ಪ್ರಕೃತಿ ಬೆಳಗಾವಿ

ಬೆಳಗಾವಿ ನಗರದಲ್ಲಿ ಅನಧಿಕೃತ ವಸತಿ ನಕ್ಷೆ ಹಾಗು 220 ಕೆವಿ ಲೈನ್ ಕೆಳಗೆ ಗಾರ್ಡನ್..?

ಪ್ರಕೃತಿ ಬೆಳಗಾವಿ ಸುದ್ದಿ : ಬೆಳಗಾವಿ : ರಾಜ್ಯದ ಎರಡನೇ ರಾಜಧಾನಿ ಎಂದೆ ಕರೆಯಲ್ಪಡವು ಬೆಳಗಾವಿ ನಗರವು ದಿನದಿಂದ ದಿನಕ್ಕೆ ಅಭಿವೃದ್ದಿ ಹೊಂದುತ್ತಾ, ಬೃಹತ್ತ ನಗರವಾಗಿ ಬೆಳೆಯುತ್ತಾ ಬರುತ್ತಿದ್ದೆ,,ಆದರೆ ನಗರ ಬೆಳೆದಂತೆ ರಿಯಲ್ ಎಸ್ಟೇಟ್ ಕೂಡ ಬೆಳೆದಿದೆ…ಬೆಳವಣಿಗೆ ಸಹಜ.ಆದರೆ ವೈಜ್ಞಾನಿಕವಾಗಿ ಬೆಳೆಯುತ್ತಿಲ್ಲಾ…ನಗರದ ಸುತ್ತಮುತ್ತ ಇರುವ ಬಹುತೇಕ ಹಳ್ಳಿಗಳಲ್ಲಿ ಸರಿಯಾಗಿ ವಸತಿ ನಕ್ಷೆಯ ಪರವಾಣಗಿ ಪಡೆಯತ್ತಿಲ್ಲ..ಇದಕ್ಕೆ ಕೆಲವು ರಿಯಲ್ ಎಸ್ಟೇಟ್ ದಂಧೆಕೋರರು ತಮಗೆ ತಿಳಿದ ಹಾಗೆ ವರ್ತಿಸುತ್ತಿದ್ದಾರೆ.

ಮಾನ್ಯ ಜಿಲ್ಲಾಧಿಕಾರಿಗಳ ಪರವಾಣಿಗೆ ಅಂದರೆ ವಸತಿ ವಲಯಕ್ಕಾಗಿ ಎನ್ .ಎ (ಕೃಷಿಯೇತರ) ಗಳನ್ನು ಮಾನ್ಯ ಜಿಲ್ಲಾಧಿಕಾರಿಗಳ ಮೂಲಕ ಮಾಡಿಸುತ್ತಿಲ್ಲ. ಹಾಗಾಗಿ ಎಲ್ಲಿ ಬೇಕಾದಲ್ಲಿ ನಗರದ ತುಂಬೆಲ್ಲಾ ಅನಧಿಕೃತ ಲೇ ಔಟ್ ಗಳು ತೆಲೆ ಎತ್ತಿವೆ..ಇದಕ್ಕೆ ಬೆಳಗಾವಿ ನಗರಾಭಿವೃದ್ದಿ ಇಲಾಖೆಯ ಅಧಿಕಾರಿಗಳ ಕುಮ್ಮಕ್ಕು ಎದ್ದು ಕಾಣಿಸುತ್ತಿದೆ.

ನಂತರ ನಗರದ ಬಿಲ್ಡರ್ ಗಳು ಮೊದಲು ವಸತಿ ನೀಲಿ ನಕ್ಷೆಯ ಪರವಾಣಿಗೆ ಪಡೆಯಬೇಕಾದರೆ ಕನಿಷ್ಠ ಅನುಮೋದಿತ ವಿನ್ಯಾಸ ನಕ್ಷೆಯಲ್ಲಿರುವಂತೆಯೇ ನಿವೇಶನಗಳು, ರಸ್ತೆ ನಿರ್ಮಾಣ, ಪಕ್ಕಾ ಗಟಾರು ನಿರ್ಮಾಣ ವಿದ್ಯತ್ತೀಕರಣ,ಕುಡಿಯುವ ನೀರು ಸರಬರಾಜು ವ್ಯವಸ್ಥೆ, ಒಳಚರಂಡಿ ವ್ಯವಸ್ಥೆ ಹಾಗು ಉದ್ಯಾನವನ ಪ್ರದೇಶಗಳನ್ನು ವಿನ್ಯಾಸ ಮಾಲೀಕರು ಅಭಿವೃದ್ಧಿ ಪಡಿಸತಕ್ಕದ್ದು ಎಂಬ ಕರಾರಿನೊಂದಿಗೆ ಪೂರ್ವನುಮತಿ ಪಡೆಯುತ್ತಾರೆ ಆದರೆ ಯಾವ ಲೇಔಟ್ ಮಾಲೀಕರು ಈ ಕರಾರುಗಳನ್ನು ಪಾಲಿಸುತ್ತಿಲ್ಲ.

