ಪ್ರಕೃತಿ ಬೆಳಗಾವಿ

*ಬೆಳಗಾವಿಯ ಖ್ಯಾತ ವಕೀಲೆ ಮನೆ ಮೇಲೆ ಗುಂಡಿನ ದಾಳಿ; ಪುತ್ರಿ ಅಪಾಯದಿಂದ ಪಾರು*

ಪ್ರಕೃತಿ ಬೆಳಗಾವಿ ಸುದ್ದಿ : ಬೆಳಗಾವಿ : ನಗರದ ಖ್ಯಾತ ವಕೀಲೆಯೊಬ್ಬರ ಮನೆ ಮೇಲೆ ಗುಂಡಿನ ದಾಳಿ ನಡೆದಿದ್ದು, ಇದರಿಂದ ಸ್ಥಳೀಯರಲ್ಲಿ ಆತಂಕ ಮೂಡಿದೆ. ಬೆಳಗಾವಿ ನಗರದ ಮಾಂಡೋಳಿ ರಸ್ತೆಯಲ್ಲಿರುವ ವಕೀಲೆ ಪೂಜಾ ಕಾಕತಕರ್​ ಮನೆ ಮೇಲೆ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದಾರೆ.

ನಿನ್ನೆ  ಮಧ್ಯೆ ರಾತ್ರಿ ಕಿಡಿಗೇಡಿಗಳು ಫೈರಿಂಗ್​ ಮಾಡಿದ್ದು, ಈ ಸಂಬಂಧ ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೆಳಗಾವಿ ಜಿಲ್ಲೆಯಲ್ಲಿ ಪ್ರಭಾವಿ ವಕೀಲೆಯಾಗಿರುವ ಪೂಜಾ ಕಾಕತಕರ್​ ಅವರು ಕಳೆದ 18 ವರ್ಷಗಳಿಂದ ವಕೀಲೆ ವೃತ್ತಿಯಲ್ಲಿ ತೊಡಗಿದ್ದಾರೆ. ಹೈ ಪ್ರೊಫೈಲ್ ಕೇಸ್​ಗಳ ಪರ ವಾದ ಮಾಡುತ್ತಿದ್ದರು. ಆದರೆ ನಿನ್ನೆ ರಾತ್ರಿ ದುಷ್ಕರ್ಮಿಗಳಿಂದ ಅವರ ಮನೆ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಮನೆಯ ಮೊದಲ ಮಹಡಿಯನ್ನು ಗುರಿಯಾಗಿಸಿ ದಾಳಿ ನಡೆಸಿದ್ದಾರೆ.

ಮನೆಯ ಮೊದಲ ಮಹಡಿಯಲ್ಲಿ ವಕೀಲೆ ಪೂಜಾ ಅವರ ಪುತ್ರಿ ಸಂಸ್ಕೃತಿ ಓದುತ್ತಾ ಕುಳಿತಿದ್ದರು ಎಂದು ತಿಳಿದು ಬಂದಿದ್ದು, ಗುಂಡಿನ ದಾಳಿಗೆ ಮನೆಯ ಗ್ಲಾಸ್​ ಮೇಲೆ ಫೈರಿಂಗ್​ ಮಾರ್ಕ್​ ಬಿದ್ದಿದೆ. ದಾಳಿ ವೇಳೆ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಈ ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಮತ್ತು ಸುಕೋ ಟೀಂ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೇ ಗುಂಡು ತಗುಲಿರೋ ಗ್ಲಾಸ್​ ಅನ್ನು ಎಫ್​ಎಸ್​ಎಲ್​ಗೆ ರವಾನಿಸಲಾಗಿದ್ದು, ಎಫ್‌ಎಸ್‌ಎಲ್‌ ವರದಿಗಾಗಿ ಕಾಯುತ್ತಿರುವ ಬೆಳಗಾವಿ ಪೊಲೀಸರು, ವಕೀಲೆ ಪೂಜಾ ಅವರಿಗೆ ರಕ್ಷಣೆ ನೀಡುವ ಭರವಸೆಯನ್ನು ನೀಡಿದ್ದಾರೆ.**********************************

Back to top button