ಪ್ರಕೃತಿ ಬೆಳಗಾವಿಬೆಳಗಾವಿರಾಜಕೀಯರಾಜ್ಯ

ಗದಗ ಜಿಲ್ಲೆಯ ಲಕ್ಷ್ಮೇಶ್ವರ ಹೆಣ್ಣು ಮಕ್ಕಳ ಸ ಮಾ ಪ್ರಾ ಶಾಲೆಯಲ್ಲಿ ಪೋಷಣ ಅಭಿಯಾನ…!!

ಪ್ರಕೃತಿ ಬೆಳಗಾವಿ ಸುದ್ದಿ : ಅಪೌಷ್ಟಿಕತೆ, ಸಮಾಜದ ಮೇಲೆ ಅದರ ಪ್ರಭಾವ ಮತ್ತು ಆರೋಗ್ಯಕರ ಮತ್ತು ಸಮತೋಲಿತ ಆಹಾರದ ಮೌಲ್ಯವನ್ನು ತಿಳಿಸಲು ವಿದ್ಯಾರ್ಥಿಗಳೊಂದಿಗೆ ಚಟುವಟಿಕೆಗಳನ್ನು ಆಯೋಜಿಸಲಾಗುತ್ತಿದೆ. ಪೌಷ್ಟಿಕಾಂಶದ ಆಹಾರಗಳು ಮತ್ತು ಅವುಗಳ ಪ್ರಯೋಜನಗಳು, ಆಹಾರಗಳ ವೈಜ್ಞಾನಿಕ ಹೆಸರು, ದೈನಂದಿನ ಆಹಾರ ಮತ್ತು ಆರೋಗ್ಯಕರ ಜೀವನಶೈಲಿಯ ಬಗ್ಗೆ ಹೆಚ್ಚು ಸಕ್ರಿಯ ಜಾಗೃತಿಯನ್ನು ತರಲು ಗಮನಹರಿಸಲಾಗಿದೆ ಎಂದು ಸಿ ಆರ್ ಪಿ ಸತೀಶ ಬೊಮಲೆ ಮಾತನಾಡಿದರು.

ಇಂದು ಇಲಾಖೆಯ ನಿರ್ದೇಶನದ ಮೇರೆಗೆ ಸರ್ಕಾರಿ ಮಾದರಿ ಕನ್ನಡ ಹೆಣ್ಣು ಮಕ್ಕಳ ಶಾಲೆ ಲಕ್ಷ್ಮೇಶ್ವರ ಇಲ್ಲಿ ಪೋಷಣ ಅಭಿಯಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಮಕ್ಕಳು ಮತ್ತು ಸಮುದಾಯದ ಪೌಷ್ಟಿಕ ಆರೋಗ್ಯವನ್ನು ಸುಧಾರಿಸಲು, ಪೋಶನ್ ಅಭಿಯಾನವನ್ನು 2018 ರಲ್ಲಿ ಭಾರತದಾದ್ಯಂತ ಪ್ರಾರಂಭಿಸಲಾಯಿತು ಎಂದು ಮುಖ್ಯ ಶಿಕ್ಷಕರಾದಯ ಬಿ ಎಮ್ ಕುಂಬಾರ ಹೇಳಿದರು.

ಈ ಸಂದರ್ಭದಲ್ಲಿ ಶಾಲೆಯ ಸಹ ಶಿಕ್ಷಕರಾದ ಆರ್ ಎಮ್ ಶಿರಹಟ್ಟಿ, ಎಚ್ ಡಿ ನಿಂಗರೆಡ್ಡಿ, ಸ್ವಪ್ನಾ ಕಾಳೆ, ಅಕ್ಷತಾ ಕಾಟಿಗರ, ಲಕ್ಷ್ಮಿ ಹತ್ತಿಕಟ್ಟಿ, ಆರ್ ಕೆ ಉಪನಾಳ ಹಾಗೂ ಶಾಲೆಯ ಅಡುಗೆ ಸಿಬ್ಬಂದಿಯವರಾದ ರಜೀಯಾ ನಧಾಫ್, ಶಶಿಕಲಾ ರಾಯಭಾಗಿ ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.**********************

Back to top button