ಪ್ರಕೃತಿ ಬೆಳಗಾವಿ

*ನಗರ ಕೇಂದ್ರ ಗ್ರಂಥಾಲಯದಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ*

ಪ್ರಕೃತಿ ಬೆಳಗಾವಿ ಸುದ್ದಿ : ಬೆಳಗಾವಿ : ನಗರದ ಕೇಂದ್ರ ಗ್ರಂಥಾಲಯದಲ್ಲಿ, ನಗರ ಮತ್ತು ಜಿಲ್ಲಾ ಕೇಂದ್ರ ಗ್ರಂಥಾಲಯ ಬೆಳಗಾವಿ ವತಿಯಿಂದ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಭಕ್ತಿಪೂರ್ವಕವಾಗಿ ಆಚರಿಸಲಾಯಿತು.

ಉಪನಿರ್ದೇಶಕರಾದ ಶ್ರೀ ರಾಮಯ್ಯ ಅವರು ಜ್ಯೋತಿ ಬೆಳಗುವ ಮೂಲಕ ಮತ್ತು ಪುಷ್ಪಾರ್ಚನೆ ಮಾಡಿ ಗೌರವ ಸಲ್ಲಿಸಿದರು. ಮಹರ್ಷಿ ವಾಲ್ಮೀಕಿ ಅವರ ಜೀವನ, ಆದರ್ಶ ಮತ್ತು ಮೌಲ್ಯಗಳನ್ನು ನೆನೆಯಲಾಯಿತು.

ಈ ಸಂಧರ್ಭದಲ್ಲಿ ಅಧೀಕ್ಷಕರಾದ ಎ ಎ ಕಾಂಬಳೆ, ಆನಂದ ಮುತ್ತಗಿ, ಪ್ರಕಾಶ ಇಚಲಕರಂಜೀ, ಸುಮಿತ್ ಕಾವಳೆ, ಸುನಿಲ್, ರಾಜು ಕಟ್ಟಿಮನಿ, ದರ್ಶನ್ ಬಾಗೇವಾಡಿ ಮತ್ತು ನಗರ/ಜಿಲ್ಲಾ ಕೇಂದ್ರ ಗ್ರಂಥಾಲಯದ ಸಿಬ್ಬಂದಿ ವರ್ಗ ಮತ್ತು ಸಾರ್ವಜನಿಕ ಓದುಗರು ಸಹ ಹಾಜರಿದ್ದು ಗೌರವ ನಮನ ಸಲ್ಲಿಸಿದರು.

ಜಯಂತಿ ಅಂಗವಾಗಿ ಮಹರ್ಷಿ ವಾಲ್ಮೀಕಿ ಅವರ ಜೀವನ, ಆದರ್ಶ ಮತ್ತು ಸಾಹಿತ್ಯ ಕುರಿತು ಮತ್ತು ರಾಮಾಯಣ ದರ್ಶನ ವಿಷಯಗಳ ಕುರಿತು ಎರಡು ದಿನಗಳ ಪುಸ್ತಕಗಳ ಪ್ರದರ್ಶನ ಏರ್ಪಡಿಸಲಾಗಿತ್ತು.*******************************

Leave a Reply

Your email address will not be published. Required fields are marked *

Back to top button