ಪ್ರಕೃತಿ ಬೆಳಗಾವಿ

*ಸಾವಿರಾರು ಕೋಟಿ ಒಡೆಯ ಈಗ್ ಮಾಳಮಾರುತಿ ಠಾಣೆ ಅತಿಥಿ: ಓಂ ನಮ: ಶಿವಾಯ ಎನ್ನುತ್ತ ಕೈ ಮುಗಿದ ಶಿವಾನಂದ ನೀಲಣ್ಣನವ‌ರ್*

ಪ್ರಕೃತಿ ಬೆಳಗಾವಿ ಸುದ್ದಿ : ಬೆಳಗಾವಿ : ಸಾವಿರಾರು ಕೋಟಿ ಒಡೆಯ ಶಿವಾನಂದ ನೀಲಣ್ಣನವರ ವಿರುದ್ಧ ಪ್ರಕರಣ ದಾಖಲಾಗುತ್ತಿದಂತೆ ಮಾಳಮಾರುತಿ ಪೊಲೀಸ್ ರು ಆರೋಪಿಯನ್ನು ಬಂಧಿಸಿ ಠಾಣೆಗೆ ಕರೆ ತಂದಿದ್ದಾರೆ.

ಡಾ. ಶಿವಾನಂದ ನೀಲಣ್ಣವ‌ರ್ ವಿರುದ್ಧ 4500 ಸಾವಿರ ಕೋಟಿ ರೂ ವಂಚನೆ ಹಾಗೂ ವರ್ಗಾವಣೆ ಆರೋಪ ಕೇಳಿಬಂದಿತ್ತು. ತನಿಖೆ ಚುರುಕು ಗೊಳಿಸಿದ ಖಾಕಿ ಪಡೆ ನೀಲಣ್ಣನವರನ್ನು ಬಂಧಿಸಿ ಮತ್ತೆ, ಆಯುಕ್ತ ಸಮ್ಮುಖದಲ್ಲಿ ವಿಚಾರಣೆ ನಡೆಸಲಾಗಿದೆ.

ಹೆಚ್ಚಿನ ಬಡ್ಡಿ ನೀಡುವುದಾಗಿ ಜನರಿಗೆ ವಂಚಿಸಿ ಕೋಟ್ಯಾಂತರ ರೂಪಾಯಿ ಹಣ ಸಂಗ್ರಹ ಮಾಡಿದ ಆರೋಪದ ಹಿನ್ನೆಲೆಯಲ್ಲಿ ನಿನ್ನೆ ಶಿವಂ ಅಸೋಸಿಯೇಟ್ ಕಚೇರಿ ಮೇಲೆ ಎಸಿ,ಸಹಕಾರ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದರು.

ಬೆಳಗಾವಿಯ ಶಿವಬಸವ ನಗರದ ನಿವಾಸದಲ್ಲಿ ಶಿವಾನಂದ ಮುಂಜಾನೆಯಿಂದ ಮನೆಯಲ್ಲಿ ಇದ್ದರು.‌ ಅವರ, ಮೇಲೆ ಎಫ್‌ಐಆರ್ ದಾಖಲು ಹಿನ್ನೆಲೆ ತಡರಾತ್ರಿ ಶಿವಾನಂದ ನಿವಾಸಕ್ಕೆ ಆಗಮಿಸಿದ ಮಾಳಮಾರುತಿ ಪೊಲೀಸರು,ಅವರನ್ನು ಬಂಧಿಸಿದ್ದಾರೆ.*********************************

Back to top button