ಪ್ರಕೃತಿ ಬೆಳಗಾವಿ

*ಸಮಾಜ ಸೇವಕ ಆಕಾಶ ರುದ್ರಪ್ಪ ಹಲಗೇಕರರಿಗೆ ಡಾ. ಬಿ.ಆರ್. ಅಂಬೇಡ್ಕರ್ ರಾಷ್ಟ್ರೀಯ ಪ್ರಶಸ್ತಿ*

ಪ್ರಕೃತಿ ಬೆಳಗಾವಿ ಸುದ್ದಿ : ಬೆಳಗಾವಿ : ರಮಾಬಾಯಿ ಅಂಬೇಡ್ಕರ್ ಸೋಶಿಯಲ್ ವೆಲಫೇರ್ ಫೌಂಡೇಷನ್ ವತಿಯಿಂದ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಹಾಗೂ ಭಗವಾನ್ ಗೌತಮ ಬುದ್ಧ ಜಯಂತಿ ಮಹೋತ್ಸವ–2026ರ ಅಂಗವಾಗಿ ಆಯೋಜಿಸಲಾದ ಭವ್ಯ ಸಮಾರಂಭದಲ್ಲಿ ಸಮಾಜ ಸೇವಕ ಆಕಾಶ ರುದ್ರಪ್ಪ ಹಲಗೇಕರ ಅವರಿಗೆ “ಡಾ. ಬಿ.ಆರ್. ಅಂಬೇಡ್ಕರ್ ರಾಷ್ಟ್ರೀಯ ಪ್ರಶಸ್ತಿ” ಪ್ರದಾನ ಮಾಡಿ ಗೌರವಿಸಲಾಯಿತು.

ಸಮಾಜ ಸೇವೆ, ಯುವಜನರಲ್ಲಿ ಸಾಮಾಜಿಕ ಜಾಗೃತಿ ಮೂಡಿಸುವ ಕಾರ್ಯ, ಬಡ ಹಾಗೂ ಹಿಂದುಳಿದ ವರ್ಗದ ಜನರಿಗೆ ನೆರವು, ಶಿಕ್ಷಣ ಪ್ರೋತ್ಸಾಹ, ಮಾನವೀಯ ಮೌಲ್ಯಗಳ ಬೆಳೆಸುವಿಕೆ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಸಲ್ಲಿಸಿದ ವಿಶಿಷ್ಟ ಸೇವೆಯನ್ನು ಗುರುತಿಸಿ ಈ ಪ್ರಶಸ್ತಿಯನ್ನು ನೀಡಿ ಸನ್ಮಾನಿಸಲಾಯಿತು.

ಆಕಾಶ ಹಲಗೇಕರ ಅವರು ಹಲವು ವರ್ಷಗಳಿಂದ ಸಮಾಜಮುಖಿ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದು, ಯುವಕರಿಗೆ ಮಾರ್ಗದರ್ಶನ, ಅಗತ್ಯವಿರುವ ವಿದ್ಯಾರ್ಥಿಗಳಿಗೆ ಸಹಾಯಧನ, ರಕ್ತದಾನ ಶಿಬಿರ, ಉಚಿತ ಕಣ್ಣಿನ ಶಿಬಿರ, ಆರೋಗ್ಯ ಶಿಬಿರ,ಪರಿಸರ ಜಾಗೃತಿ ಕಾರ್ಯಕ್ರಮಗಳು ಹಾಗೂ ಸಾಮಾಜಿಕ ಐಕ್ಯತೆಯನ್ನು ಬಲಪಡಿಸುವ ವಿವಿಧ ಕಾರ್ಯಗಳ ಮೂಲಕ ಜನಮನ ಗೆದ್ದಿದ್ದಾರೆ. ಸಮಾಜದಲ್ಲಿ ಶಾಂತಿ, ಸಮಾನತೆ ಮತ್ತು ಸಹೋದರತ್ವದ ಮೌಲ್ಯಗಳನ್ನು ಬೆಳೆಸುವ ನಿಟ್ಟಿನಲ್ಲಿ ಅವರು ನಿರಂತರವಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಈ ಗೌರವ ಸಮಾರಂಭದಲ್ಲಿ ಮಾನ್ಯ ಶ್ರೀಮತಿ ಪ್ರೀತಿ ವಿ. ಕಾಮಕರ, ಪೂಜ್ಯಮಹಾಪೌರರು ಮಹಾನಗರ ಪಾಲಿಕೆ ಬೆಳಗಾವಿ, ಮಾನ್ಯ ಶ್ರೀ ಹಣಮಂತ ಎ. ಕೊಂಗಾಳಿ, ಉಪ ಮಹಾಪೌರರು ಮಹಾನಗರ ಪಾಲಿಕೆ ಬೆಳಗಾವಿ, ಶ್ರೀ ಉದಯಕುಮಾರ ತಳವಾರ್, ಉಪ ಆಯುಕ್ತರು ಮಹಾನಗರ ಪಾಲಿಕೆ ಬೆಳಗಾವಿ, ಶ್ರೀ ಪರುಶುರಾಮ ಗೋ. ಮಂಗಣ್ಣವರ, ಅಧ್ಯಕ್ಷರು, ಶ್ರೀಮತಿ ಮಂಗಲ. ಪ. ಮಂಗಣ್ಣವರ, ಉಪಾಧ್ಯಕ್ಷರು ಹಾಗೂ ಅನೇಕ ಗಣ್ಯರು ಉಪಸ್ಥಿತರಿದ್ದು ಪ್ರಶಸ್ತಿ ವಿಜೇತರಿಗೆ ಅಭಿನಂದನೆ ಸಲ್ಲಿಸಿದರು.

ಪ್ರಶಸ್ತಿ ಸ್ವೀಕರಿಸಿದ ಬಳಿಕ ಮಾತನಾಡಿದ ಆಕಾಶ ರುದ್ರಪ್ಪ ಹಲಗೇಕರ ಅವರು, “ಈ ಗೌರವವು ನನ್ನೊಬ್ಬರ ಸಾಧನೆಯಲ್ಲ, ಸಮಾಜ ಸೇವೆಯಲ್ಲಿ ನನ್ನೊಂದಿಗೆ ಕೈಜೋಡಿಸಿದ ಪ್ರತಿಯೊಬ್ಬರ ಪ್ರೋತ್ಸಾಹ ಮತ್ತು ಆಶೀರ್ವಾದದ ಫಲವಾಗಿದೆ. ಮುಂದಿನ ದಿನಗಳಲ್ಲಿಯೂ ಸಮಾಜದ ಅಭಿವೃದ್ಧಿಗಾಗಿ ಇನ್ನಷ್ಟು ಸೇವೆ ಮಾಡುವ ಸಂಕಲ್ಪ ಹೊಂದಿದ್ದೇನೆ” ಎಂದು ತಿಳಿಸಿದರು.*********************************

Back to top button