ಗ್ರಾಮೀಣ ಭಾಗದ ಮಹಿಳೆಯರು ಸರ್ಕಾರದ ವಿವಿಧ ಯೋಜನೆಗಳ ಮೂಲಕ ಸ್ವಾವಲಂಬಿ ಬದುಕು ರೂಪಿಸಿಕೊಳ್ಳಿ: ಬಸವರಾಜ ಹೆಗ್ಗನಾಯಕ…!!

ಪ್ರಕೃತಿ ಬೆಳಗಾವಿ ಸುದ್ದಿ : ಬೆಳಗಾವಿ : ಗ್ರಾಮಿಣ ಭಾಗದ ಮಹಿಳೆಯರನ್ನು ಆರ್ಥಿಕ ಸ್ವಾವಲಂಬಿಯಾಗಿಸಲು ಸರ್ಕಾರದ ಸಂಜೀವಿನಿ ಯೋಜನೆಯಡಿ ಸ್ವ- ಸಹಾಯ ಸಂಘಗಳ ಮೂಲಕ ಸಮಾಜದ ಮುಖ್ಯ ವಾಹಿನಿಗೆ ಕೊಂಡಯ್ಯುಲು ಸಹಾಯವಾಗಲಿದೆ. ಇದರಿಂದ ಗ್ರಾಮೀಣದಲ್ಲಿರುವ ಮಹಿಳೆಯರು ಸ್ವo ಉದ್ಯೋಗಳನ್ನು ಸೃಷ್ಟಿಸಿ ಸ್ವಾವಲಂಬಿ ಬದುಕು ರೂಪಿಸಿಕೊಳ್ಳಬಹುದು ಎಂದು ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಬಸವರಾಜ ಹೆಗ್ಗನಾಯಕ ತಿಳಿಸಿದರು.
ಜಿಲ್ಲಾ ಪಂಚಾಯತ್ ವತಿಯಿಂದ ಮಹಾತ್ಮಾ ಗಾಂಧೀಜಿ 155ನೇ ಜನ್ಮದಿನಾಚರಣೆ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಯವರ ದಿನಾಚರಣೆ ಅಂಗವಾಗಿ (ಅ.2) ಬುಧವಾರ ಮಚ್ಚೆ ಜಿಲ್ಲಾ ಪಂಚಾಯತ್ ಸಂಪನ್ಮೂಲ ಕೇಂದ್ರದಲ್ಲಿ ಖಾನಾಪೂರ ತಾಲೂಕಿನ ಸಂಜೀವಿನಿ ಯೋಜನೆಯ ಮಹಿಳಾ ಸ್ಥಳೀಯ ಸಮುದಾಯಗಳ ಸಂಪನ್ಮೂಲ ವ್ಯಕ್ತಿಗಳ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಹಾತ್ಮಾ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಯವರು ದೇಶದ ಪ್ರತಿಯೊಬ್ಬರಿಗೂ ಪ್ರೇರಣೆದಾಯಕ. ಅವರ ಆದರ್ಶ ವ್ಯಕ್ತಿತ್ವ, ಸಂದೇಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ದೇಶವನ್ನು ಪ್ರಗತಿಪರ ರಾಷ್ಟ್ರವನ್ನಾಸೋಣ ಎಂದು ಹೇಳಿದರು.
ಸರ್ಕಾರದ ಯೋಜನೆಗಳು ಪ್ರತಿಯೊಂದು ಬಡವರ ಮನೆ ಮನೆಗೆ ತಲಪಿಸುವ ಗುರಿಯನ್ನು ಹೊಂದಿದೆ. ಹಾಗಾಗಿ ಆತ್ಮವಿಶ್ವಾಸದಿಂದ ಸಮಾಜದಲ್ಲಿ ಮುಂದೆ ಬರಬೇಕು ಎಂಬುದು ಈ ತರಬೇತಿಯ ಪ್ರಮುಖ ಉದ್ದೇಶ. ಮಹಿಳೆಯರು ಪ್ರತಿಯೊಂದು ಕ್ಷೇತ್ರದಲ್ಲಿ ಜ್ಞಾನ, ಶಿಸ್ತು, ಕ್ರಿಯಾಶೀಲ, ಕೌಶಲ್ಯ, ಹೆಚ್ಚಿಸಿಕೊಂಡು ಸಮಾಜದ ಮುಖ್ಯ ವಾಹಿನಿಗೆ ಬರಬೇಕು ಎಂದು ಬಸವರಾಜ ಹೆಗ್ಗನಾಯಕ ಅವರು ಸಲಹೆ ನೀಡಿದರು.
ಸಂಪನ್ಮೂಲ ವ್ಯಕ್ತಿಗಳಾಗಿ ಮಾತನಾಡಿದ ಅಬ್ದುಲ ನಝೀರ್ ಸಾಬ್, ಎಚ್ ಲಕ್ಷ್ಮಣ ಅವರು ತರಬೇತಿಯ ರೂಪರೇಷೆ, ಅಗತ್ಯತೆ ಹಾಗೂ ಸರ್ಕಾರದ ಆಶಯ ಕುರಿತು ಮಾತನಾಡಿದರು.
ಇದೇ ವೇಳೆ ಮಾತನಾಡಿದ ಮತ್ತೋರ್ವ ಸಂಪನ್ಮೂಲ ವ್ಯಕ್ತಿ ಮಲ್ಲಿಕಾರ್ಜುನ ಪೂಜಾರ, ಜಿಲ್ಲಾ ಪಂಚಾಯತ್ ಸಂಪನ್ಮೂಲ ಕೇಂದ್ರ ಮಹಿಳೆಯರ ಕಲ್ಯಾಣಕ್ಕಾಗಿರುವ ವರದಾನವಾಗಿದೆ ಎಂದು ಪ್ರೇರಣಾತ್ಮಕವಾಗಿ ನುಡಿದರು.
ಸ್ವ ಸಹಾಯ ಸಂಘಗಳ ಸದಸ್ಯರಾದ ಪವಿತ್ರಾ ಕಾಂಬಳೆ, ಪೂನಂ ಮಡಿವಾಳಕರ, ಅಶ್ವಿನಿ ಸಾವಂತ, ಜ್ಯೋತಿ ಕಾಕತಕರ, ಮಾಯಾ ಗುರವ, ಅರ್ಚನಾ, ಅನಿಷಾ ಪಾಟೀಲ, ಪವಿತ್ರಾ ಹಿರೇಕರ, ಗಂಗೂಬಾಯಿ ಮಂದಾರ, ಸುಜಾತಾ ದಬಾಳೆ, ಶ್ವೇತಾ ಬಂಡಿವಡ್ಡರ, ದಿಕ್ಷಾ ಲೋಹಾರ, ರೇಖಾ ಪಾಟೀಲ, ವಿದ್ಯಾ ಬಾತಕಾಂಡೆ, ಶಾಹಿದಾ ಫರಸ, ಸುಜಾತಾ ನಾಯ್ಕ, ಪವಿತ್ರಾ ಹಿರೇಕರ ಲಕ್ಶ್ಮಿ ದಳವಿ, ಗೀತಾ ಕುಂಡಲಕರ, ಸೋನು ಮುತ್ನಾಳ, ಮಂಜುಳಾ, ಶಾಂತಾ ರಾಮ, ಪೂಜಾ, ಬಿರೇಶ ದತ್ತವಾಡೆ, ಮಾಹಾನಿಂಗ ಮಾದರ, ಶಾಹಿದ ಮಾಹುತ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.*************************






