*ಖಾನಾಪುರ ಬುಡಕಟ್ಟು ಜನಾಂಗಕ್ಕೆ ಸೌಕರ್ಯ ಹಾಗೂ ಕಾಳೆನಟ್ಟಿ ಗ್ರಾಮಕ್ಕೆ 1 ಎಕರೆ ಸ್ಮಶಾನ ಭೂಮಿ ನೀಡುವಂತೆ ಸಭೆಯಲ್ಲಿ ಧ್ವನಿ ಎತ್ತಿದ*- ಮಹೇಶ್ ಎಸ್ ಶೀಗಿಹಳ್ಳಿ*

ಪ್ರಕೃತಿ ಬೆಳಗಾವಿ ಸುದ್ದಿ : ಬೆಳಗಾವಿ ಜಿಲ್ಲಾಡಳಿತ ಜಿಲ್ಲಾ ಪಂಚಾಯತ್ ಹಾಗೂ ಸಮಾಜ ಕಲ್ಯಾಣ ಇಲಾಖೆ ಬೆಳಗಾವಿ ಡಾ . ಮೂರ್ತಿ ಎಲ್ ಸನ್ಮಾನ್ಯ ಅಧ್ಯಕ್ಷರ ನೇತೃತ್ವದಲ್ಲಿ ಬೆಳಗಾವಿ ಸುವರ್ಣ ಸೌಧದಲ್ಲಿ ನಡೆದ ಕರ್ನಾಟಕ ರಾಜ್ಯಕ್ ಅನುಸೂಚಿಗಳ ಜಾತಿಗಳು ಮತ್ತು ಅನುಸೂಚಿತ ಬುಡಕಟ್ಟುಗಳ ಆಯೋಗ ಬೆಂಗಳೂರು ಇವರ ಅಧ್ಯಕ್ಷತೆಯಲ್ಲಿ ಜಿಲ್ಲಾ ಮಟ್ಟದ *ಪ್ರಗತಿ ಪರಿಶೀಲನಾ ಸಭೆ* ಯಲ್ಲಿ ಖಾನಾಪುರ ತಾಲೂಕಿನ ಅರಣ್ಯ ಪ್ರದೇಶದಲ್ಲಿ ನಿಜವಾದ ಬುಡಕಟ್ಟು ಇತಿಹಾಸ ಹೊಂದಿದ ನೂರಾರು ಕುಟುಂಬಗಳು ಇದ್ದು ಇವರು ಈಗಲೂ ಕೂಡ ಸರಕಾರದ ಯಾವುದೆ ಗುರಿತಿನ ಚೀಟಿ ಆಧಾರ ಕಾರ್ಡ್ ಪಡಿತರ ಚೀಟಿ ಹಾಗೆ ಸರಕಾರದ ಸೌಲಭ್ಯಗಳು ಇಲ್ಲದೆ ಬದುಕಿನ ಜೊತೆ ಹಾಗೂ ಸೌಲಭ್ಯ ನೀಡದ ಅಧಿಕಾರಿಗಳ ಜೊತೆ ಕಾಡಿನ ಪ್ರಾಣಿಗಳ ಜೊತೆ ದಿನ ನಿತ್ಯದ ಸಾವು ಬದುಕಿನ ಮದ್ಯ ಹೋರಾಟ ನಡೆಸುತ್ತಿದ್ದು.
