ಪ್ರಕೃತಿ ಬೆಳಗಾವಿ

ರಾಷ್ಟ್ರ ಧ್ವಜಕ್ಕೆ ಅಪಮಾನ ಮಾಡಿದ ಅಧಿಕಾರಿಯ ಮೇಲೆ ಕ್ರಮ ಯಾವಾಗ..??

ಪ್ರಕೃತಿ ಬೆಳಗಾವಿ ಸುದ್ದಿ : ಖಾನಾಪುರ : ತಾಲೂಕಿನ ಬೆಕವಾಡ ಗ್ರಾಮ ಪಂಚಾಯತಿ ಮುಂದೆ ಫೆಬ್ರುವರಿ ನಂದು ರಾತ್ರಿಯಿಡೀ ರಾಷ್ಟ್ರ ಧ್ವಜ ಹಾರಿಸಿ ರಾಷ್ಟ್ರ ಧ್ವಜಕ್ಕೆ ಅಪಮಾನ ಮಾಡಿರುವ ಘಟನೆ ನಡೆದಿದ್ದು ಈ ಕುರಿತಾಗಿ ಸುದ್ದಿ ಭಿತ್ತರಿಸಿದ್ದ ಪತ್ರಿಕೆ ಸೇರಿದಂತೆ ಎಲ್ಲ ಸುದ್ದಿವಾಹಿನಿಗಳಲ್ಲಿ ಸುದ್ದಿ ಕೂಡ ಪ್ರಕಟವಾಗಿತ್ತು ಸುದ್ದಿಯನ್ನ ಗಮನಿಸಿದ ಭೀಮ ಆರ್ಮಿ ಏಕತಾ ಮಿಷನ್ ಅಧ್ಯಕ್ಷ ಸಂದೀಪ ಚಲವಾದಿ ಬೆಕವಾಡ ಗ್ರಾಮ ಪಂಚಾಯತಿ ಮುಂದೆ ಪ್ರತಿಭಟನೆ ಕೂಡ ನಡೆಸಿದ್ದರು ಆದರೆ ತನ್ನ ತಪ್ಪನ್ನು ಕೆಳ ವರ್ಗದ ಸಿಬ್ಬಂದಿ ಮೇಲೆ ಹಾಕಲು ಅಲ್ಲಿನ ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿ ನಾಗಪ್ಪ ಬನ್ನಿ ಹಾಕಲು ಯತ್ನಿಸಿದ್ದಾರೆ.

ಆದರೆ ಅದಕ್ಕೆ ಒಪ್ಪದ ಸಂಘಟನೆಗಳು ಪಂಚಾಯತ ಅಭಿವೃದ್ಧಿ ಅಧಿಕಾರಿಯನ್ನ ಕೂಡಲೇ ಅಮಾನತ್ತು ಮಾಡಬೇಕೆಂದು ಪಟ್ಟು ಹಿಡಿದು ಕುಳಿತಾಗ ಹಿರಿಯ ಅಧಿಕಾರಿಗಳು ಕ್ರಮ ಕೈಗೊಳ್ಳುವದಾಗಿ ಭರವಸೆ ನೀಡಿ ಕಾಲ್ಕಿತ್ತಿದ್ದರು ಆದ್ರೆ ಇದಕ್ಕೊಪ್ಪದ ಭೀಮ ಆರ್ಮಿ ಏಕತಾ ಮಿಷನ್ ಅಧ್ಯಕ್ಷ ಸಂದೀಪ ಚಲವಾದಿ ಈ ಕುರಿತಾಗಿ ನಂದಗಡ ಪೊಲೀಸ್ ಠಾಣೆಗೆ ತೆರಳಿ ರಾಷ್ಟ್ರ ಧ್ವಜಕ್ಕೆ ಅಪಮಾನ ತಡೆಗಟ್ಟುವ ಅಧಿನಿಯಮ-1971 ರ ಅಡಿಯಲ್ಲಿ ಪ್ರಕರಣ ಕೂಡ ದಾಖಲಿಸಿದ್ದಾರೆ. ಆದರೆ ಘಟನೆ ನಡೆದು ವಾರವೇ ಕಳೆದಿದ್ದರೂ ರಾಷ್ಟ್ರ ಧ್ವಜಕ್ಕೆ ಅಪಮಾನ ಎಸಗಿದ ಅಧಿಕಾರಿಯ ಮೇಲೆ ಯಾವ ಕ್ರಮವೂ ಜರುಗಿಸಿಲ್ಲ.
 
ಅಲ್ಲದೇ ಈ ಪ್ರಕರಣವನ್ನು ಇಲ್ಲಿಗೇ ಕೈಬಿಡುವಂತೆ ಮತ್ತು ಪೊಲೀಸ್ ಠಾಣೆಯಲ್ಲಿ ದಾಖಲಿಸಿದ ಪ್ರಕರಣವನ್ನು ಹಿಂತೆದುಕೊಳ್ಳುವಂತೆ ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿ ನಾಗಪ್ಪ ಬನ್ನಿ ಸಂದೀಪ ಚಲವಾದಿ ಹಾಗೂ ಸಾಕ್ಷಿದಾರರಿಗೆ ಪ್ರಭಾವಿಗಳ ಕಡೆಯಿಂದ ಒತ್ತಡ ಹೇರುವ ಕೆಲಸ ಮಾಡುತ್ತಿದ್ದಾರೆ ಎಂದು ಸಂದೀಪ ಚಲವಾದಿ ಆರೋಪ ಮಾಡಿದ್ದು ಇದು ದೇಶಾಭಿಮಾನಕ್ಕೆ ಸಂಬಂಧಿಸಿದ ಪ್ರಕರಣ ಈ ಕುರಿತಾಗಿ ಎರಡು ದಿನಗಳ ಒಳಗಾಗಿ ತಪ್ಪಿತಸ್ಥ ಅಧಿಕಾರಿಯ ಮೇಲೆ ಕ್ರಮ ಕೈಗೊಳ್ಳದೇ ಹೋದಲ್ಲಿ ಜಿಲ್ಲಾ ಪಂಚಾಯತಿ ಮುಂದೆ ಉಗ್ರ ಪ್ರತಿಭಟನೆ ಹನ್ಮಿಕೊಳ್ಳುವದಾಗಿ ಎಚ್ಚರಿಕೆ ನೀಡಿದ್ದಾರೆ‌.*********************************

Back to top button