ಪ್ರಕೃತಿ ಬೆಳಗಾವಿಬೆಳಗಾವಿರಾಜಕೀಯ
ಕಣಬರಗಿಯ ಸಿದ್ದೇಶ್ವರ ದೇವಸ್ಥಾನ ಹಾಗೂ ಕಣಬರಗಿ ರಾಮತೀರ್ಥ ಶ್ರೀರಾಮನ ದೇವಸ್ಥಾನ ಪ್ರವಾಸಿಸ್ಥಾನ ಆಗಲೇಬೇಕು – ಮಹೇಶ ಎಸ್ ಶಿಗಿಹಳ್ಳಿ…!!
ಪ್ರಕೃತಿ ಬೆಳಗಾವಿ ಸುದ್ದಿ : ಬೆಳಗಾವಿ : ಕಣಬರಗಿಯ ಸಿದ್ದೇಶ್ವರ ದೇವಸ್ಥಾನ ಎರಡನೆ ಕೇದಾರನಾಥ ದೇವಾಲಯ ಎಂದು ಪ್ರಸಿದ್ಧಿ ಪಡೆದಿದೆ ಹಾಗೆ ಒಳ್ಳೆಯ ಪ್ರವಾಸಿತಾಣವಾಗಿ ಮಾರ್ಪಟ್ಟಿದೆ. ದಿನನಿತ್ಯ ಸಾವಿರಾರು ಭಕ್ತರು ಶ್ರೀ ಸಿದ್ದೇಶ್ವರ ದೇವಸ್ಥಾನಕ್ಕೆ ಬರುತ್ತಾರೆ.
ಕಣಬರಗಿ ಸಿದ್ದೇಶ್ವರ ದೇವಸ್ಥಾನಕ್ಕೆ ಅದರದ್ದೇ ಆದಂತಹ ಇತಿಹಾಸವಿದೆ ಹಾಗೆ ಕಣಬರಗಿಯ ರಾಮತೀರ್ಥ ಶ್ರೀರಾಮನ ದೇವಸ್ಥಾನ ಮತ್ತು ಪಕ್ಕದಲ್ಲಿ ಇರುವ ಬಸವನ್ಕೊಳ್ಳ ದೇವಸ್ಥಾನ (ನೀರಿನ ಜರಿ) ಕೂಡ ಅದರದ್ದೆ ಆದಂತಹ ಇತಿಹಾಸ ಹೊಂದಿದೆ ಅದಕ್ಕಾಗಿ ಇಂತಹ ಇತಿಹಾಸ ಹೊಂದಿದ ದೇವಸ್ಥಾನಗಳು ಜೀರ್ಣೋದ್ದಾರವಾಗಬೇಕು.
ಮಾದರಿಯ ರೀತಿಯಲ್ಲಿ ಪ್ರವಾಸಿಥಾನವಾಗಬೇಕು ಈ ವಿಷಯವಾಗಿ ಸರ್ಕಾರ ಮತ್ತು ಸಂಬಂಧ ಪಟ್ಟ ಸಚಿವರು ವಿಶೇಷ ಗಮನ ಹರಿಸಿ ಆದಷ್ಟು ಬೇಗ ಕಾರ್ಯರೂಪಕ್ಕೆ ತರುವಂತೆ ಕ್ರಮ ಕೈಗೊಳ್ಳಬೇಕು ಎಂದು ಕಣಬರಗಿ ನಗರದ ಸ್ಥಳೀಯರಾದ ಸಾಮಾಜಿಕ ಹೋರಾಟಗಾರ ಮಹೇಶ್ ಎಸ್ ಶಿಗೀಹಳ್ಳಿ ರವರು ಸರ್ಕಾರಕ್ಕೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.**************************






