ಪ್ರಕೃತಿ ಬೆಳಗಾವಿ
*ಎಂಇಎಸ್ ನಾಯಕ ಶುಭಂ ಶೆಳಕೆ, ಮನೋಹರ್ ಹುಂದ್ರೆಗೆ ನ್ಯಾಯಾಂಗ ಬಂಧನ*

ಪ್ರಕೃತಿ ಬೆಳಗಾವಿ ಸುದ್ದಿ : ಬೆಳಗಾವಿ : ಖಡೇಬಜಾರ್ ಪೊಲೀಸ್ ಠಾಣೆಯ ಅಪರಾಧ ಸಂಖ್ಯೆ 12/2025 ಹಾಗೂ ಬೆಳಗಾವಿಯ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಎಸ್‌ಸಿ ನಂ. 285/2025ರ ಪ್ರಕರಣದ ಆರೋಪಿಗಳಾದ ಎಂಇಎಸ್ ನಾಯಕ ಶುಭಂ ವಿಕ್ರಾಂತ ಶೆಳಕೆ ಮತ್ತು ಮನೋಹರ್ ಅಪ್ಪಾಜಿ ಹುಂದ್ರೆ ಅವರನ್ನು ನ್ಯಾಯಾಲಯವು ನವೆಂಬರ್ 4ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ನಿಗದಿತ ಅವಧಿಯಲ್ಲಿ ನ್ಯಾಯಾಲಯಕ್ಕೆ ಹಾಜರಾಗದ ಹಿನ್ನೆಲೆಯಲ್ಲಿ ಇಬ್ಬರ ವಿರುದ್ಧ ನ್ಯಾಯಾಲಯವು ಉದ್ಘೋಷಣೆ (ಪ್ರೊಕ್ಲಮೇಷನ್) ಹೊರಡಿಸಿತ್ತು.
ನ್ಯಾಯಾಲಯದ ಆದೇಶದಂತೆ ತಲೆಮರೆಸಿಕೊಂಡ ಆರೋಪಿಗಳೆಂದು ಪರಿಗಣಿಸಲಾಗಿದ್ದ ಇಬ್ಬರನ್ನೂ ಅಕ್ಟೋಬರ್ 22ರಂದು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು.
ವಿಚಾರಣೆ ನಡೆಸಿದ ನ್ಯಾಯಾಲಯವು ಇಬ್ಬರನ್ನೂ ನವೆಂಬರ್ 4, 2026ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶಿಸಿದೆ.****************************






