*ಕರ್ನಾಟಕ ಪರಿಶಿಷ್ಟ ಪಂಗಡ ವಾಲ್ಮೀಕಿ ರಾಜ್ಯ ಯುವ ಘಟಕ ಸಂಘಟನೆಯಿಂದ ಖಾನಾಪುರ ತಾಲೂಕ ತಹಶೀಲ್ದಾರ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ*

ಪ್ರಕೃತಿ ಬೆಳಗಾವಿ ಸುದ್ದಿ : ನೆರಸಿ ಗ್ರಾಮಕ್ಕೆ ನೀಡಿದ ಹಿಡಿಕಲ್ ಡ್ಯಾಮ್ 4 ಎಕರೆ ಭೂಮಿಯಲ್ಲಿ ಸ್ಮಶಾನಕ್ಕೆ ಹಾಗೂ ಇನ್ನಿತರ ಗ್ರಾಮದ ಜನರ ಅನುಕೂಲಕ್ಕೆ ನೀಡಿದ್ದು. ಆ ಗ್ರಾಮದ ಒಂದು ಕುಟುಂಬ ಆ ಜಮೀನಿನಲ್ಲಿ ಒತ್ತುವರಿಯಾಗಿ ಸಾಗುವಳಿ ಮಾಡುತ್ತಿದ್ದು ಈ ವಿಚಾರವಾಗಿ ಸಂಬಂಧ ಪಟ್ಟ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದ್ದರೂ ಬೇಜವಾಬ್ದಾರಿ ವಹಿಸಿದ ಖಾನಾಪುರ ತಹಶೀಲ್ದಾರ ಕಚೇರಿ ವಿರುದ್ಧ ರಾಜ್ಯಾದ್ಯಕ್ಷರಾದ ಮಹೇಶ್ ಶೀಗಿಹಳ್ಳಿ ರವರ ನೇತೃತ್ವದಲ್ಲಿ ಪ್ರತಿಭಟನೆ ಮಾಡಿ ಕಚೇರಿಗೆ ಮುತ್ತಿಗೆ ಹಾಕಲಾಯಿತು.
ಸ್ಥಳಕ್ಕೆ ದವಡಾಯಿಸಿದ ತಹಶೀಲ್ದಾರ ಈ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಕ್ರಮ ಜರುಗಿಸುತ್ತೇನೆ ಎಂದು ತಿಳಿಸಿದರು.
ಈ ಸಂದರ್ಬದಲ್ಲಿ
(ಖಾನಾಪುರ ತಾಲೂಕಿನ ಅದ್ಯಕ್ಷರಾದ ಆನಂದ ಊದಿ )
(ತಾಲೂಕು ಗೌರವ ಅಧ್ಯಕ್ಷ ರಾಜು ನಾಯಕ )
(ಬೆಳಗಾವಿ ಗ್ರಾಮೀಣ ಅಧ್ಯಕ್ಷ ಲಕ್ಷ್ಮಣ ಬಾಗಡಿ)
(ಬೆಳಗಾವಿ ಜಿಲ್ಲಾ ಗೌರವ ಅಧ್ಯಕ್ಷ ರಾಮ್ ಪೂಜಾರಿ )
(ರುದ್ರಪ್ಪ ಮುಖಾರಿ ಖಾನಾಪುರ ನಗರ ಅದ್ಯಕ್ಷರು)
(ಸುನೀಲ ಬಾಳನ್ನವರ ಖಾನಾಪುರ ನಗರ ಉಪಾದ್ಯಕ್ಷ )
(ಕಾರ್ಯದರ್ಶಿ ಹನಮಂತ ನಾಯಕ)
(ಶುಭಂ ತಳವಾರ)
(ಆಕಾಶ್ ಸರಿಕಾರ)
(ರೋಹಿತ್ ಅರಳಗುಂದಿ)
ಹಾಗೂ ಇನ್ನು ಉಳಿದ ಪದಾದಿಕಾರಿಗಳು ಉಪಸ್ಥಿತರಿದ್ದರು.*******************************






