ಪ್ರಕೃತಿ ಬೆಳಗಾವಿ

*ಹುಷಾರಾಗಿ ಹೆಜ್ಜೆ ಇಡಿ: ವಿಜಯೇಂದ್ರಗೆ ಸಚಿವ ಸತೀಶ ಜಾರಕಿಹೊಳಿ ಸಲಹೆ*

ಪ್ರಕೃತಿ ಬೆಳಗಾವಿ ಸುದ್ದಿ : ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ರಾಜಕಾರಣದಲ್ಲಿ ಹುಷಾರಾಗಿ ಹೆಜ್ಜೆ ಇಡಬೇಕು. ಆಗ ಮಾತ್ರ ಅವರು ಯಶಸ್ವಿಯಾಗಲು ಸಾಧ್ಯ’ ಎಂದು ಸಚಿವ ಸತೀಶ ಜಾರಕಿಹೊಳಿ ಸಲಹೆ ನೀಡಿದರು

ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಬಿ.ಎಸ್‌.ಯಡಿಯೂರಪ್ಪ ಹೋರಾಟಗಾರರು. ತಳಹಂತದಿಂದ ಪಕ್ಷ ಸಂಘಟಿಸಿ ಮುಖ್ಯಮಂತ್ರಿ ಹುದ್ದೆಗೆ ಏರಿದವರು. ಮುಖ್ಯಮಂತ್ರಿ ಹುದ್ದೆಯಿಂದ ಕೆಳಗೆ ಇಳಿಸಿದವರೇ ಅಭಿಮಾನೋತ್ಸವ ಮಾಡುತ್ತಿದ್ದಾರೆ. ಇಂತಹವರ ಬಗ್ಗೆ ಅವರು ಎಚ್ಚರಿಕೆಯಿಂದ ಇರಬೇಕು’ ಎಂದರು.

ದಾವಣಗೆರೆ ಮತ್ತು ಬಾಗಲಕೋಟೆ ಉಪಚುನಾವಣೆ ಫಲಿತಾಂಶದ ಬಗ್ಗೆ ಪ್ರತಿಕ್ರಿಯಿಸಿ, ‘ಜನರು ಕಾಂಗ್ರೆಸ್‌ ಮೇಲೆ ಭರವಸೆ ಇಟ್ಟು ಮತ ಹಾಕಿದ್ದಾರೆ. ಪಂಚ ಗ್ಯಾರಂಟಿ ಯೋಜನೆಗಳು ಕಾಂಗ್ರೆಸ್‌ ಕೈಹಿಡಿದಿವೆ. ಕಾಂಗ್ರೆಸ್‌ ಪರ ಅಲೆ ಇದೆ ಎಂಬುದನ್ನು ಎರಡು ಕ್ಷೇತ್ರಗಳ ಗೆಲುವು ತೋರಿಸಿಕೊಟ್ಟಿದೆ. ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಮತ ಬಿಜೆಪಿಗೆ ಹೋಗಿವೆ ಹಾಗೂ ಬಿಜೆಪಿ ಮತ ಕಾಂಗ್ರೆಸ್‌ಗೆ ಬಂದಿವೆ’ ಎಂದು ಹೇಳಿದರು.**********************************

Back to top button