ಪ್ರಕೃತಿ ಬೆಳಗಾವಿಬೆಳಗಾವಿರಾಜಕೀಯ
SCP -TSP ಅನುದಾನದಲ್ಲಿ ಯುವಕರಿಗೆ ಕ್ರೀಡಾ ಸಾಮಾನುಗಳನ್ನು ಮಂಜೂರು ಮಾಡುವಂತೆ ಯುವ ಕರ್ನಾಟಕ ಭೀಮ್ ಸೇನೆಯ ರಾಜ್ಯಾಧ್ಯಕ್ಷ ಪ್ರವೀಣ್ ಆರ್ ಮಾದರ್ ಮನವಿ ಸಲ್ಲಿಸಿದರು…!!
ಪ್ರಕೃತಿ ಬೆಳಗಾವಿ ಸುದ್ದಿ : ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ನಿಟ್ಟೂರ ಗ್ರಾಮ ಪಂಚಾಯತಿ ವ್ಯಾಪ್ತಿಯ ಪ್ರಭುನಗರದ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಯುವ ಜನತೆಗೆ ಡಾ|| ಬಾಬಾ ಸಾಹೇಬ ಅಂಬೇಡ್ಕರ ಜಯಂತಿಯ ಡಾ| ಬಾಬು ಜಗಜೀನರಾಮ ಇನ್ನುಳಿದ ಎಲ್ಲಾ ಮಹಾಪುರುಷರ ಜಯಂತಿಗಳನ್ನು ಆಚರಿಸಿರುತ್ತಾ ಬಂದಿರುತ್ತಾರೆ.
ಆದರೆ ಇತ್ತಿಚಿನ ದಿನಗಳಲ್ಲಿ ಯಾವುದೇ ಕಾರ್ಯಕ್ರಮ ಮಾಡಲು ನಿರ್ಧರಿಸಿದಾಗ ಧ್ವನಿ ವರ್ದಕ ಇರುವುದಿಲ್ಲ. ಇದರಿಂದ ನಮ್ಮ ಸಮುದಾಯದ ಜನರಿಗೆ ಮೀಸಲಿಟ್ಟ 25% ಅನುದಾನದಲ್ಲಿ ತಾವು ಸೌಂಡ ಸಿಸ್ಟಮ್ ಹಾಗೂ ಧ್ವನಿ ವರ್ದಕ ಕ್ರೀಡಾ ಸಾಮಾನುಗಳನ್ನು ಈ ಕೂಡಲೇ ಮಂಜೂರು ಮಾಡಿ ಕೊಡಬೇಕೆಂದು, ಯುವ ಕರ್ನಾಟಕ ಭೀಮ್ ಸೇನೆ ಯುವ ಶಕ್ತಿ ಸಂಘಟನೆಯ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಶ್ರೀಯುತ ಪ್ರವೀಣ್ ಆರ್ ಮಾದರ್ ನಿಟ್ಟೂರು ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿ ವಿನಂತಿ ಮಾಡಿಕೊಂಡರು.**********************






