ಪ್ರಕೃತಿ ಬೆಳಗಾವಿ

*ಧಾರವಾಡ ಜಿಲ್ಲಾ ವ್ಯಾಪ್ತಿಯಲ್ಲಿ ರೌಡಿ ಸ್ಕ್ವಾಡನಿಂದ ರೌಡಿ ಜನರನ್ನು ಮುಂಜಾಗ್ರತಾ ಕ್ರಮವಾಗಿ ಪರಿಶೀಲನೆ*

ಪ್ರಕೃತಿ ಬೆಳಗಾವಿ ಸುದ್ದಿ : ಧಾರವಾಡ  ಜೂ.10 : ಧಾರವಾಡ ಜಿಲ್ಲಾ ವ್ಯಾಪ್ತಿಯ ವಿವಿಧ ಪೊಲೀಸ್ ಠಾಣೆಗಳ ಪಟ್ಟಣ ಹಾಗೂ ಗ್ರಾಮಗಳಲ್ಲಿ ಇಂದು (ಜೂ.10) ಬೆಳಿಗ್ಗೆ ರೌಡಿ ಸ್ಕ್ವಾಡದಿಂದ ರೌಡಿ ಜನರ ಮನೆಗಳಿಗೆ ಹೋಗಿ ಮುಂಜಾಗ್ರತಾ ಕ್ರಮವಾಗಿ ಪರಿಶೀಲನೆ ಮಾಡಿದ್ದು, ಪೊಲೀಸ್ ಅಧೀಕ್ಷಕರ ಅವರ ಮಾರ್ಗದರ್ಶನದಂತೆ ಧಾರವಾಡ ಗ್ರಾಮೀಣದ ಡಿ.ಎಸ್.ಪಿ., ಸಿ.ಪಿ.ಐ, ಪಿ.ಐ ಹಾಗೂ ಪಿ.ಎಸ್.ಐ ಅವರು ಹಾಗೂ ಸಿಬ್ಬಂದಿಗಳು ಮುಂಜಾಗ್ರತಾ ಕ್ರಮವಾಗಿ ಪರಿಶೀಲನೆ ಕೈಕೊಂಡರು.

ಈ ಸಂದರ್ಭದಲ್ಲಿ ರೌಡಿ ಶೀಟರುಗಳ ಮನೆಗಳಲ್ಲಿ ಮಾರಕಾಸ್ತ್ರಗಳನ್ನು ಪರಿಶೀಲಿಸಿದ್ದು, ಹಾಗೂ ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯ ಹೊಲ್ತಿಕೋಟಿ ಗ್ರಾಮದ ಒಬ್ಬ ರೌಡಿ ಶೀಟರನ ಮನೆಯಲ್ಲಿ ಒಂದು ಸಾಗವಾನಿ ಮರದ ಬಡ್ಡಿ ಹಾಗೂ ಸೀಸಂ ಕಟ್ಟಿಗೆಯ ತುಂಡುಗಳು ಕಂಡು ಬಂದಿದ್ದು, ಈ ಕುರಿತು ಯಾವುದೇ ದಾಖಲಾತಿ ಇರದೇ ಇರುವುದರಿಂದ ಸದರಿ ಮಾಹಿತಿಯನ್ನು ಅರಣ್ಯಾಧಿಕಾರಿಗಳಿಗೆ ತಿಳಿಸಿದ್ದು, ಸ್ಥಳಕ್ಕೆ ಅರಣ್ಯಾಧಿಕಾರಿಗಳು ಬಂದು ಪರಿಶೀಲನೆ ಕೈಕೊಂಡಿದ್ದು ಇರುತ್ತದೆ.

ಧಾರವಾಡ ಜಿಲ್ಲಾ ವ್ಯಾಪ್ತಿಯಲ್ಲಿ ಒಟ್ಟು 47 ಜನ ರೌಡಿ ಶೀಟರುಗಳ ಮನೆಗಳನ್ನು ಪರಿಶೀಲನೆ ಮಾಡಿ, ಸದರಿ ರೌಡಿಶೀಟರಗಳಿಗೆ ಸೂಕ್ತ ಕಾನೂನು ತಿಳುವಳಿಕೆ ಹಾಗೂ ಎಚ್ಚರಿಕೆ ನೀಡಲಾಯಿತು.******************************

Back to top button