ಪ್ರಕೃತಿ ಬೆಳಗಾವಿ
*ಕಿತ್ತೂರು ಉತ್ಸವದಲ್ಲಿ ಎಸ್.ಎಸ್.ಎಲ್.ಸಿ ‘ಕಲ್ಪತರು’ ಸ್ಕೋರಿಂಗ್ ಹಾಗೂ ಪಾಸಿಂಗ್ ಪ್ಯಾಕೇಜ್ ಲೋಕಾರ್ಪಣೆ*

ಪ್ರಕೃತಿ ಬೆಳಗಾವಿ ಸುದ್ದಿ : ಕಿತ್ತೂರು : 202ನೇ ವರ್ಷದ ಐತಿಹಾಸಿಕ ಕಿತ್ತೂರು ಉತ್ಸವದ ಭವ್ಯ ವೇದಿಕೆಯಲ್ಲಿ, ಎನ್.ಎಫ್. ಕಿತ್ತೂರ್ ಅವರು ರಚಿಸಿರುವ ಎಸ್.ಎಸ್.ಎಲ್.ಸಿ ದ್ವಿತೀಯ ಭಾಷೆಯ ಪರೀಕ್ಷೆಯ ‘ಕಲ್ಪತರು’ ಸ್ಕೋರಿಂಗ್ ಮತ್ತು ಪಾಸಿಂಗ್ ಪ್ಯಾಕೇಜ್ ಕೃತಿಯು ಅತಿ ವಿಜ್ರಂಭಣೆಯಿಂದ ಲೋಕಾರ್ಪಣೆಗೊಂಡಿತು.
ಕರ್ನಾಟಕ ಸರ್ಕಾರದ ಲೋಕೋಪಯೋಗಿ ಇಲಾಖೆಯ ಸಚಿವರು ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾದ ಮಾನ್ಯ ಶ್ರೀ ಸತೀಶ್ ಜಾರಕಿಹೊಳಿ, ಕಿತ್ತೂರು ಮತಕ್ಷೇತ್ರದ ಜನಪ್ರಿಯ ಶಾಸಕರಾದ ಶ್ರೀ ಬಾಬಾ ಸಾಹೇಬ್ ಪಾಟೀಲ್, ಮತ್ತು ಬೆಳಗಾವಿ ಜಿಲ್ಲಾಧಿಕಾರಿಗಳಾದ ಶ್ರೀ ಮೊಹಮ್ಮದ್ ರೋಷನ್ ಹಾಗೂ ಮುಖಂಡರ ಸಮ್ಮುಖದಲ್ಲಿ ಈ ಮಹತ್ವದ ಶೈಕ್ಷಣಿಕ ಕೃತಿಯು ಬಿಡುಗಡೆಯಾಯಿತು.
ಈ ಶುಭ ಸಮಾರಂಭದಲ್ಲಿ ವರದಿಗಾರರಾದ ಚಂದ್ರಶೇಖರ್ ಚನ್ನಂಗಿ ಮತ್ತು ಬಸವರಾಜ್ ಚಿನಗುಡಿ ಉಪಸ್ಥಿತರಿದ್ದರು.*******************************






