ಬೆಳಗಾವಿಯ ಪ್ರವಾಸಿ ಮಂದಿರದಲ್ಲಿ ತಿಗಣೆಗಳ ಹಾವಳಿ. ಸ್ವಚ್ಛತೆ ಕಾಪಾಡುವಲ್ಲಿ ಎಡುವಿದ ಮ್ಯಾನೇಜ್ಮೆಂಟ್…!!
ಪ್ರಕೃತಿ ಬೆಳಗಾವಿ ಸುದ್ದಿ : ರಾಜ್ಯದ ಎರಡನೇ ರಾಜಧಾನಿ ಬೆಳಗಾವಿಯ ಹೆಸರಾಂತ ಪ್ರವಾಸಿ ಮಂದಿರಕ್ಕೆ ದಿನ ನಿತ್ಯ ಸಚಿವರು ಶಾಸಕರುಗಳು ಮಂತ್ರಿಗಳು ಮುಖಂಡರು ಬರುತ್ತಾರೆ. ಆದರೆ ಬೆಳಗಾವಿಯ ಪ್ರವಾಸಿ ಮಂದಿರದಲ್ಲಿ ಸ್ವಚ್ಚತೆ ಕಾಪಾಡುವಲ್ಲಿ ಮ್ಯಾನೇಜ್ಮೆಂಟ್ ವಿಫಲವಾಗಿದೆ.
ಪ್ರವಾಸಿ ಮಂದಿರದ ಕೊಠಡಿಗಳಲ್ಲಿ ತಿಗಣೆಗಳ ಹಾವಳಿ ಹೆಚ್ಚಾಗಿದ್ದು ಅಸ್ವಚ್ಛತೆ ಎದ್ದುಕಾಣುತ್ತಿದೆ. ಸ್ವಚ್ಛತೆಗಾಗಿ ಹಾಗೂ ನಿರ್ವಹಣೆಗಾಗಿ ಸರ್ಕಾರದಿಂದ ಲಕ್ಷ ಲಕ್ಷ ಹಣವನ್ನು ಪಡೆದುಕೊಳ್ಳುತ್ತಾರೆ. ಹಾಗೂ ಸಿಬ್ಬಂದಿಗಳನ್ನು ನೇಮಕ ಮಾಡಿರುತ್ತಾರೆ ಆದರೆ ಪ್ರವಾಸಿ ಮಂದಿರದಲ್ಲಿ ಅದೆ ಹಳೆಯ ಬೆಡ್ಶೀಟ್ ಬೆಡ್ಡ್ ಹಾಗೂ ಹೋತಿಕೆಗಳು ಇದ್ದು ಒಬ್ಬರು ಉಪಯೋಗಿಸಿದ ವಸ್ತುಗಳನ್ನೇ ಇನ್ನೊಬ್ಬರು ನಿರಂತರವಾಗಿ ಉಪಯೋಗಿಸುವಂತಾಗಿದೆ. ಅದೆ ಅಸ್ವಚ್ಛತೆ ಇದರಿಂದ ತಿಗಣೆಗಳ ಹಾವಳಿ ಹೆಚ್ಚಾಗಿದ್ದು ಪ್ರವಾಸಿ ಮಂದಿರಕ್ಕೆ ವಿಶ್ರಾಂತಿಗೆ ಬಂದ ಜನರ ರಕ್ತವನ್ನು ಹಿರಲು ತಿಗಣೆಗಳು ಸಜ್ಜಾಗಿದ್ದಾವೆ.
ನಿರ್ವಹಣೆಗಾಗಿ ಲಕ್ಷ ಲಕ್ಷ ಹಣವನ್ನು ತೆಗೆದುಕೊಳ್ಳುವ ಅಧಿಕಾರಿಗಳು ಸರಿಯಾದ ನಿರ್ವಹಣೆ ಮಾಡದೆ ಬೇಜವಾಬ್ದಾರಿ ವಹಿಸಿದ್ದು ಖಂಡನೀಯ ಇದಕ್ಕೆ ಸಂಬಂಧ ಪಟ್ಟ ಅಧಿಕಾರಿಗಳು ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಹಾಗೂ ವಿಶ್ರಾಂತಿಗೆ ಬರುವ ಮಂತ್ರಿಗಳೇ ತಿಗಣೆಗಳು ಇದ್ದಾವೆ ಎಚ್ಚರಿಕೆ . ಆದಷ್ಟು ಬೇಗ ಅಧಿಕಾರಿಗಳು ಸ್ವಚ್ಛತೆ ಕಾಪಾಡುವಲ್ಲಿ ಜಾಗೃತಿ ವಹಿಸಬೇಕಾಗಿದೆ. ಇಲ್ಲವಾದರೆ ಬೆಳಗಾವಿ ಪ್ರವಾಸಿ ಮಂದಿರ ಬರುವಂತಹ ದಿನಗಳಲ್ಲಿ ತಿಗಣೆಗಳ ದಾನ್ನ ಆಗುವ ಸಂಶಯವೇ ಇಲ್ಲ.************************






