*ಬಹಿಷ್ಕಾರ ಆರೋಪದ ಹಿನ್ನಲೆ 9 ಜನರ ಮೇಲೆ ದೂರು ದಾಖಲು*

ಪ್ರಕೃತಿ ಬೆಳಗಾವಿ ಸುದ್ದಿ : ಬೆಳಗಾವಿ ತಾಲೂಕಿನ ಕೊಂಡಸಕೊಪ್ಪ ಗ್ರಾಮದಲ್ಲಿ ನಡೆದಿದ್ದ ಘಟನೆ..
ಸಚಿವೆ ಹೆಬ್ಬಾಳ್ಕರ್ ಕ್ಷೇತ್ರದಲ್ಲೇ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ ಪ್ರಕರಣ.
ಕುರುಬ ಸಮಾಜದ ಕುಟುಂಬಕ್ಕೆ ಬಹಿಷ್ಕಾರ ಹಾಕಿದ್ದ ಪಂಚಕಮೀಟಿ ಮುಖಂಡರು.
ಮಾತನಾಡಿದ್ರೆ ₹5000 ದಂಡ, ಮಾಹಿತಿ ಕೊಟ್ಟರೆ ₹1000 ಬಹುಮಾನ ಘೋಷಿಸಿದ್ದ ಪಂಚ ಕಮೀಟಿ.
ದೇವಸ್ಥಾನ ಪೂಜೆ, ಪ್ರೀತಿ ವಿಚಾರಕ್ಕೆ ಗ್ರಾಮದ ಕುರುಬ ಸಮಾಜದ ಪಂಚರಿಂದಲೇ ಬಹಿಷ್ಕಾರ.
ಮದುವೆ,ಕಾರ್ಯಕ್ರಮಗಳಿಗೆ ಆಹ್ವಾನ ಇಲ್ಲದೆ ಒಂಟಿಯಾಗಿದ್ದ ಕುಟುಂಬ.
ಬಹಿಷ್ಕಾರಕ್ಕೆ ಒಳಗಾದ ಕುಟುಂಬದಿಂದ ಹಿರೇಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲು.
ದೂರು ದಾಖಲಾದ ಹಿನ್ನಲೆ 9 ಜನರ ವಿರುದ್ದ ಎಪ್ ಐಆರ್ ದಾಖಲು.
ಮಲ್ಲಪ್ಪ,ವಿಠ್ಠಲ, ಬಾಗಣ್ಣಾ, ರಮೇಶ,ಮಾಳಿಂಗ, ವೈಜು, ಗಂಗಪ್ಪ, ಪಿರಾಜಿ,ಯಲ್ಲಪ್ಪಾ ಸಾಂಬ್ರೇಕರ್, ವಿರುದ್ದ ದೂರು ದಾಖಲು.
ತಡರಾತ್ರಿ ಮನೆ ಮೇಲೆ ಕಲ್ಲು ತೂರಾಟ ಮಾಡಿದ ಆರೋಪದ ಮೇರೆಗೆ ದೂರು ದಾಖಲು.
ಹಿರೇಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲು.************************************






