ಪ್ರಕೃತಿ ಬೆಳಗಾವಿ

*ಎಸ್.ಎಸ್.ಎಲ್.ಸಿ., ಪಿಯುಸಿ, ಯು.ಪಿ.ಎಸ್.ಸಿ. ಸಾಧಕರಿಗೆ ಗಣ್ಯರಿಂದ ಸತ್ಕಾರ*

*ಸಾಧಕ ವಿದ್ಯಾರ್ಥಿಗಳು ಮತ್ತು ಅಭ್ಯರ್ಥಿಗಳ ಅಭಿನಂದನಾ ಸಮಾರಂಭ*

ಪ್ರಕೃತಿ ಬೆಳಗಾವಿ ಸುದ್ದಿ : ಬೆಳಗಾವಿ : ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ ಸಹಯೋಗದಲ್ಲಿ ಇಲ್ಲಿನ ಸುವರ್ಣ ವಿಧಾನಸೌಧದ ಸೆಂಟ್ರಲ್ ಹಾಲ್ ನಲ್ಲಿ ಭಾನುವಾರ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ 2025-26ನೇ ಸಾಲಿನ ಎಸ್.ಎಸ್.ಎಲ್.ಸಿ., ಪಿಯುಸಿ, ಯು.ಪಿ.ಎಸ್.ಸಿ. ಪರೀಕ್ಷೆ ಹಾಗೂ ಕ್ರೀಡೆಯಲ್ಲಿ ಸಾಧನೆಗೈದ ವಿದ್ಯಾರ್ಥಿಗಳು ಹಾಗೂ ಅಭ್ಯರ್ಥಿಗಳನ್ನು ಗಣ್ಯರು ಸನ್ಮಾನಿಸಿ ಅಭಿನಂದಿಸಿದರು.

ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಲೋಕೋಪಯೋಗಿ ಇಲಾಖೆಯ ಸನ್ಮಾನ್ಯ ಸಚಿವರಾದ ಶ್ರೀ ಸತೀಶ ಜಾರಕಿಹೊಳಿ ಅವರು ಸಮಾರಂಭವನ್ನು ಉದ್ಘಾಟಿಸಿ, ಸಾಧನೆಗೈದ ವಿದ್ಯಾರ್ಥಿಗಳನ್ನು ಸನ್ಮಾನಿಸಿದರು.

ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶಿಂಧೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ಯು.ಪಿ.ಎಸ್.ಸಿ. ಸಾಧಕರಾದ ಕಿರಣ ಕಮತೆ, ಬಸವರಾಜ ಪಾಟೀಲ ಅವರು ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿ, ಉನ್ನತ ಸಾಧನೆ ಮಾಡುವಂತೆ ಶುಭಕೋರಿದರು.

ಸಾಧಕರಿಗೆ ಸನ್ಮಾನ:

2025-26ನೇ ಸಾಲಿನ ಯು.ಪಿ.ಎಸ್.ಸಿ. ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಕಿರಣ ಕಮತೆ, 739ನೇ ರ್ಯಾಂಕ್ ಪಡೆದ ಬಸವರಾಜ ಪಾಟೀಲ, ರಾಹುಲ್ ಪಾಟೀಲ ಅವರನ್ನು ಹಾಗೂ 2025-26ನೇ ಸಾಲಿನ ಐ.ಎಫ್.ಎಸ್. ಪರೀಕ್ಷೆಯಲ್ಲಿ ದೇಶಕ್ಕೆ ಪ್ರಥಮ ಸ್ಥಾನ ಪಡೆದ ಬಸವರಾಜ ಕೆಂಪವಾಡ ಅವರ ಪಾಲಕರನ್ನು ವೇದಿಕೆಯಲ್ಲಿ ಸತ್ಕರಿಸಲಾಯಿತು.

ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಪ್ರಾರ್ಥನಾ ಬಿರಾದಾರ ಪಾಟೀಲ, ವಿವೇಕ ಸುಳ್ಳನ್ನವರ, ದಿವ್ಯಾ ದೇಸಾಯಿ ಅವರನ್ನು ಹಾಗೂ ಇನಸ್ಪೈರ್ ಅವಾರ್ಡ್ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಸಾಧನೆಗೈದ ವಿದ್ಯಾರ್ಥಿನಿ ಅಕ್ಷರಾ ಮಲಿಕ್ ಅವರನದನು ವಿಶೇಷವಾಗಿ ಸನ್ಮಾನಿಸಲಾಯಿತು.

ಎಸ್.ಎಸ್.ಎಲ್.ಸಿ.ಯಲ್ಲಿ ಅತ್ಯುತ್ತಮ‌ ಅಂಕಗಳನ್ನು ಪಡೆದ ಶಾಲಾ ವಿದ್ಯಾರ್ಥಿಗಳು, ವಸತಿ ನಿಲಯಗಳ ವಿದ್ಯಾರ್ಥಿಗಳು, ವಿಶೇಷಚೇತನ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು ಹಾಗೂ ಪಿಯುಸಿಯಲ್ಲಿ ಅತ್ಯುತ್ತಮ ಸಾಧನೆಗೈದ ಒಟ್ಟು 280ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಸತ್ಕರಿಸಿ ಅಭಿನಂದಿಸಲಾಯಿತು.

ಮಾನ್ಯ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ಶ್ರೀ ಪ್ರಕಾಶ ಹುಕ್ಕೇರಿ, ಮಾನ್ಯ ಶಾಸಕರಾದ ಶ್ರೀ ಮಹಾಂತೇಶ ಕೌಜಲಗಿ, ಶ್ರೀ ಆಸೀಫ್ (ರಾಜು) ಸೇಠ್, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಮಾನ್ಯ ಜಿಲ್ಲಾಧ್ಯಕ್ಷ ವಿನಯ ನಾವಲಗಟ್ಟಿ, ಮಾನ್ಯ ವಾಯುವ್ಯ ಸಾರಿಗೆ ಸಂಸ್ಥೆಯ ಉಪಾಧ್ಯಕ್ಷ ಶ್ರೀ ಸುನೀಲ ಹನುಮನ್ನವರ್, ಮಾನ್ಯ ಬುಡಾ ಅಧ್ಯಕ್ಷ ಶ್ರೀ ಲಕ್ಷ್ಮಣರಾವ್ ಚಿಂಗಳೆ, ನಗರ ಪೊಲೀಸ್ ಆಯುಕ್ತ ಭೂಷಣ ಬೋರಸೆ, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮಂಜುನಾಥ, ಜಿಪಂ ಅಧಿಕಾರಿಗಳಾದ ರವಿ ಬಂಗಾರೆಪ್ಪನವರ್, ಬಸವರಾಜ ಅಡವಿಮಠ, ಗಂಗಾಧರ ದಿವಟರ್, ಲಕ್ಷ್ಮಣ ಯಕ್ಕುಂಡಿ ಸೇರಿ ಇನ್ನಿತರರು ಹಾಜರಿದ್ದರು.

ಕಾರ್ಯಕ್ರಮದಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ, ವಿದ್ಯಾರ್ಥಿಗಳು ಹಾಗೂ ಪಾಲಕರು ಭಾಗವಹಿಸಿದ್ದರು.*****************************

Back to top button