ಪ್ರಕೃತಿ ಬೆಳಗಾವಿ

*ಮಗುವಿನ ವಿದ್ಯಾಭ್ಯಾಸಕ್ಕೆ ಸ್ಪಂದಿಸಿದ ಅಕ್ಕ ಪಡೆ*

ಪ್ರಕೃತಿ ಬೆಳಗಾವಿ ಸುದ್ದಿ : ಬೆಳಗಾವಿ ಜಿಲ್ಲೆಯ ಕುರಿಹಾಳ ಗ್ರಾಮದ ಶ್ರೀಮತಿ ದೀಪಾಲಿ ವಿಲಾಸ್‌ ಕುದನೂರುಕರ್‌ ರವರು ಮಹಿಳಾ ಪೊಲೀಸ್‌ ಠಾಣೆಗೆ ಹೋಗಿ ಗಂಡ ಹೆಂಡತಿಯೊಂದಿಗೆ ಜೊತೆಗೆ ಜಗಳ ಮಾಡಿದ ಕಾರಣಕ್ಕೆ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆ ನೀಡುತ್ತಿದ್ದಾನೆಂದು ದೂರು ನೀಡಿದ ಕಾರಣ, ಮಹಿಳಾ ಪೊಲೀಸ್‌ ಠಾಣೆಯ ಪೊಲೀಸ್‌ ಇನ್ಸ್ ಪೆ‌ಕ್ಟರ್ (ಪಿಐ) ರವರು ಅಕ್ಕ ಪಡೆಯ ತಂಡವನ್ನು ಆ ಗ್ರಾಮಕ್ಕೆ ಕಳುಹಿಸಿ, ಮಹಿಳೆ ಕೋರಿದ ದಾಖಲಾತಿಗಳು ಮತ್ತು ಬಟ್ಟೆಗಳು ಹಾಗೂ ದಿನ ನಿತ್ಯದ ಸಾಮಗ್ರಿಗಳನ್ನು ಪೂರೈಸಿವಂತೆ ಮಾಡಲಾಯಿತು.

ಅಕ್ಕಪಡೆ ತಂಡವು ನೊಂದ ಮಹಿಳೆಯ ಕರೆಗೆ ಸಹಾಯ ಮಾಡಿ, ದಂಪತಿಗಳು ಮಕ್ಕಳ ವಿದ್ಯಾಭ್ಯಾಸ ನೀಡುವಂತೆ ಸೂಚಿಸಿ, ಕೌಟುಂಬಿಕ ದೌರ್ಜನ್ಯ ಕಾಯ್ದೆಯ ಮಹತ್ವವನ್ನು ಹೇಳುವುದರ ಮೂಲಕ ಕುಟುಂಬ ಕಲಹಗಳಾಗದಂತೆ ಕ್ರಮವಹಿಸಲು ಜಾಗೃತಿ ನೀಡಿತು.************************************

Back to top button