ಸಾರಿಗೆ ನೌಕರರ ನ್ಯಾಯಯುತವಾದ ಬೇಡಿಕೆಗಳನ್ನು ತುರ್ತಾಗಿ ಬಗೆಹರಿಸಿದಿದ್ದರೆ ನಾವು ನಮ್ಮ ಮಕ್ಕಳು ಅಹೋರಾತ್ರಿ ಧರಣಿ ಸತ್ಯಾಗ್ರಹವನ್ನು ಮಾಡುತ್ತೇವೆ…!!
ಪ್ರಕೃತಿ ಬೆಳಗಾವಿ ಸುದ್ದಿ : ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟ (ರಿ) ಸಂಘಟನೆಯು ಸಾರಿಗೆ ನೌಕರರಿಗೆ ನ್ಯಾಯ ಕೊಡಿಸುವ ನಿಟ್ಟಿನಲ್ಲಿ ಸಂಘಟನೆ ಹುಟ್ಟಿದ್ದು ಸಾರಿಗೆ ನೌಕರರ ದ್ವನಿಯಾಗಿ ಕಳೆದ 4 ವರ್ಷಗಳಿಂದ ವಿವಿಧ ರೀತಿಯಲ್ಲಿ ನಿರಂತರ ಹೋರಾಟ ಮಾಡುತ್ತಾ ಬಂದಿದೆ ಸರ್ಕಾರದ ಗಮನ ಸೆಳೆದು ಸರ್ಕಾರಕ್ಕೆ ಮುಟ್ಟಿನೋಡಿಕೊಳ್ಳುವ ರೀತಿಯಲ್ಲಿ ಸಾರಿಗೆ ನೌಕರರು ಉತ್ತರ ಕೊಟ್ಟಿದ್ದಾರೆ.
ಕಾಂಗ್ರೆಸ್ ಸರಕಾರ ಚುನಾವಣೆ ಸಮಯದಲ್ಲಿ ತಮ್ಮ ಪ್ರಣಾಳಿಕೆಯಲ್ಲಿ ಸಾರಿಗೆ ನೌಕರರಿಗೆ ನ್ಯಾಯ ಒದಗಿಸುವ ವಿಶ್ವಾಸ ಕೊಟ್ಟಿದ್ದರು ಆದರೆ ಇದು ವರೆಗೆ ಯಾವುದೇ ನ್ಯಾಯ ಒದಗಿಸಿಲ್ಲ ಇದರಿಂದ ಸಾರಿಗೆ ನೌಕರರು ಮುಷ್ಕರ ನಡೆಸಿದ ಸಮಯದಲ್ಲಿ ನೌಕರರನ್ನು ವರ್ಗಾವಣೆ ಅಮಾನತ್ತು ಮತ್ತು ನೌಕರರ ಮೇಲೆ ನೌಕರರ ಕುಟುಂಬಸ್ಥರ ಮೇಲೆ ಮತ್ತು ಸಾರಿಗೆ ನೌಕರರಿಗೆ ಹೋರಾಟದಲ್ಲಿ ಬೆಂಬಲ ನೀಡಿದ್ದ ಹೋರಾಟಗಾರರ ಮೇಲೆ ಕೂಡ ಕೇಸ್ ದಾಖಲು ಮಾಡಿದ್ದಾರೆ.
ಆ ಕೆಸಗಳನ್ನ ಸಂಪೂರ್ಣವಾಗಿ ಹಿಂಪಡೆದಿಲ್ಲ ..ಹಾಗೂ ಇನ್ನೂ ಹಲವು 6 ಬೇಡಿಕೆಗಳನ್ನು ಇಟ್ಟುಕೊಂಡು ಹುಬ್ಬಳ್ಳಿ ವಲಯದ 4 ವಿಭಾಗದ ನೌಕರರ ಅವಲಂಬಿತರು ಕುಟುಂಬಸ್ಥರು ಇವತ್ತು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಕೇಂದ್ರ ಕಚೇರಿ ಹುಬ್ಬಳ್ಳಿ ಇಲ್ಲಿ ಮಾನ್ಯ ವ್ಯವಸ್ಥಾಪಕ ನಿರ್ದೇಶಕರಿಗೆ (ಎಂಡಿ) ರವರಿಗೆ ಮನವಿ ಮಾಡಿ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಲಾಯಿತು.
ನ್ಯಾಯ ಸಿಗದೆ ಹೋದಲ್ಲಿ ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಹೋರಾಟಕ್ಕೆ ಸಾರಿಗೆ ನೌಕರರ ಕುಟುಂಬಸ್ಥರು ಧರಣಿ ಸತ್ಯಾಗ್ರಹಕ್ಕೆ ಕೂತು ಸರ್ಕಾರಕ್ಕೆ ಬಿಸಿ ಮುಟ್ಟಿಸುವ ಕೆಲಸ ಮಾಡುತ್ತೇವೆ ಎಂದು ತಿಳಿಸಲಾಯಿತು …
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟ
ಬೆಳಗಾವಿ ವಿಭಾಗದ ಕೂಟದ ಗೌರವ ಅಧ್ಯಕ್ಷರು .
(ಮಹೇಶ ಎಸ್ ಶಿಗೀಹಳ್ಳಿ)
ಹಾಗೂ ಸಾರಿಗೆ ನೌಕರರ ಕುಟುಂಬಸ್ಥರು ಬಾಗಿ ಆಗಿದ್ದರು.*****************************






