ್ಪಿಸಲಾಗುತ್ತಿದೆ. ಅಲ್ಲದೆ, ಕಂಪ್ಯೂಟರ್ ಶಿಕ್ಷಣದ ಮೂಲಕ ವಿದ್ಯಾರ್ಥಿಗಳಿಗೆ ಡಿಜಿಟಲ್ ಕೌಶಲ್ಯ ಮತ್ತು ಉದ್ಯೋಗಾವಕಾಶಗಳಿಗೆ ಅಗತ್ಯವಾದ ಜ್ಞಾನ ನೀಡಲಾಗುತ್ತಿದೆ.
ಈ ಪ್ರಶಸ್ತಿ Infinity Education and Rural Foundations ಹಾಗೂ Infinity Education Center, ಕಂಗ್ರಾಳಿಯ ಶೈಕ್ಷಣಿಕ ಸೇವೆಗೆ ದೊರೆತ ಮತ್ತೊಂದು ಹೆಮ್ಮೆಯ ಗೌರವವಾಗಿದೆ.
ಕಾರ್ಯಕ್ರಮದಲ್ಲಿ ಬಾಲಿವುಡ್ ನಟ ಸುಧೇಶ್ ಬೆರಿ, Bela CEO ಲಕ್ಷ್ಮೀ ಖಿಲಾರಿ, ಎಂ. ಮುಖರ್ಜಿ, ಮಂಜಿತ್ ಜೈನ್ ಹಾಗೂ ಭಾರತಿ ಖಿಲಾರಿ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.*******************************






