ಪ್ರಕೃತಿ ಬೆಳಗಾವಿ

*ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ನಡೆಸುತ್ತಿದ್ದವನಿಗೆ ಬಂಧಿಸಿ ಕ್ಯಾಂಪ್ ಪೊಲೀಸರಿಂದ 12.900 ರೂ ಹಣ ಜಪ್ತಿ *

ಪ್ರಕೃತಿ ಬೆಳಗಾವಿ ಸುದ್ದಿ : ಬೆಳಗಾವಿ : ಕ್ಯಾಂಪ್ ಠಾಣೆ ಪೊಲೀಸ್‌ರಿಂದ ಐಪಿಎಲ್ ಕ್ರಿಕೇಟ್ ಬೆಟ್ಟಿಂಗ್ ನಡೆಸುತ್ತಿದ್ದವನಿಗೆ ಬಂಧಿಸಿ 12,900/- ರೂ ಹಣ ಹಾಗೂ ಬೆಟ್ಟಿಂಗ್ ಬಳಸುತ್ತಿದ್ದ ಮೋಬೈಲ್ ಫೋನ್ ಜಪ್ತಿ.

ದಿನಾಂಕ: 01/05/2026 ರಂದು ಖಚಿತ ಮಾಹಿತಿ ಮೇರೆಗೆ ಶ್ರೀ. ಆನಂದ. ಎಂ. ಒನಕುದ್ರೆ, ಪೊಲೀಸ್ ಇನ್ಸಪೆಕ್ಟರ್, ಹಾಗೂ ಕ್ಯಾಂಪ್ ಪೊಲೀಸ್ ಠಾಣೆಯ ಸಿಬ್ಬಂದಿ ಜನರು ಸೇರಿ ದಾಳಿ ಮಾಡಿ ಕ್ರಿಕೇಟ್ ಬೆಟ್ಟಿಂಗ್ ಆಡುತ್ತಿದ್ದ ಆರೋಪಿತನಾದ,

1] ಸಾಹೀಲ ರಮೇಶ ಪಾಟೀಲ್, ವಯಸ್ಸು: 23 ವರ್ಷ, ಸಾ: ಶಾಸ್ತಿ ನಗರ, ಬೆಳಗಾವಿ ಇವನಿಂದ ಕ್ರಿಕೇಟ್ ಬೆಟ್ಟಿಂಗ್ ಆಟಕ್ಕೆ ಸಂಬಂಧಪಟ್ಟಂತೆ ಜಪ್ತ ಮಾಡಿದ ಮಾಲಿನ ವಿವರ.

1] ರಿಯಲ್ ಮೀ ಎಮ್‌ಐ ಕಂಪನಿಯ ಮೋಬೈಲ್ ಫೋನ್ ಒಂದು

2] ನಗದು ಹಣ 12,900/- ರೂ ಇವನಿಗೆ ವಶಕ್ಕೆ ಪಡೆದು

ಈ ಬಗ್ಗೆ ಕ್ಯಾಂಪ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ಆರೋಪಿತನಿಗೆ ದಸ್ತಗೀರ ಮಾಡಿ ಕ್ರಮ ಕೈಕೊಂಡಿದ್ದು ಹಾಗೂ ಈ ಪ್ರಕರಣದಲ್ಲಿ ಇನ್ನೂ ಯಾರಾದರೂ ಆರೋಪಿತರು ಶಾಮೀಲಾಗಿದ್ದರ ಬಗ್ಗೆ ತನಿಖೆ ಪ್ರಗತಿಯಲ್ಲಿ.

ಈ ವಿಶೇಷ ತಂಡದಲ್ಲಿ ಕಾರ್ಯ ನಿರ್ವಹಿಸಿದ ಅಧಿಕಾರಿ ಮತ್ತು ಸಿಬ್ಬಂದಿಯವರಾದ ಶ್ರೀ. ಎಸ್. ಎಸ್. ಸೊಲ್ಲಾಪೂರೆ, ಎಎಸ್‌ಐ ಸಿಬ್ಬಂದಿ ಜನರಾದ ಬಸವರಾಜ. ಪ. ಉಜ್ಜಿನಕೊಪ್ಪ, ಪಿ. ಟಿ. ಪಮ್ಮಾರ, ಭರಮಾ. ಎಮ್. ಕರೆಗಾರ, ಸಿ. ಜಿ. ನಾಯ್ಕ ಇವರೆಲ್ಲರ ಕಾರ್ಯವನ್ನು ಮಾನ್ಯ ಪೊಲೀಸ್ ಆಯುಕ್ತರು ಶ್ಲಾಘೀಸಿರುತ್ತಾರೆ.*****************************

Back to top button