ಅಲ್ಲದೆ ಬುಡಾದ ಅಧಿಕಾರಿಗಳು ವಸತಿ ವಿನ್ಯಾಸಗಳಿಗೆ ಭೇಟಿ ನಿಡದೆ ತಮಗೆ ತಿಳಿದ ಹಾಗೆ ಅನುಮತಿ ನೀಡುತ್ತಿದ್ದಾರೆ..ಮಾನ್ಯ ಜಿಲ್ಲಾಧಿಕಾರಿಗಳು ಬುಡಾ ಅಧ್ಯಕ್ಷರಾಗಿರುವುದರಿಂದ ಅಧಿಕಾರಿಗಳ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸುತ್ತಿದ್ದೇನೆ..
ಬುಡಾದ ವಸತಿ ನಕ್ಷೆಯ ಮೇಲೆ ಕರೆಂಟ ಹಾದು ಹೋಗಿದೆ.

ಇನ್ನು ನಗರದ ರಾಮತಿರ್ಥನಗರ, ಕಣಬುರ್ಗಿ, ಯಮನಾಪುರ ಸೇರಿದಂತೆ ಹಲವು ಕಡೆ ಕೆಪಿಟಿಸಿಎಲ್ ನ 220 ಹಾಗು 110 ಕೆವಿಗಳು ಹಾದು ಹೋಗಿವೆ..ಹಾದು ಹೋದ ಸರ್ವೆಗಳ ವ್ಯಾಪ್ತಿಯಲ್ಲಿ ಯಾವುದೆ ನಾಗರೀಕ ಚಟುವಟಿಕೆಗಳನ್ನು ಮಾಡಬಾರದು ಎಂಬ ನಿಯಮ ಇದೆ ಆದರೆ ಈ ನಿಯಮಗಳನ್ನು ಗಾಳಿಗೆ ತೂರಿರುವ ಬುಡಾ ಅಧಿಕಾರಿಗಳು ಹಾದು ಹೋಗುವ ಲೈನಗಳ ಕೆಳಗಡೆ ಉದ್ಯಾನವನ ಅಭಿವೃದ್ಧಿಪಡಿಸಿದ್ದಾರೆ..ಹೀಗಾಗಿ ಮುಂದಿನ ದಿನಗಳಲ್ಲಿ ಎನಾದರೂ ಕರೆಂಟ ಅನಾಹುತ ಆದರೆ ಯಾರು ಜವಬ್ದಾರರು..ಕೂಡಲೆ ಹಾದು ಹೋದ ಲೈನ್ ಗಳ ಕೆಳಗೆ ಅಭಿವೃದ್ದಿ ಪಡಿಸಿದ ಉದ್ಯಾನವನಗಳನ್ನು ತೆರವು ಮಾಡಲು ಮಾನ್ಯ ಜಿಲ್ಲಾಧಿಕಾರಿಗಳು ಈ ಕೂಡಲೆ ಕ್ರಮವಹಿಸಬೇಕೆಂದು ಒತ್ತಾಹಿಸುತ್ತೇನೆ ಎಂದು
ಚನ್ನಪ್ಪ ಮ ವಗ್ಗನ್ನವರ
ಮಾಹಿತಿ ಹಕ್ಕು ಕಾರ್ಯಕರ್ತರು ಹಾಗು ಜೆಡಿಎಸ್ ಮುಖಂಡರು ಬೆಳಗಾವಿ ನಮ್ನ ಪತ್ರಿಕೆಗೆ ತಿಳಿಸಿದ್ದಾರೆ.****************************

Back to top button