ಪ್ರಕೃತಿ ಬೆಳಗಾವಿ

*ಬೆಳಗಾವಿಯ ರಸ್ತೆಗಳ ಸುಧಾರಣೆಗೆ ಅನುದಾನ ನೀಡಿದ ಕೇಂದ್ರ: ಸಂತಸ ವ್ಯಕ್ತಪಡಿಸಿದ ಸಂಸದ ಶೆಟ್ಟರ*

ಪ್ರಕೃತಿ ಬೆಳಗಾವಿ ಸುದ್ದಿ : ಬೆಳಗಾವಿ : ಕೇಂದ್ರ ರಸ್ತೆ ಮೂಲಭೂತ ಸೌಕರ್ಯ ಯೋಜನೆಯಡಿ (CRIF ) ಬೆಳಗಾವಿ ಲೋಕಸಭಾ ಮತಕ್ಷೇತ್ರದ ವ್ಯಾಪ್ತಿಯಡಿ ಅಂದಾಜು 22 ಕಿ.ಮಿ ಉದ್ದಳತೆಯ ಮೂರು ಮುಖ್ಯ ರಸ್ತೆಗಳ ಸುಧಾರಣೆಗಾಗಿ ಒಪ್ಪಿಗೆ ಸೂಚಿಸಿ, ರೂ: 15 ಕೋಟಿ ಅನುದಾನವನ್ನು ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವರಾದ ಶ್ರೀ ನಿತಿನ್ ಗಡ್ಕರಿ ಅವರು ಬಿಡುಗಡೆ ಮಾಡಿರುವ ಬಗ್ಗೆ ಬೆಳಗಾವಿ ಲೋಕಸಭಾ ಸದಸ್ಯರು ಶ್ರೀ ಜಗದೀಶ ಶೆಟ್ಟರ ಇವರು ಸಂತಸ ವ್ಯಕ್ತ ಪಡಿಸಿದ್ದಾರೆ.

ಕೆಲವು ತಿಂಗಳುಗಳ ಹಿಂದಷ್ಟೆ ಸಂಸದರಾದ ಶ್ರೀ ಜಗದೀಶ ಶೆಟ್ಟರ ಅವರು ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವರನ್ನು ನವ-ದೆಹಲಿಯಲ್ಲಿ ಭೇಟಿ ಮಾಡಿ, ಬೆಳಗಾವಿ ಲೋಕಸಭಾ ಮತಕೇತ್ರದಲ್ಲಿ ಹಾಳಾಗಿರುವ ಸುಮಾರು 80.33 ಕಿ.ಮಿ ಉದ್ದಳತೆಯ ರಸ್ತೆಯ ದುರಸ್ತಿಗಾಗಿ ಒಟ್ಟು ಒಂಬತ್ತು ಕಾಮಗಾರಿಗಳನ್ನು ಪ್ರಸ್ತಾಪಿಸಿ, ಇದಕ್ಕೆ ತಗಲಬಹುದಾದ ಅಂದಾಜು ರೂ: 86.40 ಕೋಟಿ ಅನುದಾನಕ್ಕಾಗಿ ಒಪ್ಪಿಗೆ ಕೋರಿದ್ದರು.

ಅದಕ್ಕನುಗುಣವಾಗಿ ಕೇಂದ್ರ ಸಚಿವರು ಮನ್ನಣೆ ನೀಡಿ ಇದರಲ್ಲಿ ಬೆಳಗಾವಿ ತಾಲೂಕಿನಲ್ಲಿ 1) 12 ಕಿ.ಮಿ ಉದ್ದಳತೆಯ ದೇಸೂರ-ನಂದಿಹಳ್ಳಿ-ಕುಕಡೋಳ್ಳಿ ರಸ್ತೆ ಸುಧಾರಣೆಗೆ ರೂ : 08 ಕೋಟಿ, 2) 5 ಕಿ.ಮಿ ಉದ್ದಳತೆಯ ಬಿಜಗರ್ಣಿ- ಕವಳೆವಾಡಿ ಜಾನೇವಾಡಿ -ಕರ್ಲೆ-ಬಹದ್ದೂರವಾಡಿ -ಕಿನಿಯೇ ಯಿಂದ ರಾಜ್ಯ ಹೆದ್ದಾರ-54 ಕೂಡು ರಸ್ತೆ ಸುಧಾರಣೆಗೆ ರೂ : 4 ಕೋಟಿ, 3) ಬೈಲಹೊಂಗಲ ತಾಲೂಕಿನ ಚಿವಟಗುಂಡಿ ಕ್ರಾಸ ದಿಂದ ಚಿವಟಗುಂಡಿ ವರೆಗಿನ ಸುಮಾರು 5 ಕಿ.ಮಿ ರಸ್ತೆ ಸುಧಾರಣೆಗೆ ರೂ: 03 ಕೋಟಿ ಒಪ್ಪಿಗೆ ಸೂಚಿಸಿದ್ದು ಇದು ತಮಗೆ ಅತ್ಯಂತ ಸಂತಸ ತಂದಿದ್ದು, ಇದೆ ಸಂದರ್ಭದಲ್ಲಿ ಮಾನ್ಯ ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿಯವರಿಗೆ ಹಾಗೂ ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವರಾದ ಶ್ರೀ ನಿತಿನ್ ಗಡ್ಕರಿ ಅವರಿಗೆ ಅಭಿನಂದನೆಗಳನ್ನು ತಿಳಿಸಿರುವ ಬಗ್ಗೆ ಲೋಕಸಭಾ ಸದಸ್ಯರು ಶ್ರೀ ಜಗದೀಶ ಶೆಟ್ಟರ ಇವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.*********************************

Leave a Reply

Your email address will not be published. Required fields are marked *

Back to top button