ಪ್ರಕೃತಿ ಬೆಳಗಾವಿ

*ಹೆದ್ದಾರಿಯಲ್ಲಿ ಚಾಲಕನಿಗೆ ಹಲ್ಲೆ ಮಾಡಿ ದರೋಡೆ: ಮೂವರು ಅರೆಸ್ಟ್*

ಪ್ರಕೃತಿ ಬೆಳಗಾವಿ ಸುದ್ದಿ : ಬೆಳಗಾವಿ : ಇಂಡಾಲ್ಕೋ  ಬ್ರಿಡ್ಜ್‌ ಹೈವೇಯಲ್ಲಿ ಬುಲೆರೋ ಚಾಲಕನಿಗೆ ಹಲ್ಲೆ ನಡೆಸಿ ಹಣ ಹಾಗೂ ಮೊಬೈಲ್ ದೋಚಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಳಮಾರುತಿ ಠಾಣೆ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.

ಅಕ್ಟೋಬರ್ 15ರಂದು ನಸುಕಿನ ಜಾವ 2 ಗಂಟೆ ಸುಮಾರಿಗೆ ಘಟನೆ ನಡೆದಿದ್ದು, ಪ್ರಕಾಶ ಕಟಾಬಳಿ (18), ಅಮಿತ ಪಾಟೀಲ (20) ಹಾಗೂ ಓಂ ಪೂಜಾರಿ (23) ಬಂಧಿತ ಆರೋಪಿಗಳು. ಆರೋಪಿಗಳಿಂದ 41 ಸಾವಿರ ಮೌಲ್ಯದ ವಿವೋ ಮೊಬೈಲ್, ಕೃತ್ಯಕ್ಕೆ ಬಳಸಿದ ಬೈಕ್ ಹಾಗೂ ಎರಡು ಮೊಬೈಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಪೊಲೀಸ್ ತಂಡದ ಕಾರ್ಯವನ್ನು ಆಯುಕ್ತರು ಪ್ರಶಂಸಿಸಿದ್ದಾರೆ.********************************

Leave a Reply

Your email address will not be published. Required fields are marked *

Back to top button