ಪ್ರಕೃತಿ ಬೆಳಗಾವಿ
*ಸಾರ್ಜಜನಿಕ ಸ್ಥಳದಲ್ಲಿ ಮಡಕಾ ಆಡುತ್ತಿದ್ದ ವೇಳೆ ದಾಳಿ ನಡೆಸಿ ಇಬ್ಬರು ಆರೋಪಗಳನ್ನು ಬಂಧಿಸಿದ ಮಾರ್ಕೇಟ್ ಪೊಲೀಸರು*

ಪ್ರಕೃತಿ ಬೆಳಗಾವಿ ಸುದ್ದಿ : ಬೆಳಗಾವಿ : ನಗರದ ಸಾರ್ವಜನಿಕರ ಸ್ಥಳದಲ್ಲಿ ಸಂಖ್ಯೆಗಳ ಮೇಲೆ ಹಣ ಪಡೆದು ಮುಂಬೈ-ಮಟಕಾ ಆಟ ಆಡುತ್ತಿದ್ದ ವೇಳೆ ಮಾರ್ಕೇಟ್ ಪೊಲೀಸರು ದಾಳಿ ನಡೆಸಿ ಇಬ್ಬರು ಆರೋಫಿಗಳನ್ನು ಬಂಧಿಸಿದ್ದಾರೆ.
ಪ್ರಶಾಂತ ಭರಮಾ ಪಾಟೀಲ (29) ಹಾಗೂ ಪ್ರತೀಕ ಮೋಹನ ಜಾಧವ (35) ಬಂಧಿತ ಆರೋಪಿಗಳು. ಆರೋಪಿತರಿಂದ ಹಣ ಹಾಗೂ ಓಸಿ ಚೀಟಿಗಳನ್ನು ವಶಕ್ಕೆ ಪಡೆದ ಪೊಲೀಸರು.
ಆರೋಪಿಗಳು ಆಟದಿಂದ ಸಂಗ್ರಹಿಸಿದ ಹಣವನ್ನು ಇನ್ನೋರ್ವ ಆರೋಪಿ ಗಜಾನನ ಶಶಿಕಾಂತ ಗರಡ ಎಂಬಾತನಿಗೆ ನೀಡಿರುವುದು ಬೆಳಕಿಗೆ ಬಂದಿದೆ.
ಮೂವರೂ ಆರೋಪಿತರ ವಿರುದ್ಧ ಮಾರ್ಕೆಟ ಪೊಲೀಸ್ ಠಾಣೆ ಪ್ರಕರಣ ಸಂಖ್ಯೆ. 89/2026, ಕಲಂಃ 78(3) ಕೆ. ಪಿ. ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಜರುಗಿಸಿ, ಪ್ರಕರಣದ ತನಿಖೆ ಮುಂದುವರೆಸಲಾಗಿದೆ.***************************






