ಪ್ರಕೃತಿ ಬೆಳಗಾವಿ

*ಮಾರ್ಕಂಡೇಯ ನದಿಯಲ್ಲಿ ಅಪರಿಚಿತ ವ್ಯಕ್ತಿಯ ಅರ್ಧ ಕೊಳೆತ ಶವ ಪತ್ತೆ*

ಪ್ರಕೃತಿ ಬೆಳಗಾವಿ ಸುದ್ದಿ : ಬೆಳಗಾವಿ : ಕಾಕತಿ ಗ್ರಾಮದ ಸಮೀಪದ ಮಾರ್ಕಂಡೇಯ ನದಿಯಲ್ಲಿ ಸುಮಾರು 40ರಿಂದ 45 ವರ್ಷ ವಯಸ್ಸಿನ ಅಪರಿಚಿತ ವ್ಯಕ್ತಿಯ ಅರ್ಧ ಕೊಳೆತ ಶವ ಅ.17ರಂದು ಪತ್ತೆಯಾಗಿದೆ.

ಕಾಕತಿ ನಿವಾಸಿ ಮದನ್ ಸಿದ್ರಾಯಿ ಕಡೋಲಕರ ಅವರು ಬೆಳಿಗ್ಗೆ ಹೊಲದ ಕೆಲಸಕ್ಕೆ ತೆರಳಿದ್ದಾಗ ನದಿಯಲ್ಲಿ ಶವ ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮೃತನ ಗುರುತು ಪತ್ತೆಯಾಗಿಲ್ಲ. ಸಾವಿನ ಕುರಿತು ಸಂಶಯ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಕಾಕತಿ ಪೊಲೀಸ್ ಠಾಣೆಯಲ್ಲಿ ಯುಡಿಆರ್ ಸಂಖ್ಯೆ 43/2026ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ.

ಮೃತ ವ್ಯಕ್ತಿ ಸುಮಾರು 5 ಅಡಿ 5 ಇಂಚು ಎತ್ತರವಿದ್ದು, ನೀಲಿ ಬಣ್ಣದ ಹಾಫ್ ಪ್ಯಾಂಟ್ ಹಾಗೂ ಚಾಕೊಲೇಟ್ ಬಣ್ಣದ ನಿಕ್ಕರ್ ಧರಿಸಿದ್ದಾನೆ. ಬಲಗೈಯಲ್ಲಿ ರಾಖಿ ಇದೆ. ನೀರಿನಲ್ಲಿ ದೇಹ ಕೊಳೆತಿರುವುದರಿಂದ ಮುಖ ಗುರುತಿಸಲು ಸಾಧ್ಯವಾಗದ ಸ್ಥಿತಿಯಲ್ಲಿದೆ.

ಮೃತನ ಬಗ್ಗೆ ಮಾಹಿತಿ ಇರುವವರು ಬೆಳಗಾವಿ ನಗರ ಪೊಲೀಸ್ ಕಂಟ್ರೋಲ್ ರೂಮ್ 0831-2405233, ಕಾಕತಿ ಪೊಲೀಸ್ ಇನ್‌ಸ್ಪೆಕ್ಟರ್ 9480804115, ದೂರವಾಣಿ 0831-2405203 ಅಥವಾ ತುರ್ತು ಸಹಾಯವಾಣಿ 112ಕ್ಕೆ ಕರೆ ಮಾಡಿ ಮಾಹಿತಿ ನೀಡುವಂತೆ ಪೊಲೀಸರು ಮನವಿ ಮಾಡಿದ್ದಾರೆ.*********************************

Leave a Reply

Your email address will not be published. Required fields are marked *

Back to top button