ಈ ವಿಚಾರವಾಗಿ ಅದಿಕಾರಿಗಳು ಹಾಗೂ ಸರಕಾರ ಗಮನ ಹರಿಸಬೇಕು ನ್ಯಾಯ ಒದಗಿಸಬೇಕು ಎಂದು ಆಯೋಗದ ಸಭಾಧ್ಯಕ್ಷರಲ್ಲಿ ಮನವಿ ಮಾಡುತ್ತಾ ಖಾನಾಪುರ ತಾಲೂಕಿನಲ್ಲಿ ಕೆಲವು ಹಳ್ಳಿಗಳಲ್ಲಿ ಶೇಖಡಾ 70% ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ಸಮುದಾಯದ ಜನ ಇದ್ದು ಅಲ್ಲಿ ಕಲ್ಲು ಗಣಿಗಾರಿಕೆ ನಡೆಸಿ ದಿನನಿತ್ಯ ಕುಡಿಯಲು ಬಳಸುವ ಬೋರ್ವೆಲ್ ನೀರಿನಲ್ಲಿ ಕಲ್ಲು ಗಣಿಗಾರಿಕೆ ಬ್ಲ್ಯಾಷ್ಟಿಂಗ್ ಅಂಶಗಳು ವಿಷಕಾರಿ ಕೆಮಿಕಲ್ ಬೆರೆಯುತಿದ್ದು ಜನರ ಆರೋಗ್ಯದ ಮೇಲೆ ಪರಿಣಾಮ ಬಿರಿ ಸಮಸ್ಯೆಗಳು ಉಂಟು ಆಗುತ್ತಿದ್ದು ಇದರ ಬಗ್ಗೆ ಮಾನ್ಯ ಜಿಲ್ಲಾಧಿಕಾರಿಗಳು ಗಮನ ಹರಿಸಬೇಕು ಎಂದು ತಿಳಿಸಿ.
ಬೆಳಗಾವಿ ತಾಲೂಕಿನ ಕಾಳೆನಟ್ಟಿ ಗ್ರಾಮದಲ್ಲಿ ಸ್ಮಶಾನ ಭೂಮಿ ಇಲ್ಲದೆ ಶವ ಸಂಸ್ಕಾರ ಮಾಡಲು ಜಮೀನು ಇದ್ದ ಮಾಲೀಕರು ಸ್ವ ಜಮೀನುಗಳಲ್ಲಿ ಶವಗಳನ್ನು ಮಣ್ಣುಮಾಡುತ್ತಾರೆ ಆದರೆ ಜಮೀನು ಇಲ್ಲದ ಬಡ ಕುಟುಂಬದ ಸದಸ್ಯರು ಶವ ಸಂಸ್ಕಾರ ಮಾಡಲು ಒದ್ದಾಡುತ ಪರಸ್ಥಿತಿ ನಿರ್ಮಾಣ ವಾಗಿದ್ದು ಈ ವಿಚಾರದ ಬಗ್ಗೆ ಅದಿಕಾರಿಗಳು ಸ್ಪಂದಿಸಿ ಕಾಳೆನಟ್ಟಿ ಗ್ರಾಮಕ್ಕೆ 1 ಎಕರೆ ಸ್ಮಶಾನ ಭೂಮಿ ನೀಡಬೇಕು ಎಂದು ಮಾನ್ಯ ಸಭಾಧ್ಯಕ್ಷರಲ್ಲಿ ಅಧಿಕಾರಿಗಳಲ್ಲಿ ಕರ್ನಾಟಕ ಪರಿಶಿಷ್ಟ ಪಂಗಡ ವಾಲ್ಮೀಕಿ ರಾಜ್ಯ ಯುವ ಘಟಕ ರಾಜ್ಯಾದ್ಯಕ್ಷರು ಮಹೇಶ್ ಎಸ್ ಶೀಗಿಹಳ್ಳಿ ಸಭೆಯಲ್ಲಿ ಮಾತನಾಡಿ ಸಮಸ್ಯೆ ತಿಳಿಸಿದರು . ಇದಕ್ಕೆ ಆಯೋಗದ ಅಧ್ಯಕ್ಷರಾದ ಮೂರ್ತಿ ರವರು ಸ್ಪಂದಿಸಿದರು
ಈ ಸಭೆಯಲ್ಲಿ ಬೆಳಗಾವಿ ಜಿಲ್ಲೆಯ ಎಲ್ಲಾ ತಾಲೂಕಿನ ಮುಖಂಡರು ಬಾಗವಹಿಸಿದ್ದರು.**************************************






