*ಬೆಳಗಾವಿಯಲ್ಲಿ ಡಿ.2 ರಿಂದ ಜರುಗಲಿರುವ ವಿಧಾನಮಂಡಳ ಚಳಿಗಾಲ ಅಧಿವೇಶನದ ಪೂರ್ವಭಾವಿ ಸಭೆಯ ಬಳಿಕ ನಡೆದ ಪತ್ರಿಕಾಗೋಷ್ಠಿ*

*ಪತ್ರಿಕಾಗೋಷ್ಠಿಯ ಪ್ರಮುಖಾಂಶಗಳು*
*ವಿಧಾನಸಭಾಧ್ಯಕ್ಷರಾದ ಜಿ.ಎಸ್.ಪಾಟೀಲ ಅವರ ಮಾತುಗಳು.*
• ವಸತಿ, ಊಟೋಪಹಾರ, ಸಾರಿಗೆ ಭದ್ರತೆ, ವಿದ್ಯುತ್, ಅಂತರ್ಜಾಲ ವ್ಯವಸ್ಥೆಯ ಪೂರ್ವಸಿದ್ಧತೆ ಪರಿಶೀಲನೆ
• ಹೊಸ ಕಾರ್ಯಕ್ರಮ : ಪುಸ್ತಕ ಮೇಳ, ಯೋಗಾಭ್ಯಾಸ
• ಶಾಲಾ ಮಕ್ಕಳಿಗೆ ಎ.ಐ. ಮೂಲಕ ಸಂವಾದ ನಡೆಸುವ ಕಾರ್ಯಕ್ರಮ
• ಇದರೊಂದಿಗೆ ಸಾಂಸ್ಕೃತಿ ಕಾರ್ಯಕ್ರಮ
• ಪ್ರತಿಭಟನೆ: ಪ್ರತಿಭಟನೆಗೆ ಸಂಬಂಧಿಸಿದಂತೆ ಜಿಲ್ಲಾ/ತಾಲ್ಲೂಕುಮಟ್ಟದಲ್ಲಿ ಬಗೆಹರಿಯಬಹುದಾದ ಸಮಸ್ಯೆಗಳನ್ನು ಚರ್ಚಿಸಲು ಸೂಚಿಸಿದೆ.
• ಅಭಿವೃದ್ಧಿ ಕುರಿತ ಚರ್ಚೆಗೆ ಆದ್ಯತೆ- ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳಲು ನಿರ್ಧರಿಸಲಾಗಿದೆ.
• ಶಾಸಕರ ವಸತಿಗೆ ಅನುಕೂಲವಾಗುವಂತೆ ಶಾಸಕರ ಭವನದ ಮಾದರಿಯಲ್ಲಿ ಕಟ್ಟಡ ನಿರ್ಮಿಸುವ ಯೋಚನೆ ಇದೆ.
• ಪ್ರತಿ ತಿಂಗಳು ಒಂದು ಸದನ ಸಮಿತಿಯ ಸಭೆಯನ್ನು ಸುವರ್ಣವಿಧಾನಸೌಧದಲ್ಲಿ ನಡೆಸಲು ಉದ್ಧೇಶಿಸಲಾಗಿದೆ.
• ಸದನದಲ್ಲಿ ಅಭಿವೃದ್ಧಿ ಕುರಿತು ಚರ್ಚೆಗೆ ಪ್ರಥಮಾದ್ಯತೆ
• ಶಾಸಕರ ಭವನ ನಿರ್ಮಾಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳ ಜತೆ ಚರ್ಚಿಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುವುದು.
* ವಿಧಾನಪರಿಷತ್ ಸಭಾಪತಿ ಸಲೀಂ ಅಹಮದ್*
• ಅಧಿವೇಶನದಲ್ಲಿ ಸಮಗ್ರ ಕರ್ನಾಟಕದ ಅಭಿವೃದ್ಧಿಯ ಜತೆಗೆ ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ವಿಶೇಷ ಚರ್ಚೆಯನ್ನು ನಡೆಸಲು ಅವಕಾಶ ಕಲ್ಪಿಸಲಾಗುವುದು.
• ಆಡಳಿತ ಪಕ್ಷ ಹಾಗೂ ವಿರೋಧ ಪಕ್ಷಗಳು ಎಲ್ಲರೂ ಸೇರಿ ಸಮಸ್ಯೆಗಳ ಪರಿಹಾರ ಕಂಡುಕೊಳ್ಳಲು ಆದ್ಯತೆ ನೀಡಲಾಗುವುದು.
• ಅರ್ಥಪೂರ್ಣ ಕಲಾಪ ನಡೆಸಲಾಗುವುದು. ಉತ್ತರ ಕರ್ನಾಟಕ ಸಮಸ್ಯೆಗಳ ಪರಿಹಾರಕ್ಕೆ ಒತ್ತು.
• ಪ್ರತಿಭಟನೆಗೂ ಮುಂಚೆ ಸಮಸ್ಯೆಗಳ ಪರಿಹಾರಕ್ಕೆ ಚರ್ಚಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ.
• ಪ್ರತಿಭಟನೆಗಳು ಪ್ರಜಾಪ್ರಭುತ್ವದಲ್ಲಿ ಅವಶ್ಯಕ. ಇದರಿಂದ ಸದನದ ಕಲಾಪಗಳಿಗೆ ತೊಂದರೆಯಾಗದಿರಲಿ.
• ಸರಕಾರ-ವಿರೋಧಪಕ್ಷಗಳ ಮುಖಂಡರ ಜತೆ ಸಮಾಲೋಚಿಸಿ ಸದನದಲ್ಲಿ ಚರ್ಚಿಸಬೇಕಾಗಿರುವ ವಿಷಯಗಳನ್ನು ನಿರ್ಧರಿಸಲಾಗುವುದು.
• ಸದನದಲ್ಲಿ ಹಾಜರಾತಿ ಹೆಚ್ಚಳಕ್ಕೆ ಅಗತ್ಯ ಕ್ರಮ ವಹಿಸಲಾಗುವುದು.
• ಶಾಸಕರ ಭವನ ನಿರ್ಮಾಣದ ಚಿಂತನೆಯಿದೆ. ವಿಸ್ತೃತವಾಗಿ ಚರ್ಚಿಸಿದ ಬಳಿಕ ಸೂಕ್ತ ನಿರ್ಣಯ.











